‘ರಾವಣ ಸಂಪೂರ್ಣ ಕೆಟ್ಟವನಲ್ಲ’ ಹೇಳಿಕೆ ಚರ್ಚೆ

‘ರಾವಣ ಸಂಪೂರ್ಣ ಕೆಟ್ಟವನಲ್ಲ’ ಎಂದು ರಾಮಾಯಣ ಚಿತ್ರದ ನಾಯಕ ನಟಿ ಸಾಯಿ ಪಲ್ಲವಿ ಹೇಳಿದ್ದು ಅವರ ಹೇಳಿಕೆ  ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಯಶ್, ರಣಬೀರ್ ಕಪೂರ್ ಅಭಿನಯದ ರಾಮಾಯಣ ಚಿತ್ರ ಬಿಡುಗಡೆ ಮುನ್ನ  ಲಾಸ್ ಏಂಜಲೀಸ್‌ನಲ್ಲಿ ನಡೆದ ಪ್ರೀಮಿಯರ್ ಕಾರ್ಯಕ್ರಮದಲ್ಲಿ ಸಾಯಿ ಪಲ್ಲವಿ ರಾವಣನ ಕುರಿತು ಆಡಿದ ಮಾತು  ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿವೆ. ಕೆಲವರು ಸಾಯಿ ಪಲ್ಲವಿಯ ಮಾತುಗಳನ್ನು ಟೀಕಿಸಿದರೆ, ಇನ್ನು ಕೆಲವರು ಹೇಳಿಕೆಯ ಹಿಂದಿನ ಅರ್ಥವನ್ನು ಅರ್ಥಮಾಡಿಕೊಳ್ಳಬೇಕು ಎಂದು ಸಮರ್ಥಿಸಿದ್ದಾರೆ.

“ಧರ್ಮಗ್ರಂಥವನ್ನು ನಂಬುವವರು ಅದನ್ನು ಓದುವಾಗ ತಮ್ಮೊಳಗೆ ಏನಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಏನಿದೆ ಎಂಬುದನ್ನು ಗುರುತಿಸಿ ನಮ್ಮನ್ನು ನಾವು ತಿದ್ದಿಕೊಳ್ಳಲು ಕಲಿಯಬೇಕು.   ರಾವಣ ಸಂಪೂರ್ಣ ಕೆಟ್ಟವನಲ್ಲ. ನಮ್ಮೊಳಗಿನ ರಾವಣನನ್ನು ಗುರುತಿಸಿ  ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದು ಮುಖ್ಯ” ಎಂದು  ಸಾಯಿ ಪಲ್ಲವಿ ಹೇಳಿದ್ದಾರೆ.

”ತನ್ನನ್ನು ಅಪಹರಿಸಿದವನನ್ನು ಹೊಗಳುವ ಮಹಿಳೆ” ಎಂದು  ಒಬ್ಬ ಬಳಕೆದಾರ ಟೀಕಿಸಿದ್ದಾರೆ.  . “ಒಬ್ಬ ವ್ಯಕ್ತಿಯಲ್ಲಿ ಕೆಟ್ಟ ಗುಣಗಳ ಜೊತೆಗೆ ಒಳ್ಳೆಯ ಗುಣಗಳೂ ಇರಬಹುದು ಎಂಬ ಅರ್ಥದಲ್ಲಿ ಅವರು ‘ಸಂಪೂರ್ಣ ಕೆಟ್ಟವನಲ್ಲ’ ಎಂದಿದ್ದಾರೆ. ಇದರಲ್ಲಿ ವಿವಾದ ಮಾಡುವಂಥದ್ದೇನಿಲ್ಲ” ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.

ನಿತೇಶ್ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರ ನವೆಂಬರ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!