ರಾಮಾಯಣ

‘ಪುಷ್ಪ 2’ ದಾಖಲೆ ಹಿಂದಿಕ್ಕಿದ ‘ರಾಮಾಯಣ’

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ‘ಪುಷ್ಪ 2’ ಚಿತ್ರದ ದಾಖಲೆಯನ್ನು ಹಿಂದಿಕ್ಕಿ  1,000 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಕ್ಲಬ್ ಸೇರುವ ಸನಿಹದಲ್ಲಿದೆ.

ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಅಭಿನಯದ ಈ ಚಿತ್ರ 1,000 ಕೋಟಿ ರೂಪಾಯಿ ನೆಟ್ ಕಲೆಕ್ಷನ್  ಮೈಲಿಗಲ್ಲು ತಲುಪಲು ಕೇವಲ 8 ಕೋಟಿ ರೂಪಾಯಿ ಮಾತ್ರ ಬಾಕಿಯಿದೆ. ‘ರಾಮಾಯಣ’,  ‘ಬಾಹುಬಲಿ 2’ ದಾಖಲೆಯತ್ತ ಗಮನಹರಿಸಿದೆ.

‘ರಾಮಾಯಣ’  ಸಿನಿಮಾ ಬಿಡುಗಡೆಯಾಗಿ 22 ದಿನಗಳು ಕಳೆದಿವೆ. ಸಿನಿಮಾ ಭಾರತದಲ್ಲಿ  992.10 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ದೇಶೀಯ ಗ್ರಾಸ್ ಗಳಿಕೆ 1,185 ಕೋಟಿ ರೂ. ದಾಟಿದೆ. ವಿದೇಶಿ ಮಾರುಕಟ್ಟೆಯಿಂದ 592 ಕೋಟಿ ರೂ. ಕಲೆಕ್ಷನ್ ಬಂದಿದ್ದು, ವಿಶ್ವಾದ್ಯಂತ ಒಟ್ಟು ಗಳಿಕೆ 1,777 ಕೋಟಿ ರೂ.ಗೆ ತಲುಪಿದೆ.

ರಣಬೀರ್ ಕಪೂರ್ ವೃತ್ತಿಜೀವನದ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾವಾಗಿ ‘ರಾಮಾಯಣ’  ಹೊರಹೊಮ್ಮಿದೆ. ಈ ಹಿಂದೆ ‘ಅನಿಮಲ್’ ಸಿನಿಮಾ ಕಲೆಕ್ಷನ್ ಮಾಡಿದ್ದ 553.87 ಕೋಟಿ ರೂ.ದಾಖಲೆಯನ್ನು ‘ರಾಮಾಯಣ’ ಮೀರಿಸಿದೆ. ಬಿಡುಗಡೆಯಾದ ಕೇವಲ 14 ದಿನಗಳಲ್ಲಿ ವಿಶ್ವಾದ್ಯಂತ 1,500 ಕೋಟಿ ರೂ. ಗಳಿಸಿದ ಅತಿ ವೇಗದ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!