ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ‘ಪಿನಾಕ’ ಸಿನಿಮಾ ಟೀಸರ್ ಇಂದು ರಿಲೀಸ್ ಆಗಿದ್ದು ಮೆಚ್ಚುಗೆ ಪಡೆಯುತ್ತಿದೆ.
‘ಪಿನಾಕ’ ಸಿನಿಮಾ ಮೂಲಕ ಗಣೇಶ್ ಅವರು ಪುರ್ನಜ್ಮನದ ಕಥೆ ಹೇಳಲು ಹೊರಟಿದ್ದಾರೆ ಎಂಬುದುರ ಸೂಚನೆ ಸಿಕ್ಕಿದೆ. ಗಣೇಶ್ ಅವರು ಎರಡು ರೀತಿಯ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದರಲ್ಲಿ ಮಾಡರ್ನ್ ಅವತಾರದಲ್ಲಿ ಮಿಂಚದರೆ ಮತ್ತೊಂದು ಗೆಟಪ್ನಲ್ಲಿ ರಾಜರ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕೋಟೆ, ಫೈಟ್ ದೃಶ್ಯಗಳು ಸಿನಿಮಾದಲ್ಲಿ ಹೈಲೈಟ್ ಆಗಿವೆ. ಎರಡು ಕಾಲಘಟ್ಟದಲ್ಲಿ ಚಿತ್ರದ ಕಥೆ ಸಾಗುತ್ತದೆ ಎಂಬುದು ಟೀಸರ್ನಲ್ಲಿ ಸ್ಪಷ್ಟವಾಗಿದೆ.
ಗಣೇಶ್ ಜನ್ಮದಿನ ‘ಪಿನಾಕ’ ಚಿತ್ರದ ರಿಲೀಸ್ ದಿನಾಂಕ ಘೋಷಣೆ ಆಗಿದೆ. ಚಿತ್ರ ಗಾಂಧಿ ಜಯಂತಿ ಪ್ರಯುಕ್ತ ಅಕ್ಟೋಬರ್ 2ರಂದು ತೆರೆಗೆ ಬರಲಿದೆ. ಮೀಡಿಯಾ ಫ್ಯಾಕ್ಟರಿ’ ಬ್ಯಾನರ್ ಅಡಿಯಲ್ಲಿ ವಿಶ್ವಪ್ರಸಾದ್ ‘ಪಿನಾಕ’ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ನೃತ್ಯ ನಿರ್ದೇಶಕ ಧನಂಜಯ್ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಗೌರ ಹರಿ ಚಿತ್ರಕ್ಕೆ ಮ್ಯೂಸಿಕ್ ಕೊಟ್ಟಿದ್ದಾರೆ. ‘ಪಿನಾಕ’ ಸಿನಿಮಾ ಯಾವ ರೀತಿಯ ಪ್ರತಿಕ್ರಿಯೆ ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಅಕ್ಟೋಬರ್ 16ರಂದು ಗಣೇಶ್ ನಟನೆಯ ಮತ್ತೊಂದು ಸಿನಿಮಾ ‘‘ಬೃಂದವಿಹಾರಿ’ ರಿಲೀಸ್ ಆಗಲಿದೆ.
—–





Be the first to comment