ಹೆಸರೇ ಹೇಳುವಂತೆ ‘ಜಾಕಿ 42’ ಎನ್ನುವುದು ರೇಸ್ ಕುರಿತಾದ ಕಥೆ. ಆದರೆ ರೇಸ್ ಬಗ್ಗೆ ಆಸಕ್ತಿ ಇರದ ತಾನು ಹೇಗೆ ರೇಸ್ ಸ್ಪರ್ಧೆಯನ್ನು ನೋಡಿದ್ದೆ, ಮತ್ತು ಇದೀಗ ರೇಸ್ ಬಗ್ಗೆ ಅರಿವಿಲ್ಲದ ನಾಯಕ ಕಿರಣ್ ರಾಜ್ ಜತೆ ಸೇರಿ ಹೇಗೆ ರೇಸ್ ಬಗ್ಗೆ ಸಿನೆಮಾ ಮಾಡಿದ್ದೇನೆ ಎಂದು ನಿರ್ದೇಶಕ ಗುರುತೇಜ್ ಶೆಟ್ಟಿ ವಿವರವಾಗಿ ಹೇಳಿದ್ದಾರೆ.
“ನಾನು ಒಂದು ದಿನ ನನ್ನ ಕರ್ಕೊಂಡು ಹೋಗಿ ನನಗೆ ಅಲ್ಲಿ ರೇಸ್ ತೋರ್ಸು ಅಂತ ಅಂದೆ. ಅದೇ ಒಂದು ವಾರದಲ್ಲಿ ಅದೇನೋ ಡರ್ಬಿ ರೇಸ್ ಅಂತ ಏನೋ ಒಂದು ಸ್ಪೆಷಲ್ ರೇಸ್ ಇತ್ತು. ಕರ್ಕೊಂಡು ಹೋದ. ಆದರೆ ಅಲ್ಲಿ ಏನೂ ಅರ್ಥ ಆಗ್ಲಿಲ್ಲ. ನನಗೆ ಅನಿಸ್ತು, ಇದು ಅರ್ಥ ಮಾಡಿಕೊಳ್ಳಬೇಕು ಅಂದ್ರೆ ನಾನು ಪಂಟರ್ ಆಗಬೇಕು.
ಪಂಟರ್ ಅಂದ್ರೆ ಆ ರೇಸ್ ಭಾಷೆಯಲ್ಲಿ ಬೆಟ್ಟಿಂಗ್ ಆಡಿ ಗೆಲ್ಲುವವನು. ಆದರೆ ನನಗೆ ಈ ಜೂಜಾಡೋದು ಇದೆಲ್ಲ ಅಭ್ಯಾಸ, ಆಸಕ್ತಿ ಎರಡೂ ಇರಲಿಲ್ಲ. ಹಾಗಾಗಿ ಅದಾದಮೇಲೆ ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ಜರ್ನಿ ಶುರು ಮಾಡಿದೆ. ಹಾಗೆ ನನಗೆ ಕಿರಣರಾಜ್ ಸಿಕ್ಕರು. ‘ರಾನಿ’ ಅಂತ ಒಂದು ಸಿನಿಮಾ ಮಾಡಿದಾಗ ಅದಕ್ಕೆ ಒಳ್ಳೆಯ ಪ್ರಶಂಸೆ ಸಿಕ್ಕಿತು. ಉತ್ತಮ ಟೆಕ್ನಿಷಿಯನ್ ತುಂಬಾ ಚೆನ್ನಾಗಿ ಮಾಡಿದ್ದೀರಾ ಎನ್ನುವ ಹೊಗಳಿಕೆ ಸಿಕ್ಕಿತು. ಅದಾದ್ಮೇಲೆ ಇನ್ನು ಏನಾದ್ರೂ ಹೊಸದಾಗಿ ಮಾಡಬೇಕಲ್ಲ ಅಂತ ಒಂದು ಶುರುವಾಯಿತು.
