ತೆಲುಗು ಸ್ಟಾರ್ ನಟಿ ಸಮಂತಾ ರುತ್ ಪ್ರಭು ನಟನೆಯ ಬಹುನಿರೀಕ್ಷಿತ ‘ಮಾ ಇಂಟಿ ಬಂಗಾರಂ’ ಸಿನಿಮಾದ ಬಿಡುಗಡೆ ಮುಂದೂಡಲಾಗಿದೆ.
ಈ ಮೊದಲು ಮೇ 15ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ಘೋಷಣೆ ಮಾಡಲಾಗಿತ್ತು. ಆದರೆ ಈಗ ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಪೂರ್ಣವಾಗಿಲ್ಲ. ಅಲ್ಲದೇ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಸಿನಿಮಾಗಳ ಕ್ಲ್ಯಾಶ್ ಕಾರಣದಿಂದ ಚಿತ್ರತಂಡ ಹೊಸ ದಿನಾಂಕದತ್ತ ಬಿಡುಗಡೆಗೆ ಮುಖ ಮಾಡಿದೆ.
ಹೊಸ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಘೋಷಣೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ಟೀಸರ್ ಮತ್ತು ಹಾಡುಗಳು ಬಿಡುಗಡೆಯಾಗಿ ಸಿನಿಪ್ರಿಯರಲ್ಲಿ ಕುತೂಹಲ ಉಂಟು ಮಾಡಿದೆ. ಸಮಂತಾ ಮುದ್ದು ಸೊಸೆಯ ಪಾತ್ರದ ಜೊತೆಗೆ ಪವರ್‌ಫುಲ್ ಆಕ್ಷನ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದ ನಟ ದಿಗಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಸಿನಿಮಾವನ್ನು ನಿರ್ದೇಶಕಿ ಬಿವಿ ನಂದಿನಿ ರೆಡ್ಡಿ ನಿರ್ದೇಶಿಸಿದ್ದಾರೆ. ಸಮಂತಾ ಮತ್ತು ನಂದಿನಿ ರೆಡ್ಡಿ ಕಾಂಬಿನೇಷನ್‌ನ ಎರಡನೇ ಸಿನಿಮಾ ಇದಾಗಿದೆ. ನಿರ್ದೇಶಕ ರಾಜ್ ನಿಧಿಮೋರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ತೀರ್ಥಹಳ್ಳಿಯಲ್ಲಿ ಚಿತ್ರದ ಪ್ರಮುಖ ಚಿತ್ರೀಕರಣ ಮಾಡಲಾಗಿದೆ.





Be the first to comment