ಬಿಡುಗಡೆಗೂ ಮುನ್ನ ‘ಟಾಕ್ಸಿಕ್’ 32.5 ಕೋಟಿ ಕಲೆಕ್ಷನ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆಗೂ ಮುನ್ನ ಬಾಕ್ಸ್ ಆಫೀಸ್‌ನಲ್ಲಿ ಅಡ್ವಾನ್ಸ್ ಟಿಕೆಟ್ ಮಾರಾಟದಿಂದ  32.52 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.

ಅಡ್ವಾನ್ಸ್ ಬುಕಿಂಗ್‌ನಲ್ಲಿ ಕನ್ನಡ ಹಾಗೂ ಹಿಂದಿ ಆವೃತ್ತಿಗಳು ಮುಂಚೂಣಿಯಲ್ಲಿವೆ.  ಕನ್ನಡ 2D ಆವೃತ್ತಿಯೊಂದರಲ್ಲಿ   2.55 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿವೆ. ಬೆಂಗಳೂರಿನಲ್ಲಿ ಅಡ್ವಾನ್ಸ್ ಬುಕಿಂಗ್ ಮೂಲಕ 8.83 ಕೋಟಿಗೂ ಅಧಿಕ ಮೊತ್ತ ಸಂಗ್ರಹವಾಗಿದೆ.

ಹಿಂದಿ ಡಬ್ಬಿಂಗ್ ಆವೃತ್ತಿಯ  3.18 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿವೆ ಎಂದು ವರದಿಯಾಗಿದೆ.  ತಮಿಳು ಆವೃತ್ತಿಯಿಂದ  42.32 ಲಕ್ಷ, ಮಲಯಾಳಂ ಆವೃತ್ತಿಯಿಂದ  18.36 ಲಕ್ಷ ಹಾಗೂ ತೆಲುಗು ಆವೃತ್ತಿಯಿಂದ  13 ಲಕ್ಷಕ್ಕೂ ಅಧಿಕ ಅಡ್ವಾನ್ಸ್ ಬುಕಿಂಗ್  ದಾಖಲಾಗಿದೆ ಎಂದು ವರದಿಯಾಗಿದೆ.

 ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’  ಚಿತ್ರದ ಆರಂಭಿಕ ಕಲೆಕ್ಷನ್ ಕುರಿತು ಬಾಕ್ಸ್ ಆಫೀಸ್ ವಲಯದಲ್ಲಿ ಭಾರೀ ನಿರೀಕ್ಷೆ ಮೂಡಿದೆ. ಮೊದಲ ದಿನ  ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ  100 ಕೋಟಿಯಿಂದ 120 ಕೋಟಿವರೆಗೆ ಗಳಿಸಬಹುದು ಎಂದು  ಕೇಳಿ ಬರುತ್ತಿವೆ.

ಆಗಸ್ಟ್ 26ರಂದು ‘ಟಾಕ್ಸಿಕ್’ ಚಿತ್ರಮಂದಿರಗಳಲ್ಲಿ  ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಗೀತು ಮೋಹನ್‌ದಾಸ್ ನಿರ್ದೇಶನ, ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿರುವ ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಹಾಗೂ ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!