ಆಗ ನಾನು ಕಿರಣ್ ರಾಜ್ ಅವರ ಮನೆಗೆ ಹೋಗ್ತಾ ಇದ್ದೆ. ಅವರ ತಾಯಿ ಅಡುಗೆ ಮಾಡಿ ಊಟ ಕೊಡ್ತಿದ್ರು, ಅಲ್ಲೇ ಊಟ ಮಾಡೋದು, ಅಲ್ಲೇ ಮಲಗೋದು ಇದೆಲ್ಲ ನಡೀತಾ ಇತ್ತು. ಯಾಕಂದ್ರೆ ಕಿರಣರಾಜ್ ಅವರನ್ನು ಏನೋ ಒಂದು ಮಾಮೂಲಿ ಕಾನ್ಸೆಪ್ಟ್ ಮೂಲಕ ಅಷ್ಟು ಬೇಗ ಅವರಿಗೆ ಇಷ್ಟಪಡಿಸೋಕೆ ಆಗಲ್ಲ. ಅವರು ಏನಾದ್ರೂ ಅವಕಾಶ ಸಿಕ್ಬಿಟ್ರೆ ಸ್ಪೇಸ್ ಅಲ್ಲಿ ಹೋಗಿ ಸ್ಕ್ರಿಪ್ಟ್ ಮಾಡಿ, ಅಲ್ಲೇ ಶೂಟಿಂಗ್ ಮಾಡಿ, ಅಲ್ಲೇ ಸಿನಿಮಾ ರಿಲೀಸ್ ಮಾಡಿ, ಜನಗಳಿಗೆ ಬೇಕಾದ್ರೆ ಅಲ್ಲೇ ತೋರಿಸಿಬಿಡ್ತಾರೆ. ಸೊ ಯಾವಾಗಲೂ ನಾನು ಅವರನ್ನ ಸ್ವಲ್ಪ ಕಂಟ್ರೋಲ್ ಗೆ ಹೇಳ್ತಾ ಇರ್ತೀನಿ, ಸ್ಪೇಸ್ ಗೆ ಹೋಗ್ಬೇಡಿ, ನಾವು ಪ್ರೇಮ ಲೋಕದಲ್ಲಿ ಇದ್ದೀವಿ ಈಗ ಅಂತ. ಆ ತರಹ ಒಂದು ಡಿಸ್ಕಶನ್ ಮಾಡೋ ಟೈಮಲ್ಲಿ ನಮಗೆ ‘ಜಾಕಿ 42’ ಅಂತ ಏನೋ ಗೂಗಲ್ ಅಲ್ಲಿ ಸರ್ಚ್ ಮಾಡ್ತಾ ಇರುವಾಗ ಏನೋ ಸಿಕ್ಕಿತ್ತು. ಅವರು ಇದನ್ನ ಸಿನಿಮಾ ಮಾಡೋಣ ಅಂದ್ರು. ಇದು ಏನ್ ಮಾಡೋದು ಸಿನಿಮಾ? ಆ ಟೈಟಲ್ ಅಲ್ಲಿ ಏನ್ ಸಿನಿಮಾ ಮಾಡೋದು? ಇಲ್ಲ ಈ ರೇಸ್ ಬ್ಯಾಕ್ಡ್ರಾಪ್ ಬಗ್ಗೆ ಯಾರು ಸಿನಿಮಾ ಮಾಡಿಲ್ಲ. ಇದನ್ನ ಮಾಡಿದ್ರೆ ಚೆನ್ನಾಗಿರುತ್ತೆ ಅಂದ್ರು. ಆದರೆ ಇಬ್ಬರಿಗೂ ಈ ರೇಸ್ ಬಗ್ಗೆ ನಮ್ಮಿಬ್ಬರಿಗೂ ಅಷ್ಟು ಜ್ಞಾನ ಇರ್ಲಿಲ್ಲ.
