‘ರಾಜಕೀಯಕ್ಕೆ ಬರಬಹುದೇನೋ’ ಎಂದ ಯಶ್

‘ಭವಿಷ್ಯದಲ್ಲಿ ಅವಶ್ಯಕತೆ ಇದೆ ಎನಿಸಿದರೆ, ಅವಕಾಶ ಇದೆ ಎನಿಸಿದರೆ ರಾಜಕೀಯಕ್ಕೆ ಬರಬಹುದೇನೋ’ ಎಂದು ಯಶ್  ರಾಜಕೀಯ  ಎಂಟ್ರಿ ಸುಳಿವು ನೀಡಿದ್ದಾರೆ.

‘ಆಪ್​​ ಕಿ ಅದಾಲತ್’ ಕಾರ್ಯಕ್ರಮದಲ್ಲಿ  ಯಶ್ ಅವರನ್ನು ಪ್ರೇಕ್ಷಕರೊಬ್ಬರು, ‘ವಿಜಯ್ ಸಿಎಂ ಆಗಿದ್ದಾರೆ. ಅವರಂಥೆ ದೊಡ್ಡ ಅಭಿಮಾನಿ ವರ್ಗ ನಿಮಗೂ ಇದೆ. ನೀವೂ ರಾಜಕೀಯಕ್ಕೆ ಬರುತ್ತೀರ? ಸಿಎಂ ಆಗುವ ಆಸೆ ಇದೆಯಾ?’ ಎಂದು ಕೇಳಿದ್ದಾರೆ. ಪ್ರಶ್ನೆಗೆ ಉತ್ತರಿಸಿರುವ ಯಶ್  ಅಭಿಮಾನಿಗಳು ನಿರೀಕ್ಷೆ ಇರಿಸಿಕೊಳ್ಳಬಹುದಾದ ಉತ್ತರ ನೀಡಿದ್ದಾರೆ.

‘ನಾನು ಸದ್ಯಕ್ಕೆ ನಟನಾಗಿ ಹೆಚ್ಚು ಕೆಲಸ ಮಾಡಬೇಕಿದೆ. ನಟನಾಗಿ ಸಾಧಿಸುವುದು ಹೆಚ್ಚಿದೆ. ನಮ್ಮ ಚಿತ್ರರಂಗವನ್ನು ಇನ್ನೂ ಒಳ್ಳೆಯ ಸ್ಟೇಜ್​​ಗೆ ಹೇಗೆ ತರಬಹುದು ಎಂಬ ಗುರಿಯನ್ನಿರಿಸಿಕೊಂಡು ಕೆಲಸ ಮಾಡುತ್ತಿದ್ದೇನೆ. ಆದರೆ ನನಗೆ ರಾಜಕೀಯದ ಬಗ್ಗೆ ಯಾವುದೇ ಪೂರ್ವಾಗ್ರಹ ಇಲ್ಲ. ನಾನು ಅರ್ಥ ಮಾಡಿಕೊಂಡಿರುವಂತೆ ರಾಜಕೀಯ ಎಂದರೆ ಪ್ರಜೆಗಳ ಪರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮತ್ತು ಜನಪರವಾಗಿ ಕೆಲಸ ಮಾಡುವುದೇ ಆಗಿದೆ. ಭವಿಷ್ಯದಲ್ಲಿ ಅವಶ್ಯಕತೆ ಇದೆ ಎನಿಸಿದರೆ, ಅವಕಾಶ ಇದೆ ಎನಿಸಿದರೆ ರಾಜಕೀಯಕ್ಕೆ ಬರಬಹುದೇನೋ. ಆದರೆ ಈಗ ಖಂಡಿತ ಅದರ ಅವಶ್ಯಕತೆ ಇಲ್ಲ ಎನಿಸುತ್ತದೆ’ ಎಂದಿದ್ದಾರೆ  ಯಶ್.

40 ವರ್ಷ ವಯಸ್ಸಿನ ಯಶ್​​ ಅವರಿಗೆ  ಇನ್ನೂ 10-15 ವರ್ಷ ಚಿತ್ರರಂಗದಲ್ಲಿ ಒಳ್ಳೆಯ ಮಾರುಕಟ್ಟೆ ಇರಲಿದೆ. 15 ವರ್ಷಗಳ ಬಳಿಕ ಚಿತ್ರರಂಗದಲ್ಲಿ ನಿವೃತ್ತಿ ಪಡೆಯುವ ವೇಳೆಗೆ ಯಶ್ ರಾಜಕೀಯಕ್ಕೆ ಬರಬಹುದೇನೋ ಎಂದು ನೋಡಬೇಕಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!