ಸ್ಯಾಂಡಲ್ವುಡ್ ನಟಿ ಶರ್ಮಿಳಾ ಮಾಂಡ್ರೆ ಹಾಗೂ ತಮಿಳು ಚಿತ್ರ ನಿರ್ಮಾಪಕ ಸುಧನ್ ಸುಂದರಂ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಮದುವೆಯಾದ 4 ತಿಂಗಳಲ್ಲೇ ಈ ಜೋಡಿ ತಮ್ಮ ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ. ದಂಪತಿ ಈ ಸುದ್ದಿಯನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಫೋಟೋದಲ್ಲಿ ಶರ್ಮಿಳಾ ಮತ್ತು ಪತಿ ಸುಧನ್ ಸುಂದರಂ ಪರಸ್ಪರ ಕೈಹಿಡಿದುಕೊಂಡಿದ್ದು, ತಮ್ಮ ಬೆರಳುಗಳಲ್ಲಿ ಪುಟ್ಟ ಮಗುವಿನ ಬಿಳಿ ಬಣ್ಣದ ಬೂಟುಗಳನ್ನು ಧರಿಸಿದ್ದಾರೆ. ‘ಮುಂದೆ ಪುಟ್ಟ ಹೆಜ್ಜೆಗಳು ಎಂದು ಬರೆದುಕೊಂಡಿದ್ದಾರೆ.

ಶರ್ಮಿಳಾ ಪೋಸ್ಟ್ಗೆ ಅಭಿಮಾನಿಗಳು, ಸಿನಿ ತಾರೆಯರು ಹಾಗೂ ಸ್ನೇಹಿತರು ಶುಭಾಶಯ ಕೋರುತ್ತಿದ್ದಾರೆ. ಶರ್ಮಿಳಾ ಮಾಂಡ್ರೆ ಹಾಗೂ ಸುಧನ್ ಸುಂದರಂ ಜುಲೈ 12 ರಂದು ಜೈಪುರದ ಸಮೋದ್ ಅರಮನೆಯಲ್ಲಿ ಮದುವೆಯಾಗಿದ್ದರು. ಬೆಂಗಳೂರಿನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು.
—–





Be the first to comment