ಆಗ ನಮ್ಮ ನಮಗೆ ಇಬ್ಬರಿಗೂ ಕಾಮನ್ ಫ್ರೆಂಡಾಗಿರುವ ಅರುಣ್ ಆಚಾರ್ ಬಂದರು. ಅವರು ಆರ್ಟಿಸ್ಟ್. ‘ಜಾಕಿ 42’ ಅಲ್ಲಿ ಪ್ರಮುಖ ಖಳನಾಗಿ ಮಾಡಿದ್ರು. ಅವರಿಗೆ ಸ್ವಲ್ಪ ಆ ರೇಸ್ ಬಗ್ಗೆ ನಾಲೆಡ್ಜ್ ಇತ್ತು. ಅವರಿಗೂ ಕುದುರೆ ಇತ್ತು, ಅವರ ಫ್ರೆಂಡ್ಸ್ ಎಲ್ಲಾ ಹಾರ್ಸ್ ರೇಸ್ ಇದರಲ್ಲಿ ಇದ್ರು. ಅವರು ಒಂದಿಷ್ಟು ಒಂದಿಷ್ಟು ಐಡಿಯಾ, ಬೇಸಿಕ್ ನಾಲೆಡ್ಜ್ ಕೊಟ್ರು. ಆದರೆ ಏನೋ ಹೊಸದಾಗಿ ಒಂದು ಎಕ್ಸ್ಪಿರಿಮೆಂಟ್ ಮಾಡ್ತೀವಿ ಅಂದಾಗ ಇದಕ್ಕೆ ಒಬ್ಬ ಒಳ್ಳೆ ಪ್ರೊಡ್ಯೂಸರ್ ಬೇಕಿತ್ತು. ನನಗೆ ಮತ್ತು ಸತ್ಯನಾರಾಯಣ ಸರ್ ಅವರಿಗೆ ಕಾಮನ್ ಫ್ರೆಂಡ್ ಮಂಜುನಾಥ್ ಪಾಟೀಲ್ ಸಿಕ್ಕರು. ಅವರು ನನಗೆ ಸತ್ಯ ಸರ್ ನ ಪರಿಚಯ ಮಾಡ್ತಾರೆ. ಆಮೇಲೆ ಅವರು ಪತ್ನಿ ಭಾರತಿ ಮೇಡಂ ನ ಮೀಟ್ ಮಾಡಿಸಿದ್ರು. ಅವರಿಬ್ಬರು ಸೇರಿ ಸ್ಕ್ರಿಪ್ಟನ್ನು ಒಂದು ಹತ್ತು ಸಾರಿ ರೀಡಿಗೆ ತಗೊಂಡಿದ್ದಾರೆ. ಅವರು ಯಾವುದೇ ಕಾಂಪ್ರಮೈಸ್ ಗೆ ಅವಕಾಶ ಇರದ ಪರ್ಫೆಕ್ಷನಿಸ್ಟ್. ಗೋಲ್ಡನ್ ಗೇಟ್ ಸ್ಟುಡಿಯೋ ಹೆಂಗೆ ಒಂದು ಬ್ಯಾನರ್ ಅವರು ಮಾಡಿದ್ದಾರೆ. ಸೊ ಸಿನಿಮಾ ಕೂಡ ಒಂದು ಗೋಲ್ಡ್ 24 ಕ್ಯಾರೆಟ್ ಸಿನಿಮಾನೇ ಅವರು ಮಾಡ್ತಾರೆ. ಇನ್ನು ಮುಂದೆ ಕೂಡ ಅದೇ ತರ ಮಾಡ್ತಾರೆ ಅಂತ ಒಂದು ಒಳ್ಳೆ ಪ್ರೊಡ್ಯೂಸರ್ ನಮಗೆ ಇದಕ್ಕೆ ಸಿಕ್ಕಿದ್ದಕ್ಕೆ ನಮಗೆ ಈ ಎಕ್ಸ್ಪಿರಿಮೆಂಟ್ ಮಾಡೋಕೆ ಅನುಕೂಲ ಆಯ್ತು” ಎಂದರು ನಿರ್ದೇಶಕ ಗುರುತೇಜ್ ಶೆಟ್ಟಿ.
