ಮಲಯಾಳಂ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ ಚಿದಂಬರಂ ಜೊತೆ ರಿಷಬ್ ಶೆಟ್ಟಿ ಸ್ಪೋರ್ಟ್ಸ್ ಡ್ರಾಮಾ ಸಿನಿಮಾಗಾಗಿ ಕೈ ಜೋಡಿಸಿದ್ದಾರೆ.
‘ಮಂಜುಮ್ಮೇಲ್ ಬಾಯ್ಸ್’ ಮೂಲಕ ಗಮನ ಸೆಳೆದ ನಿರ್ದೇಶಕ ಚಿದಂಬರಂ ಇತ್ತೀಚೆಗೆ ಬಿಡುಗಡೆಯಾಗಿ ಯಶಸ್ಸು ಕಂಡ ‘ಬಾಲನ್’ ಸಿನಿಮಾದ ಮೂಲಕವೂ ತಮ್ಮ ನಿರ್ದೇಶನದ ಸಾಮರ್ಥ್ಯ ತೋರಿಸಿದ್ದಾರೆ. ಮೊದಲ ಯೋಜನೆ ಸ್ಪೋರ್ಟ್ಸ್ ಡ್ರಾಮಾ ಆಗಿದ್ದು, ಚಿತ್ರದ ಪೂರ್ವಸಿದ್ಧತಾ ಕೆಲಸಗಳು ಈಗಾಗಲೇ ಆರಂಭಗೊಂಡಿವೆ. ಸಿನಿಮಾ ಮುಂದಿನ ವರ್ಷ ಸೆಟ್ಟೇರುವ ನಿರೀಕ್ಷೆಯಿದೆ.
ಈ ಯೋಜನೆಗೆ ಶಿಬು ತಮೀನ್ಸ್ ಬಂಡವಾಳ ಹೂಡಲಿದ್ದಾರೆ. ರಿಷಬ್ ಶೆಟ್ಟಿ ವಿಭಿನ್ನ ಕಥೆ ಮತ್ತು ಹೊಸ ಜಾನರ್‌ಗಳೊಂದಿಗೆ ಪ್ರಯೋಗ ಮಾಡುತ್ತಿರುವ ಹಿನ್ನೆಲೆಯಲ್ಲಿ ಸ್ಪೋರ್ಟ್ಸ್ ಡ್ರಾಮಾ ಮತ್ತೊಂದು ಹೊಸ ಪ್ರಯತ್ನವಾಗಲಿದೆ.
ಈ ಸಿನಿಮಾ ಚಿದಂಬರಂ ಅವರ ಮೊದಲ ಪ್ಯಾನ್ ಇಂಡಿಯಾ ಪ್ರಯತ್ನವಾಗುವ ಸಾಧ್ಯತೆಯಿದ್ದು, ರಿಷಬ್ ಅವರ ಜನಪ್ರಿಯತೆಯನ್ನೂ ಬಳಸಿಕೊಂಡು ದೊಡ್ಡ ಮಟ್ಟದಲ್ಲಿ ಚಿತ್ರವನ್ನು ರೂಪಿಸುವ ಯೋಜನೆ ಇದೆ.
ರಿಷಬ್ ಶೆಟ್ಟಿ ‘ಜೈ ಹನುಮಾನ್’ ಸಿನಿಮಾದಲ್ಲಿ ನಟಿಸುತ್ತಿದ್ದು, ಮುಂದಿನ ವರ್ಷದ ಆರಂಭದಲ್ಲಿ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದೆ. ಬಳಿಕ ಶಿವಾಜಿ ಮಹಾರಾಜರ ಜೀವನಾಧಾರಿತ ಹಿಂದಿ ಸಿನಿಮಾದಲ್ಲಿ ನಟಿಸಲಿದ್ದಾರೆ. ಆ ಚಿತ್ರ ಮುಗಿದ ಬಳಿಕ ಚಿದಂಬರಂ ನಿರ್ದೇಶನದ ಸಿನಿಮಾದಲ್ಲಿ ನಟಿಸುವ ಸಾಧ್ಯತೆಯಿದೆ.
—-





Be the first to comment