ನಟ ಸಾರ್ವಭೌಮ’ ಸಿನಿಮಾದಲ್ಲಿದೆ ಪಾರ್ಟಿ ಸಾಂಗ್.!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಪವನ್ ಒಡೆಯರ್ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ ‘ನಟ ಸಾರ್ವಭೌಮ’ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ.ಮೈಸೂರು ಹಾಗೂ ಬಳ್ಳಾರಿಯಲ್ಲಿ ಶೂಟಿಂಗ್ ಪ್ಯಾಕಪ್ ಆದ ನಂತರ ‘ನಟ ಸಾರ್ವಭೌಮ’ ಚಿತ್ರೀಕರಣ ಬೆಂಗಳೂರಿನಲ್ಲಿಯೇ ನಡೆಯುತ್ತಿದೆ. ಬೆಂಗಳೂರಿನ ಬೀದಿ ಬೀದಿಗಳಲ್ಲಿ ಅಪ್ಪು ಬುಲೆಟ್ ರೈಡ್ ಮಾಡಿದ ಬಳಿಕ ಪಾರ್ಟಿ ಸಾಂಗ್ ನಲ್ಲಿ ಹೆಜ್ಜೆ ಹಾಕಿದ್ದಾರೆ.ಹೌದು, ‘ನಟ ಸಾರ್ವಭೌಮ’ ಚಿತ್ರದಲ್ಲಿ ಒಂದು ಪಾರ್ಟಿ ಸಾಂಗ್ ಇದೆ. ಈ ಹಾಡಿಗಾಗಿ ವಿಶೇಷ ಸೆಟ್ ನಿರ್ಮಿಸಲಾಗಿದ್ದು, ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ.

This Article Has 1 Comment
  1. Pingback: automated software testing tools

Leave a Reply

Your email address will not be published. Required fields are marked *

Translate »
error: Content is protected !!