‘ಜೈಲರ್ 2’ ಆಡಿಯೋ ಲಾಂಚ್ ರದ್ದಿಗೆ ವಿಜಯ್ ಕಾರಣ?

ರಜನಿಕಾಂತ್ ಅವರ ಮುಂಬರುವ ‘ಜೈಲರ್ 2’ ಚಿತ್ರದ  ಆಡಿಯೋ ಲಾಂಚ್ ಕಾರ್ಯಕ್ರಮ ರದ್ದಾಗಿದ್ದು, ಇದಕ್ಕೆ ತಮಿಳುನಾಡು ಸಿಎಂ  ದಳಪತಿ ವಿಜಯ್ ಅವರೇ ಕಾರಣ ಇರಬಹುದು ಎಂಬ ಚರ್ಚೆ  ಜೋರಾಗಿದೆ.

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನ ಮತ್ತು ಸನ್ ಪಿಕ್ಚರ್ಸ್ ನಿರ್ಮಾಣದ ‘ಜೈಲರ್ 2’  ಚಿತ್ರ  ಅ.15 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ.  ಈ ಬಾರಿ  ಬೃಹತ್ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಕೈಬಿಡಲಾಗಿದ್ದು ಅಭಿಮಾನಿಗಳಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸನ್ ಪಿಕ್ಚರ್ಸ್ ಸಂಸ್ಥೆ, ರಾಜಕೀಯ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಅನುಮತಿ ಸಿಗುವುದು ಕಷ್ಟ ಎಂಬ ಕಾರಣಕ್ಕೆ ಚಿತ್ರತಂಡ  ಹಿಂದೆ ಸರಿದಿದೆ ಎಂಬ ವದಂತಿ ಹಬ್ಬಿದೆ. ವಿಜಯ್   ಅವರಿಂದ ಅನುಮತಿ ಬೇಡುವುದು ಬೇಡ ಎಂದು  ರಜನಿಕಾಂತ್ ಅವರೇ ಈ ಈವೆಂಟ್ ಅನ್ನು ಬೇಡವೆಂದು ನಿರಾಕರಿಸಿದ್ದಾರೆ ಎಂಬ ಚರ್ಚೆಯೂ ಜೋರಾಗಿದೆ.

ಈ ಹಿಂದೆ ಚಿತ್ರದ ಆಡಿಯೋ ಲಾಂಚ್  ನ್ನು ಮಲೇಷ್ಯಾದಲ್ಲಿ ನಡೆಸಲು ವಿತರಕರು ಮುಂದಾಗಿದ್ದರು. ಆದರೆ ವಿಜಯ್ ಅವರ ‘ಜನನಾಯಕನ್’ ಆಡಿಯೋ ಲಾಂಚ್‌ಗೆ ಅದನ್ನು ಹೋಲಿಕೆ ಮಾಡಿ ವಿನಾಕಾರಣ ವಿವಾದ ಸೃಷ್ಟಿಯಾಗಬಾರದು ಎಂಬ ಉದ್ದೇಶದಿಂದ ರಜನಿಕಾಂತ್ ಆ ಪ್ರಸ್ತಾಪ  ತಿರಸ್ಕರಿಸಿದ್ದರು ಎನ್ನಲಾಗಿದೆ.

‘ಜೈಲರ್ 2’ ಚಿತ್ರತಂಡ ಯಾವುದೇ ಅನಗತ್ಯ ವಿವಾದಕ್ಕೆ ಅಥವಾ ಭದ್ರತಾ ಲೋಪದ ಅಪಾಯಕ್ಕೆ ಸಿಲುಕದಂತೆ  ಚಾಣಾಕ್ಷ ತಂತ್ರವನ್ನು ರೂಪಿಸಿದ್ದು ಅಕ್ಟೋಬರ್ 11 ರಂದು ಸನ್ ಟಿವಿಯಲ್ಲಿ ಸಂಜೆ 6.30 ರಿಂದ 9.30 ರವರೆಗೆ ರಜನಿಕಾಂತ್ ಮತ್ತು  ಚಿತ್ರತಂಡದ ಅಪರೂಪದ 3 ಗಂಟೆಗಳ ವಿಶೇಷ ಸಂದರ್ಶನ ಪ್ರಸಾರವಾಗಲಿದೆ. ಇದರ ಮೂಲಕ  ರಜನಿಕಾಂತ್ ತಮ್ಮ ಎಂದಿನ ಸ್ಟೈಲ್‌ನಲ್ಲಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ ಎನ್ನಲಾಗಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!