ಜಗ್ಗೇಶ್‌ಗೆ ರಚಿತಾ ರಾಮ್ ಜೋಡಿ

ನಾಗರಾಜ್ ಪೀಣ್ಯ ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರಕ್ಕೆ ಮೊದಲ ಬಾರಿಗೆ ನಟ ಜಗ್ಗೇಶ್‌ ಮತ್ತು ರಚಿತಾ  ರಾಮ್ ತೆರೆ ಹಂಚಿಕೊಳ್ಳಲು ಸಜ್ಜಾಗಿದ್ದಾರೆ.

ಇನ್ನೂ ಹೆಸರಿಡದ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್  ಬೆಳ್ಳಿ ಪರದೆಯಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. ಜಗ್ಗೇಶ್ ಅವರ ಇತ್ತೀಚಿನ ಕೆಲವು ಚಿತ್ರಗಳು ಅರ್ಥಪೂರ್ಣ ಕಥೆಯನ್ನು ಒಳಗೊಂಡಿದ್ದರೂ, ಅವು ವಯಸ್ಕರ ಹಾಸ್ಯ ಮತ್ತು ದ್ವಂದ್ವ ಅರ್ಥ ಬರುವ ರೀತಿಯಲ್ಲಿದ್ದವು.  ನಿರ್ದೇಶಕ ಮತ್ತು ನಟ ಇಬ್ಬರೂ ಮುಂಬರುವ ಚಿತ್ರವನ್ನು   ಕೌಟುಂಬಿಕ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲು ಯೋಜಿಸಿದ್ದಾರೆ.

‘ಪದೇ ಪದೇ’, ‘ಭೂತಯ್ಯನ ಮೊಮ್ಮೊಗ ಅಯ್ಯು’ ಮತ್ತು ‘ನಮಕ್ ಹರಾಮ್’ ಚಿತ್ರಗಳನ್ನು ನಿರ್ದೇಶಿಸಿದ್ದ ನಾಗರಾಜ್ ಪೀಣ್ಯ   ಸದ್ಯ ನಿರೂಪ್ ಭಂಡಾರಿ ನಟನೆಯ ‘ಅತಿಕಾಯ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅವರು ಜಗ್ಗೇಶ್ ಮತ್ತು ರಚಿತಾ ರಾಮ್ ಚಿತ್ರಕ್ಕಾಗಿ ಸ್ಕ್ರಿಪ್ಟ್ ಅನ್ನು ಅಂತಿಮಗೊಳಿಸಿದ್ದಾರೆ. ಸದ್ಯ ಚಿತ್ರದ ಪ್ರೀ-ಪ್ರೊಡಕ್ಷನ್ ಭರದಿಂದ ಸಾಗುತ್ತಿದೆ.

ರಚಿತಾ ರಾಮ್  ಕೊನೆಯದಾಗಿ ಸತೀಶ್ ನೀನಾಸಂ ನಟನೆಯ ‘ಅಯೋಗ್ಯ 2’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಅವರು ಮೊದಲ ಬಾರಿಗೆ ನಿರ್ದೇಶಕಿಯಾಗುತ್ತಿರುವ ನಟಿ ಮಾನ್ವಿತಾ ಕಾಮತ್ ಅವರ ಮುಂಬರುವ ಯೋಜನೆಯಲ್ಲಿ ನಟಿಸಲಿದ್ದಾರೆ. ವಿಜಯ್ ಪ್ರಸಾದ್ ಅವರ ಮುಂದಿನ ಚಿತ್ರಕ್ಕೂ ಗ್ರೀನ್ ಸಿಗ್ನಲ್ ನೀಡಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!