ಪಾರ್ಟ್ನರ್

‘ಪಾರ್ಟ್ನರ್’ ರಿಲೀಸಾಯ್ತು ಲವಲವಿಕೆ ಸಾಂಗ್

ಕೆಲ ಸಿನಿಮಾಗಳು ತನ್ನ ಕಂಟೆಂಟ್, ಸಾಂಗ್, ಮೇಕಿಂಗ್ ಮೂಲಕ ಸುದ್ದಿಯಾಗುತ್ತವೆ, ಇತ್ತೀಚೆಗೆ ‘ಪಾರ್ಟ್ನರ್’ ಚಿತ್ರವೂ ಸಹ ತನ್ನ ಮೆಲೋಡಿ ಹಾಡು, ಮೇಕಿಂಗ್ನಲ್ಲೇ ಸಿನಿರಸಿಕರ ಗಮನ ಸೆಳೆಯುತ್ತಿದೆ.

ಮಳೆ, ಧೈರ್ಯಂ, ದಿಲ್ ಪಸಂದ್ ಖ್ಯಾತಿಯ ಶಿವತೇಜಸ್ ಅವರ ಸಾರಥ್ಯದ ಮತ್ತೊಂದು ಲವ್, ಫ್ಯಾಮಿಲಿ ಎಂಟರ್ ಟೈನರ್ ಇದಾಗಿದ್ದು, ಚಿತ್ರದ ಅಮೋರಾ ಸಾಂಗ್ ವೈರಲ್ ಆಗಿರುವ ಬೆನ್ನಲ್ಲೇ ಇದೀಗ ಮತ್ತೊಂದು ಸಾಂಗ್ ಲವಲವಿಕೆ ರಿಲೀಸಾಗಿ, ಎಲ್ಲರನ್ನೂ ಆಕರ್ಷಿಸುತ್ತಿದೆ.

ಬೃಂದಾ ಆಚಾರ್ಯ, ಕೃಷ್ಣ ಅಜಯ್ ರಾವ್ ನಾಯಕ, ನಾಯಕಿಯಾಗಿ ನಟಿಸಿರುವ, ಈಗಿನ ಜಂಝಿಗ‌ಳ ಲೈಫ್ ಸ್ಟೈಲ್, ಲವ್, ಬ್ರೇಕಪ್, ಲಿವಿಂಗ್ ರಿಲೇಶನ್ ಶಿಪ್ ಸುತ್ತ ಸಾಗುವ ಕಥೆಯನ್ನು ಸುಂದರ ಮೆಸೇಜ್ ನೊಂದಿಗೆ ನಿರ್ದೇಶಕ ಶಿವತೇಜಸ್ ಹೇಳಹೊರಟಿದ್ದಾರೆ.

ಪಾರ್ಟ್ನರ್

ಕವಿರಾಜ್ ರಚನೆಯ ಲವಲವಿಕೆ ಹಾಡಿಗೆ ಮುರಳಿ ಮಾಸ್ಟರ್ ಕೊರಿಯಾಗ್ರಾಫ್ ಮಾಡಿದ್ದು, ಕಾರ್ತೀಕ್, ರಮ್ಯ ಅಭ್ಯಂಕರ್ ದನಿಯಾಗಿದ್ದಾರೆ. ನಕುಲ್ ಅಭಯಂಕರ್ ಅವರ ಸಂಗೀತ ಸಂಯೋಜನೆಯಲ್ಲಿ, ಸುಜ್ಞಾನ್ ಅವರ ಕ್ಯಾಮೆರಾದಲ್ಲಿ ಸೆರೆಯಾಗಿರುವ ಈ ಹಾಡನ್ನು ನಿರ್ಮಾಪಕರ ಆಧ್ಯಾತ್ಮಿಕ ಗುರುಗಳಾದ ರಂಗನಾಥ್ ಹಾಗೂ ಮಂಜುನಾಥ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಈ ವೇಳೆ ಮಾತನಾಡಿದ ಶಿವತೇಜಸ್ ಸಿನಮಾ ಅಂದುಕೊಂಡದ್ದಕ್ಕಿಂತ ಚನ್ನಾಗಿ ಬಂದಿದೆ. ಇದು ಚಿತ್ರದ ಎರಡನೇ ಸಾಂಗ್, ಕಲರ್ ಫುಲ್ ಆಗಿದೆ. ಪ್ರತಿ ಹಾಡನ್ನೂ ಒಂದೊಂದು ಕಲರ್ ಪ್ಯಾಟ್ರನ್ ನಲ್ಲಿ ಮಾಡಿದ್ದೇವೆ‌. ಲಕ್ಷ್ಮಿ ಕೃಷ್ಣ ಅವರು ಕಾಸ್ಟೂಮ್ ಡಿಸೈನ್ ಮಾಡಿದ್ದಾರೆ. ಪಾಂಡಿಚೇರಿ, ಬೆಂಗಳೂರಲ್ಲಿ ಶೂಟಿಂಗ್ ಮಾಡಿದ್ದು, ರಂಗಾಯಣ ರಘು, ಚಿತ್ಕಲಾ ಅಭಿನಯಿಸಿದ್ದಾರೆ‌. ಈಗಾಗಲೇ ಪ್ರೇಮದ ಊರಲಿ ಚಿತ್ರರಂಗಕ್ಕೆ ನವಚೇತನ ನೀಡಿದೆ. ನಮ್ಮದೂ ಫ್ಯಾಮಿಲಿ ಸಬ್ಜೆಕ್ಟ್. ಅದೇಥರ ಹಿಟ್ ಆಗುತ್ತೆ ಎಂಬ ನಂಬಿಕೆಯಿದೆ ಎಂದರು.