“ಜಾಕಿ 42 ಅಲ್ಲಿ ಬರೀ ರೇಸ್ ಇಲ್ಲ. ಇಲ್ಲಿ ಹಾರ್ಸ್ ರೇಸ್ ಜೊತೆಯಲ್ಲಿ ಒಂದು ಒಳ್ಳೆಯ ಫ್ಯಾಮಿಲಿ ಎಮೋಷನ್ಸ್ ಇದೆ, ಲವ್ ಇದೆ, ತುಂಬಾ ಇಂಟರೆಸ್ಟಿಂಗ್ ಎಲಿಮೆಂಟ್ಸ್ ಗಳು ಎಲ್ಲಾ ಇದೆ. ತುಂಬಾ ಒಳ್ಳೊಳ್ಳೆಯ ಕಲಾವಿದರು ಇದರಲ್ಲಿ ಆಕ್ಟ್ ಮಾಡಿದ್ದಾರೆ. ನಮ್ಮ ಹೀರೋಯಿನ್ ರಿತಿಕಾ ಇರಬಹುದು, ಅವರು ಒಳ್ಳೆಯ ಕಲಾವಿದೆ ಅಷ್ಟೇ ಅಲ್ಲ, ಒಳ್ಳೆಯ ಹುಡುಗಿ.
ಯಾಕಂದ್ರೆ ನಮಗೆ ಪ್ಲಾನ್ ಇರ್ತಿರ್ಲಿಲ್ಲ. ಪ್ಲಾನ್ ಇರ್ತಿರ್ಲಿಲ್ಲ ಅಂದ್ರೆ ನಾವು ರೇಸ್ ಕೋರ್ಸ್ ಒಳಗಡೆ ಶೂಟ್ ಮಾಡ್ತಾ ಇದ್ವಿ.
ಅಲ್ಲಿ ಅಷ್ಟು ನಮಗೆ ಕಂಫರ್ಟೇಬಲ್ ಆಗಿ ನಾವು ಏನು ಬೇಕಾದರೂ ಮಾಡೋ ತರ ಇರಲಿಲ್ಲ. ನಾವು ಏನೋ ಒಂದು ಪ್ಲಾನ್ ಮಾಡ್ಕೊಂಡು ಹೋದ್ರೆ ಅಲ್ಲಿ ಹೋಗಿ ಬದಲಾಗೋದು ಅದು. ಆರ್ಟಿಸ್ಟ್ ಗೆ ಒಂದು ಟೈಮ್ ಕೊಟ್ರೆ ಆ ಟೈಮ್ ಅಲ್ಲಿ ನಮಗೆ ಅವರಿಗೆ ಶಾಟ್ ತೆಗೆಯೋಕೆ ಆಗ್ತಾ ಇರ್ಲಿಲ್ಲ. ಎಷ್ಟೋ ಸಾರಿ ಬೆಳಿಗ್ಗೆ ಬಂದು ಸಾಯಂಕಾಲ ಒಂದು ಶಾಟ್ ತೆಗೆದು ಕಳಿಸಿದ್ದು ಇದೆ ಇವರಿಗೆ. ಅದೇ ಬೆಳಿಗ್ಗೆ ಬಂದು ಖುಷಿಯಲ್ಲೇ ಅದೇ ಎಕ್ಸ್ಪ್ರೆಶನ್ ಅಲ್ಲೇ ಅವರು ಸಾಯಂಕಾಲ ಹೋಗ್ತಾ ಇದ್ರು. ಸೊ ಥ್ಯಾಂಕ್ ಯು ರಿತಿಕಾ.
ಹಾಗೆ ಇನ್ನು ತುಂಬಾ ದೊಡ್ಡ ಕಲಾವಿದರು ಮಾಡಿದ್ದಾರೆ, ರಾಜೇಂದ್ರ ಕಾರಂತ್ ಸರ್ ಅವರಿಗೆ ಈ ಸಿನಿಮಾದಲ್ಲಿ ಒಂದು ಒಳ್ಳೆಯ ಕ್ಯಾರೆಕ್ಟರ್ ನೀಡಿದ್ದೇವೆ. ಅವರು ತುಂಬಾ ಚೆನ್ನಾಗಿ ಅದನ್ನ ನಿಭಾಯಿಸಿದ್ದಾರೆ.
