ನೂರಾರು ಕೋಟಿ ರೂಪಾಯಿ ವಂಚನೆ ಪ್ರಕರಣದ ಸುಕೇಶ್ ಚಂದ್ರಶೇಖರ್ ಸಾಕ್ಷ್ಯಚಿತ್ರ ‘ಲವ್, ಸ್ಕ್ಯಾಮ್ ಔರ್ ಧೋಖಾ: ದಿ ಸುಕೇಶ್ ಚಂದ್ರಶೇಖರ್ ಸ್ಟೋರಿ’ ನೆಟ್‌ಫ್ಲಿಕ್ಸ್ ನಲ್ಲಿ ಡಿಸೆಂಬರ್ 18ರಿಂದ ವೀಕ್ಷಕರಿಗೆ ಲಭ್ಯವಾಗಲಿದೆ.
ಸಾಮಾನ್ಯ ಯುವಕನಾಗಿದ್ದ ಸುಕೇಶ್ ದೇಶದ ಹೈಪ್ರೊಫೈಲ್ ವಂಚನೆ ಪ್ರಕರಣಗಳಲ್ಲಿ ಕೇಳಿಬರುವ ವ್ಯಕ್ತಿಯಾಗಿ ಬೆಳೆದ ಹಾದಿಯನ್ನು ಡಾಕ್ಯುಮೆಂಟರಿ ಕಟ್ಟಿಕೊಡಲಿದೆ. ಇಂಡಿಯಾ ಟುಡೇ ಒರಿಜಿನಲ್ಸ್ ನಿರ್ಮಿಸಿರುವ ಸಾಕ್ಷ್ಯಚಿತ್ರಕ್ಕೆ ಮೌಮಿತಾ ಸೇನ್ ಮತ್ತು ನಿಯಂತ ಶೇಖರ್ ನಿರ್ದೇಶನ ಮಾಡಿದ್ದಾರೆ. 2 ವರ್ಷಗಳ ಸಂಶೋಧನೆಯ ಬಳಿಕ ಈ ಪ್ರಾಜೆಕ್ಟ್ ಸಿದ್ಧವಾಗಿದೆ.
ಸುಕೇಶ್ ಹಿರಿಯ ಸರ್ಕಾರಿ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಗುರುತುಗಳನ್ನು ಬಳಸಿಕೊಂಡು ಜನರನ್ನು ಹೇಗೆ ನಂಬಿಸುತ್ತಿದ್ದ ಎಂಬ ಅಂಶವನ್ನು ಇದರಲ್ಲಿದೆ. ರಾಜಕಾರಣಿಗಳು ಮತ್ತು ಬಾಲಿವುಡ್ ಸೆಲೆಬ್ರಿಟಿಗಳೊಂದಿಗಿನ ಸಂಪರ್ಕದ ಬಗ್ಗೆಯೂ ಬೆಳಕು ಚೆಲ್ಲಲಾಗಿದೆ. ಸುಮಾರು 200 ಕೋಟಿ ರೂಪಾಯಿ ವಂಚನೆ ಮತ್ತು ಸುಲಿಗೆ ಪ್ರಕರಣಗಳ ಸುತ್ತ ಸಾಕ್ಷ್ಯಚಿತ್ರ ಸಾಗಲಿದೆ. ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರೊಂದಿಗಿನ ನಂಟಿನ ವಿಚಾರಗಳೂ ಸಾಕ್ಷ್ಯಚಿತ್ರದಲ್ಲಿದೆ ಎನ್ನಲಾಗಿದೆ.
ಸದ್ಯ ಸುಕೇಶ್ ವಿರುದ್ಧದ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿವೆ. ಆತನ ಮೇಲಿನ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗಬೇಕಿದೆ. ‘ಕರಿ ಅಂಡ್ ಸೈನೈಡ್’ ಮತ್ತು ‘ದಿ ಇಂದ್ರಾಣಿ ಮುಖರ್ಜಿ ಸ್ಟೋರಿ’ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದ ತಂಡ ಈ ಪ್ರಾಜೆಕ್ಟ್ ನಿರ್ಮಿಸಿದೆ.
—-





Be the first to comment