ಕ್ಯಾಬ್ ಚಾಲಕನಾಗಿ ಪ್ರಮೋದ್ ಶೆಟ್ಟಿ

ಮಂಜುನಾಥ್ ಟಿಆರ್ ನಿರ್ಮಿಸಿ ನಿರ್ದೇಶಿಸಿರುವ NH 66 ಚಿತ್ರದಲ್ಲಿ ಕ್ಯಾಬ್ ಚಾಲಕನಾಗಿ ಪ್ರಮೋದ್ ಶೆಟ್ಟಿ ನಟಿಸಿದ್ದಾರೆ.

ರಾಯ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ  ನಿರ್ಮಿಸಿರುವ  NH 66 ಚಿತ್ರದ ಪಸ್ಟ್ ಲುಕ್ ಅನಾವರಣಗೊಂಡಿದೆ. ಸಿನಿಮಾದಲ್ಲಿ  ಪ್ರಮೋದ್ ಶೆಟ್ಟಿ ಪಾತ್ರದ ಬಗ್ಗೆ ಸುಳಿವು ನೀಡಲಾಗಿದೆ.  NH 66 ಒಂದು ಪ್ರಯಾಣದ ಸುತ್ತ ಸುತ್ತುತ್ತದೆ. ಮಂಗಳೂರಿನಿಂದ ಮುಂಬೈಗೆ ಸಾಗುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ದಿನದ ಅವಧಿಯಲ್ಲಿ ಬೆಳವಣಿಗೆಗಳೇ ಸಿನಿಮಾದ ಕಥಾವಸ್ತುವಾಗಿದೆ.

ಚಿತ್ರದಲ್ಲಿ ಪ್ರಮೋದ್ ಶೆಟ್ಟಿ, ಶ್ರುತಿ ಹರಿಹರನ್ ಮತ್ತು ರಾಜೇಶ್ ನಟರಂಗ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಂಜುನಾಥ್ ಚಿತ್ರವನ್ನು ನಿರ್ದೇಶಿಸುವ ಮತ್ತು ನಿರ್ಮಿಸುವ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆಗಳನ್ನು ಬರೆದಿದ್ದಾರೆ.

ಚಿತ್ರದ ತಾಂತ್ರಿಕ ತಂಡದಲ್ಲಿ ಛಾಯಾಗ್ರಾಹಕ ಸುನೀತ್ ಹಲಗೇರಿ ಮತ್ತು ಸಂಗೀತ ನಿರ್ದೇಶಕ ಸ್ವಾಮಿನಾಥನ್ ಇದ್ದಾರೆ. NH 66 ಚಿತ್ರದ ಚಿತ್ರೀಕರಣ  ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ಚಿತ್ರದ ಬಿಡುಗಡೆಯ ಕುರಿತು ನಿರ್ದೇಶಕರು ಘೋಷಿಸುವ ನಿರೀಕ್ಷೆಯಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!