‘ಜೈಲರ್ 2’ ಟ್ರೇಲರ್‌ಗೆ ಮಿಶ್ರ ಪ್ರತಿಕ್ರಿಯೆ

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ, ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾದ ಟ್ರೇಲರ್ ಸೋಮವಾರ ಸಂಜೆ ಬಿಡುಗಡೆಯಾಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೆಲ ಅಭಿಮಾನಿಗಳು ನೆಲ್ಸನ್ ಅವರ ಡಾರ್ಕ್ ಕಾಮಿಡಿ ಮತ್ತು ಆಕ್ಷನ್ ದೃಶ್ಯಗಳನ್ನು ಮೆಚ್ಚಿಕೊಂಡಿದ್ದಾರೆ. ಮತ್ತೊಂದೆಡೆ  ‘ಜೈಲರ್’ ಮೊದಲ ಭಾಗ ನೀಡಿದ್ದ ರೋಚಕತೆ  ಟ್ರೇಲರ್‌ನಲ್ಲಿ ಕಾಣಿಸುತ್ತಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

2023ರ ಬ್ಲಾಕ್‌ಬಸ್ಟರ್ ‘ಜೈಲರ್’ ಚಿತ್ರದ ಮುಂದುವರಿದ ಭಾಗವಾಗಿರುವ ಸಿನಿಮಾದಲ್ಲಿ ರಜನಿಕಾಂತ್,  ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್‌ನಲ್ಲಿ ಟೈಗರ್ ಮುತ್ತುವೇಲ್ ಪಾಂಡಿಯನ್   ಹೊಸ ಜೀವನದ ಪರಿಚಯವಾಗುತ್ತದೆ. ನ  ಹಳೆಯ ಘಟನೆಗಳ ಬಳಿಕ ಮಾಜಿ ಜೈಲರ್ ಮುತ್ತುವೇಲ್ ಪಾಂಡಿಯನ್  ಡ್ರೈವರ್ ಆಗಿ ಕೆಲಸ ಮಾಡುತ್ತಿರುವುದು ಕಂಡು ಬಂದಿದೆ. ಪಾಂಡಿಯನ್  ಇತಿಹಾಸ ತಿಳಿಯದವರಿಂದ ಅವಮಾನ ಎದುರಿಸುವ ದೃಶ್ಯಗಳೂ ಟ್ರೇಲರ್‌ನಲ್ಲಿವೆ.

ಟೈಗರ್‌ನನ್ನು ಮೂಲೆಗೆ ತಳ್ಳಿದಾಗ ಕಥೆ ಮತ್ತೊಂದು ತಿರುವು ಪಡೆಯುವ ಸೂಚನೆ ಸಿಕ್ಕಿದೆ.  ಹಳೆಯ ರೌದ್ರಾವತಾರಕ್ಕೆ ಮುತ್ತುವೇಲ್ ಪಾಂಡಿಯನ್ ಮರಳುವ ಸುಳಿವು ಟ್ರೇಲರ್‌ನಲ್ಲಿ ಕಾಣಿಸಿದೆ. ಬಾಲಿವುಡ್ ನಟಿ ವಿದ್ಯಾ ಬಾಲನ್ ಈ ಸಿನಿಮಾದ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದು, ಪಾತ್ರದ ವಿವರ  ಸಸ್ಪೆನ್ಸ್ ಆಗಿದೆ. ಎಸ್.ಜೆ. ಸೂರ್ಯ, ಮಿಥುನ್ ಚಕ್ರವರ್ತಿ ಮತ್ತು ವಿದ್ಯಾ ಬಾಲನ್  ಎದುರಾಳಿಗಳಾಗಿ ಕಾಣಿಸಿಕೊಂಡಿದ್ದಾರೆ.

ಶಿವರಾಜ್‌ಕುಮಾರ್, ಮೋಹನ್‌ಲಾಲ್, ಜಾಕಿ ಶ್ರಾಫ್  ಮತ್ತೆ ಕಾಣಿಸಿಕೊಂಡಿದ್ದಾರೆ. ಕಾರು ತೊಳೆಯುತ್ತಿರುವ ರಜನಿಕಾಂತ್ ಸಾಲು  ಹೆಣಗಳು ಬಿದ್ದರೂ ಏನೂ ಆಗಿಲ್ಲದಂತೆ ವರ್ತಿಸುವ ದೃಶ್ಯವನ್ನು ಯೋಗಿ ಬಾಬು ತಮಾಷೆಯಾಗಿ ಹೇಳುವುದರೊಂದಿಗೆ ಟ್ರೇಲರ್ ಮುಕ್ತಾಯಗೊಳ್ಳುತ್ತದೆ.

ಸನ್ ಪಿಕ್ಚರ್ಸ್ ನಿರ್ಮಾಣದ ‘ಜೈಲರ್ 2’ ಸಿನಿಮಾ ಅಕ್ಟೋಬರ್ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!