ಹಾಗೆಯೇ ಮಧುಸೂದನ್, ದೀಪಕ್ ರೈ ಪಾಣಾಜೆ ಅವರು ಇದ್ದಾರೆ. ಕಾಂತಾರ ಖ್ಯಾತಿಯ ಅವರೇ ನಮ್ಮ
ಕಿರಣರಾಜ್ ಅವರ ತಂದೆ ಪಾತ್ರ ಮಾಡಿದ್ದಾರೆ. ನಮ್ಮ ಡಿಓಪಿ ಜೊತೆ ಇದು ನಮ್ಮ ಎರಡನೇ ಸಿನಿಮಾ” ಎಂದು ಖುಷಿ ವ್ಯಕ್ತಪಡಿಸಿದರು ಗುರುತೇಜ್.
” ರೇಸ್ ಎನ್ನುವುದು ಸುಮಾರು 7 ರಿಂದ 8,೦೦೦ ಕೋಟಿ ರೂಪಾಯಿ ಒಂದು ವರ್ಷಕ್ಕೆ ಟರ್ನ್‌ಒವರ್ ಮಾಡುವಂತಹ ಒಂದು ಪ್ರೊಫೆಷನ್. ಆದರೆ ಆ ದುಡ್ಡೆಲ್ಲ ಎಲ್ಲಿ ಹೋಗುತ್ತೆ? ನನ್ನ ಪ್ರಶ್ನೆ ರೇಸ್ ಕೋರ್ಸ್‌ಗೆ ಹೊರಗೆ ಬರೋರೆಲ್ಲ ತಲೆ ಕೆಳಗೆ ಹಾಕೊಂಡು ಬರ್ತಿರ್ತಾರೆ. ಹಾಗಾದ್ರೆ ಆ ದುಡ್ಡೆಲ್ಲ ಎಲ್ಲಿ ಹೋಗುತ್ತೆ?
ಸೊ ಈ ತರ ತುಂಬಾ ವಿಷಯಗಳು ಈ ಸಿನಿಮಾದಲ್ಲಿ ಇದೆ. ಅದೇ ರೀತಿ ಇದು ಮೊದಲು ಟ್ರೆಡಿಷನಲ್ ಸ್ಪೋರ್ಟ್ಸ್ ಆಗಿತ್ತು. ಆಮೇಲೆ ಜೂಜಾಯಿತು. ಈ ಬೆಟ್ಟಿಂಗ್ ಆಕ್ಟಿವಿಟಿ ಅನ್ನೋದು ರೇಸ್ ನ ಹೊರತಾಗಿರುವಂತದ್ದು. ಇದು ಬೆಟ್ಟಿಂಗ್ ಅಲ್ಲ. ಆಕ್ಚುಲಿ ನೀವು ಅದರ ಬಗ್ಗೆ ಸ್ಟಡಿ ಮಾಡಿದ್ರೆ ಇದೊಂದು ಸಾಂಪ್ರದಾಯಿಕ ಕ್ರೀಡೆ ಅಂತಾನೆ ಬರುತ್ತೆ . ಇವತ್ತು ಕಬಡ್ಡಿ ಮತ್ತೊಂದು ಇನ್ನೊಂದು ಎಲ್ಲದರಲ್ಲೂ ಬೆಟ್ಟಿಂಗ್ ನಡೀತಾ ಇದೆ. ಆ ಮೈಂಡ್ ಸೆಟ್ ತುಂಬಾ ಇರೋವರಿಗೆ ಏನು ಆ ಸಿನಿಮಾ ತುಂಬಾ ಚೆನ್ನಾಗಿ ಕನೆಕ್ಟ್ ಆಗುತ್ತೆ. ಅವರ ಫ್ಯಾಮಿಲಿ ಅವರಿಗೆ ಅವರ ಫ್ರೆಂಡ್ಸ್ ಗೆ ನನ್ನ ಫ್ರೆಂಡ್ ನಮ್ಮ ಹಂಗಿದ್ದ ನನ್ನ ಮಗ ಹಂಗಿದ್ದ ನಮ್ಮ ಅಣ್ಣ ಹಂಗಿದ್ದ ಅನ್ನೋದು ಆ ತರದೆಲ್ಲ ಅವರಿಗೆ ಕನೆಕ್ಟ್ ಆಗುತ್ತೆ ಎನ್ನುವ ನಂಬಿಕೆ ಇದೆ” ಎಂದರು ಗುರುತೇಜ್.





Be the first to comment