ನಿರ್ಮಾಪಕ ಹರೀಶ್ ದೇವಿತಂದ್ರೆ ಮಾತನಾಡುತ್ತ ನಾನು ಸಿನಿಮಾ ವಿತರಣೆ, ಚಾನೆಲ್ ನಲ್ಲಿ ಕೆಲಸ ಮಾಡುತ್ತಿದ್ದೆ, ಯಾವುದೇ ಮುಜುಗರ ಇಲ್ಲದೆ ಇಡೀ ಕುಟುಂಬಸಮೇತ ಕೂತು ನೋಡಬಹುದಾದ ಚಿತ್ರವಿದು. ಬ್ಯಸಿನೆಸ್ ದೃಷ್ಟಿ ಇಟ್ಟುಕೊಂಡೇ ಈ ಸಿನಿಮಾ ಮಾಡಿದ್ದೇನೆ. ಅದನ್ನು ಯಾವ ರೀತಿ ಜನರಿಗೆ ತಲುಪಿಸಬೇಕೆಂದು ಪ್ಲಾನ್ ಮಾಡುತ್ತಿದ್ದೇವೆ ಎಂದರು.

ಪಾರ್ಟ್ನರ್

ನಟ ಅಜಯ್ ರಾವ್ ಮಾತನಾಡುತ್ತ ನಿರ್ದೇಶಕರು ಹೇಳಿದ ಕಂಟೆಂಟ್ ನನಗೆ ತುಂಬಾ ಇಷ್ಟವಾಯ್ತು. ನನ್ನ ಮನಸಿಗೆ ತುಂಬಾ ಹತ್ತಿರವಾದ ಚಿತ್ರವಿದು. ಹಾಡುಗಳ ಹಾಗೇ ಸೀನ್ಸ್ ಕೂಡ ಕಲರ್ ಫುಲ್ ಆಗಿವೆ. ಚಿತ್ರದಲ್ಲಿ ಹ್ಯೂಮನ್ ವ್ಯಾಲ್ಯೂಸ್, ಎಮೋಷನ್ಸ್ ತುಂಬಾ ಚೆನ್ನಾಗಿ ಹೇಳಿದ್ದಾರೆ‌. ನಿರ್ದೇಶಕರ ಜತೆ ನನಗೆ ೨೫ ವರ್ಷಗಳ ಸ್ನೇಹ, ಚಿತ್ರದ ಟೈಟಲ್ ಹಾಗೇ ಒಳ್ಳೆಯ ಪಾರ್ಟ್ನರ್ ನಿರ್ಮಾಪಕರು ಸಿಕ್ಕಿದ್ದಾರೆ. ಈ ಚಿತ್ರದ ಮೇಲೆ ನನಗೆ ನೂರಕ್ಕೆ ನೂರರಷ್ಟು ನಂಬಿಕೆಯಿದೆ ಎಂದರು.

ನಾಯಕಿ ಬೃಂದಾ ಆಚಾರ್ಯ ಮಾತನಾಡಿ ಈ ಸಿನಿಮಾ ಮಾಡಬೇಕಾದರೆ ನಮ್ಮೆಲ್ಲರಲ್ಲೂ ಒಳ್ಳೇ ಬಾಂಡಿಂಗ್ ಇತ್ತು. ಅದು ಬಹಳ ಮುಖ್ಯ. ಆರಂಭದಲ್ಲಿ ಅಜಯ್ ಅವರು ಯಾರನ್ನೂ ಮಾತಾಡಿಸ್ತಿದ್ದಿಲ್ಲ, ಸಿಡುಕ್ಮೂತಿ ಸಿದ್ದಪ್ಪನ್ ಥರ ಇದ್ದರು, ಹೋಗ್ತಾ ಹೋಗ್ತಾ ಸ್ವೀಟ್ ಸಿದ್ದಪ್ಪ ಆಗಿ ಹೋದರು‌. ಹಾಡುಗಳ ಟೈಮಲ್ಲಿ ನನಗೆ ತುಂಬಾ ಹೇಳಿಕೊಟ್ಟರು ಎಂದು ನಾಯಕನನ್ನು ಹೊಗಳಿದರು.

ಹೆಚ್.ಪಿ.ಆರ್. ಎಂಟರ್ ಪ್ರೈಸಸ್ ಬ್ಯಾನರ್ ಅಡಿ ಹರೀಶ್ ದೇವಿತಂದ್ರೆ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸುಜ್ಞಾನ್ ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಅವರ ಸಂಕಲನ, ಈ ಚಿತ್ರಕ್ಕಿದೆ‌.

Be the first to comment

Leave a Reply

Your email address will not be published. Required fields are marked *

Translate »
error: Content is protected !!