ಅಜನೀಶ್ ಲೋಕನಾಥ್

ಮೇ 16ರಂದು ಅಜನೀಶ್ ಲೋಕನಾಥ್ ಮ್ಯೂಸಿಕ್ ಕಾನ್ಸರ್ಟ್

ಕನ್ನಡದ ಸ್ಟಾರ್‌ ಸಂಗೀತ ನಿರ್ದೇಶಕರ ಪಟ್ಟಿಯಲ್ಲಿ ಪ್ರಮುಖರಾಗಿರುವ ಅಜನೀಶ್‌ ಲೋಕನಾಥ್‌. ‘ಉಳಿದವರು ಕಂಡಂತೆ’ ಚಿತ್ರದ ಮೂಲಕ ಖ್ಯಾತರಾಗಿ ‘ರಂಗಿತರಂಗ’, ‘ವಿಕ್ರಾಂತ್‌ ರೋಣ’, ‘ಕಿರಿಕ್‌ ಪಾರ್ಟಿ’, ‘ಅಕಿರ’, ‘ಅವನೇ ಶ್ರೀಮನ್ನಾರಾಯಣ’, ‘ಬೆಲ್‌ ಬಾಟಂ’, ‘ಕಾಂತಾರ’, ಮಾರ್ಕ್ ಸೇರಿದಂತೆ ಹಲವು ಸೂಪರ್‌ ಹಿಟ್‌ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿ ಜನಪ್ರಿಯರಾದವರು. ಕನ್ನಡ ಮಾತ್ರವಲ್ಲ ಪರಭಾಷೆಯಲ್ಲಿಯೂ ಬ್ಯುಸಿಯಾಗಿರುವ ಅಜನೀಶ್ ಲೋಕನಾಥ್ ಇದೀಗ ಕನ್ನಡದಲ್ಲಿ ಮ್ಯೂಸಿಕ್ ಕಾನ್ಸರ್ಟ್ ಹಮ್ಮಿಕೊಂಡಿದ್ದಾರೆ.

ಅಜನೀಶ್ ಲೋಕನಾಥ್ ನೇತೃತ್ವದಲ್ಲಿ ಇದೇ ತಿಂಗಳ‌ 16ರಂದು ಕನ್ನಡದ ಮೊದಲ ಮ್ಯೂಸಿಕ್ ಕಾನ್ಸರ್ಟ್ ನಡೆಯುತ್ತಿದೆ. ಈ ಬಗ್ಗೆ ನಿನ್ನೆ ಬೆಂಗಳೂರಿನ ಉತ್ಸವ್ ಲೆಗಸಿಯಲ್ಲಿ ಸುದ್ದಿಗೋಷ್ಟಿಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅಜನೀಶ್ ಲೋಕನಾಥ್, ಲಹರಿ ಮುಖ್ಯಸ್ಥ ವೇಲು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಬಿ.ಅಜನೀಶ್ ಲೋಕನಾಥ್, ಇಂಡಸ್ಟ್ರಿಯಲ್ ಕೆಲಸ ಶುರು ಮಾಡಿದ್ದು 2023ರಲ್ಲಿ. ಕೆ ಕಲ್ಯಾಣ್ ಸರ್ ಜೊತೆ ಸೆಷನ್ ಮ್ಯೂಸಿಷನ್ ಆಗಿ, ಆರೆಂಜರ್ ಆಗಿ ಕೆಲಸ ಮಾಡಿ, ತುಂಬಾ ಇಷ್ಟಪಟ್ಟು ಐದಾರು ವರ್ಷದ ಪ್ರಯತ್ನದ ಬಳಿಕ 2009ರಲ್ಲಿ ಮೊದಲ ಸಿನಿಮಾ ರಿಲೀಸ್ ಆಯ್ತು.‌ ಶಿಶಿರ ಸಿನಿಮಾದಿಂದ ಒಳ್ಳೆ ಹೆಸರು ಸಿಕ್ತು. ಉಳಿದವರು ಕಂಡಂತೆ ಸಿನಿಮಾ ನನ್ನ ಜೀವನದ ಟರ್ನಿಂಗ್ ಪಾಯಿಂಟ್. ಈ 13 ವರ್ಷದಲ್ಲಿ ನನ್ನ ಫೋಕಸ್ ಇದಿದ್ದು ಒಳ್ಳೆ ಸಾಂಗ್ ಮಾಡಬೇಕು. ಅದು ಈಗ ಆಗಿದೆ. ಎಲ್ಲರೂ ಕಾನ್ಸರ್ಟ್ ಏಕೆ ಮಾಡೋಲ್ಲ ಎಂದು‌ ಕೇಳುತ್ತಿದ್ದರು. ACTC ಕಂಪನಿ ಕಡೆಯಿಂದ ಈಗ ಮ್ಯೂಸಿಕ್ ಕಾನ್ಸರ್ಟ್ ಮಾಡುತ್ತಿದ್ದೇವೆ. ಕಾನ್ಸರ್ಟ್ ಲೈವ್ ಇರೋಲ್ಲ. ಒಂದೊಂದು ಹಾಡಿಗೆ ಫರ್ಪಾಮೆನ್ಸ್, ವಿಷ್ಯುವಲ್ಸ್ ಇರುತ್ತದೆ. ಸಂಗೀತ ಮೇನ್ ಆಗಿ ಇರಲಿದೆ ಎಂದರು.

ಎಲ್ಲಿ ನಡೆಯಲಿದೆ? ಯಾರೆಲ್ಲಾ ಹಾಡಲಿದ್ದಾರೆ.?

ಬಿ. ಅಜನೀಶ್ ಲೋಕನಾಥ್ ಅವರ ಮ್ಯೂಸಿಕ್ ಕಾನ್ಸರ್ಟ್ ಬೆಂಗಳೂರಿನ ಭಾರತೀಯ ಮಾಲ್ ನಲ್ಲಿ ನಡೆಯಲಿದೆ. ಈ ಕನ್ಸರ್ಟ್ ನಲ್ಲಿ ವಿಜಯ್ ಪ್ರಕಾಶ್, ಮಂಗ್ಲಿ, ನಕಾಶ್ ಅಜೀಜ್, ಅನನ್ಯ ಭಟ್, ಸಾನ್ವಿ ಸುದೀಪ್, ಸಂಜಿತ್ ಹೆಗ್ಡೆ, ಹರಿಶಂಕರ್, ಅಬ್ಬಿ ವಿ, ವಾಸುಕಿ ವೈಭವ್, ಅನಿರುದ್ಧ್ ಶಾಸ್ತ್ರೀ, ಐಶ್ವರ್ಯ ರಂಗರಾಜನ್, ರಾಮ್‌ದಾಸ್, ಸಾಯಿ ವಿಘ್ನೇಶ್, ಹರಿಶಿಕಾ, ಬಾಬಿ ಸೇರಿದಂತೆ ಹಲವರು ಕಂಠ ಕುಣಿಸಲಿದ್ದಾರೆ‌.

ಹೆಚ್ಚಿನ ಮಾಹಿತಿಗಾಗಿ ACTC events ಸೋಷಿಯಲ್ ಮೀಡಿಯಾ ಫಾಲೋ ಮಾಡಿ.

Be the first to comment

Leave a Reply

Your email address will not be published. Required fields are marked *

Translate »
error: Content is protected !!