ಸಂತೋಷ್ ಬಾಲರಾಜ್ ಪುಣ್ಯತಿಥಿಯಂದು ‘ರತ್ನಗರ್ಭ’ ಫಸ್ಟ್ ಲುಕ್ ರಿಲೀಸ್

ಸಂತೋಷ್ ಬಲರಾಜ್ ಅವರ ಮೊದಲ ಪುಣ್ಯತಿಥಿಯಾದ ಆಗಸ್ಟ್ 5 ರಂದು ‘ರತ್ನಗರ್ಭ’  ಚಿತ್ರದ ‘ಫಸ್ಟ್-ಲುಕ್’ ಮತ್ತು ‘ಮೋಷನ್ ಪೋಸ್ಟರ್‌’ಗಳನ್ನು ಅನಾವರಣಗೊಳಿಸಲು ಚಿತ್ರತಂಡ ನಿರ್ಧರಿಸಿದೆ.

ಬೆಂಗಳೂರಿನ ರಾಗಿಗುಡ್ಡ ಮೆಟ್ರೋ ನಿಲ್ದಾಣದ ಬಳಿ ನಡೆಯಲಿರುವ ವಿಶೇಷ ಕಾರ್ಯಕ್ರಮವೊಂದರಲ್ಲಿ ಆಗಸ್ಟ್ 5ರ ಸಂಜೆ 7 ಗಂಟೆಗೆ ಚಿತ್ರದ ‘ಫಸ್ಟ್-ಲುಕ್’ ಪೋಸ್ಟರ್ ಮತ್ತು ‘ಮೋಷನ್ ಪೋಸ್ಟರ್’  ಅನಾವರಣಗೊಳಿಸಲಾಗುವುದು. ಸಂತೋಷ್ ಅವರ ಅಂತಿಮ ಚಿತ್ರವನ್ನು ಪ್ರೇಕ್ಷಕರಿಗೆ ಪರಿಚಯಿಸುವ ಮುನ್ನ ಚಿತ್ರತಂಡದ ಸದಸ್ಯರು, ಕುಟುಂಬಸ್ಥರು ಮತ್ತು ಹಿತೈಷಿಗಳು  ಅವರನ್ನು ಸ್ಮರಿಸಲಿದ್ದಾರೆ.

ಅಶೋಕ್ ಕಡಬ ನಿರ್ದೇಶನ  ಹಾಗೂ ‘ಶ್ರೀ ಮಾತಾ ಕ್ರಿಯೇಷನ್ಸ್’ ಬ್ಯಾನರ್ ಅಡಿಯಲ್ಲಿ ಮಹಾಂತೇಶ್ ವಿಕೆ ನಿರ್ಮಿಸಿರುವ ‘ರತ್ನಗರ್ಭ’ ಚಿತ್ರದಲ್ಲಿ ಸಂತೋಷ್ ಅವರು ತಮ್ಮ ಹಿಂದಿನ ಚಿತ್ರಗಳಿಗಿಂತ ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂತೋಷ್ ಅವರ ನಿಧನದ ನಂತರ ಚಿತ್ರವನ್ನು  ಯೋಜಿಸಿದಂತೆಯೇ ಪೂರ್ಣಗೊಳಿಸುವ ಉದ್ದೇಶದಿಂದ ಚಿತ್ರತಂಡ ಉಳಿದಿರುವ ಸಣ್ಣಪುಟ್ಟ ದೃಶ್ಯಗಳ ಪ್ಯಾಚ್‌ವರ್ಕ್ ಚಿತ್ರೀಕರಣ ,ವಿಎಫ್‌ಎಕ್ಸ್ ಮತ್ತು ಪೋಸ್ಟ್-ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿದೆ. ಸದ್ಯ ಈ ಚಿತ್ರ  ಪೋಸ್ಟ್-ಪ್ರೊಡಕ್ಷನ್‌ನ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ತೆರೆ ಕಾಣಲಿದೆ.

‘ರತ್ನಗರ್ಭ’ ಚಿತ್ರದಲ್ಲಿ ಸಂತೋಷ್ ಬಾಲರಾಜ್ ಅವರಿಗೆ ಜೋಡಿಯಾಗಿ ರಂಜನಿ ರಾಘವನ್ ನಟಿಸಿದ್ದಾರೆ. ಸುಮನ್, ವಿನಯಾ ಪ್ರಸಾದ್, ಸಯಾಜಿ ಶಿಂಧೆ, ಅವಿನಾಶ್, ಪವಿತ್ರಾ ಲೋಕೇಶ್, ಮುಖ್ಯಮಂತ್ರಿ ಚಂದ್ರು ಮತ್ತು ಎಂಎಸ್ ಉಮೇಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರಕಥೆಯನ್ನು ಜನಾರ್ದನ್ ಪಿ. ಜಾನಿ ಬರೆದಿದ್ದು, ಅವರು ಚಿತ್ರದ ಸೃಜನಶೀಲ ನಿರ್ದೇಶಕ   ಮತ್ತು ವಿಎಫ್‌ಎಕ್ಸ್  ಮೇಲ್ವಿಚಾರಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ರವಿ ಬಸ್ರೂರು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಗೋಪಾಲ್ ವೆಂಕಟೇಶ್ ಮತ್ತು ಎಟಿ ರವೀಶ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸಿನೆಟೆಕ್ ಸೂರಿ ಛಾಯಾಗ್ರಹಣ,  ಸುರೇಶ್ ಅರಸ್ ಮತ್ತು ಕುಮಾರ್ ಹೆಚ್. ಸಂಕಲನಕಾರರಾಗಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!