ರಾಜೇಶ್ ಧ್ರುವ ನಾಯಕನಾಗಿರುವ ‘ಪೀಟರ್’ ಚಿತ್ರ ಏಪ್ರಿಲ್ 10 ರಂದು ಬಿಡುಗಡೆಯಾಗುತ್ತಿದೆ.
ರವೀಕ್ಷಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಜಾನ್ವಿ ರಾಯಲ ಚಿತ್ರದಲ್ಲಿದ್ದಾರೆ. ರಾವಳಿ ಭಾಗದ ಮಣ್ಣಿನ ಸೊಗಡಿನ ಕಥೆ ಇದಾಗಿದ್ದು, ಈ ಹಿಂದೆ ‘ದೂರದರ್ಶನ’ ಎಂಬ ಉತ್ತಮ ಸಿನಿಮಾ ಮಾಡಿದ್ದ ಸುಕೇಶ್ ಶೆಟ್ಟಿ ಈ ಸಿನಿಮಾ ನಿರ್ದೇಶಿಸಿದ್ದಾರೆ.
ರವಿ ಹಿರೇಮಠ್ ಮತ್ತು ರಾಕೇಶ್ ಹೆಗಡೆ ಅವರ ವೃದ್ಧಿ ಸ್ಟುಡಿಯೋಸ್ ಚಿತ್ರ ನಿರ್ಮಾಣ ಮಾಡುತ್ತಿದೆ. ರವಿ ಹಿರೇಮಠ್ ಅವರು ನೂರಕ್ಕೂ ಹೆಚ್ಚು ಸಿನಿಮಾಗಳಿಗೆ ಸೌಂಡ್ ಡಿಸೈನರ್ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ರಿತ್ವಿಕ್ ಮುರಳಿಧರ್ ಅವರ ಸಂಗೀತ ಈ ಸಿನಿಮಾಗೆ ಇದೆ. ಅಜಯ್ ಗೊಗಾವಲೆ ಅವರು ಹಾಡಿರುವ ಜೋಶಿಕಿ ಜವಾನಿ ಫ್ರೆಂಡ್ ಶಿಪ್ ಸಾಂಗ್ ಚೆನ್ನಾಗಿ ಮೂಡಿಬಂದಿದೆ. ಪ್ರತಿಮಾ ನಾಯಕ್ ಅವರು ಕಾಣಿಸಿಕೊಂಡಿರುವ ತಾಯಿ ತಾಯಿ ಹಾಡು ಎಮೋಷನಲ್ ಆಗಿದೆ.
ಪೀಟರ್’ ಸಿನಿಮಾದಲ್ಲಿ ಸಸ್ಪೆನ್ಸ್, ಥ್ರಿಲ್ಲರ್, ಲವ್, ಎಮೋಷನ್ ಮತ್ತು ಫ್ರೆಂಡ್ ಶಿಪ್ ಹೀಗೆ ಎಂಟರ್ಟೈನ್ಮೆಂಟ್ ಗೆ ಬೇಕಾದ ಎಲ್ಲಾ ಎಲಿಮೆಂಟ್ಸ್ ಇವೆ. ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ವಿತರಣೆ ಮಾಡುತ್ತಿದೆ.
—





Be the first to comment