ಮಹಾಕಾವ್ಯ ಆಧರಿತ ‘ರಾಮಾಯಣ’ ಚಿತ್ರಕ್ಕೆ ಪಶ್ಚಿಮ ಬಂಗಾಳದಲ್ಲಿ ತೆರಿಗೆ ವಿನಾಯಿತಿ ನೀಡುವುದಾಗಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ತಿಳಿಸಿದ್ದಾರೆ.
ಕೋಲ್ಕತ್ತಾದ ಸೆಂಟ್ರಲ್ ಪಾರ್ಕ್ನಲ್ಲಿ ನಡೆದ ದಸರಾ ಆಚರಣೆಯಲ್ಲಿ ನಟರಾದ ರಣಬೀರ್ ಕಪೂರ್ ಮತ್ತು ಯಶ್ ಅವರೊಂದಿಗೆ ಭಾಗವಹಿಸಿದ್ದಾಗ ಮುಖ್ಯಮಂತ್ರಿ ಈ ಘೋಷಣೆ ಮಾಡಿದ್ದಾರೆ.
‘ರಾಮಾಯಣ’ ಚಿತ್ರವು ರಾಜ್ಯದಲ್ಲಿ ತೆರಿಗೆ ಮುಕ್ತ ಸ್ಥಾನಮಾನ ಪಡೆದ ಚಲನಚಿತ್ರಗಳ ಪಟ್ಟಿಗೆ ಸೇರಲಿದೆ ‘ದಿ ಕೇರಳ ಸ್ಟೋರಿ’, ‘ದಿ ಕಾಶ್ಮೀರ್ ಫೈಲ್ಸ್’ ಮತ್ತು ‘ದಿ ಬೆಂಗಾಲ್ ಫೈಲ್ಸ್’ – ಇವೆಲ್ಲವಕ್ಕೂ ತೆರಿಗೆ ಮುಕ್ತಗೊಳಿಸಲಾಗಿದೆ. ಇದೇ ನಿಯಮ ರಾಮಾಯಣಕ್ಕೂ ಅನ್ವಯಿಸುತ್ತದೆ’ ಎಂದು ತಿಳಿಸಿದ್ದಾರೆ.
‘ರಾಮಾಯಣ’ ಚಿತ್ರದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್, ಹನುಮಂತನಾಗಿ ಸನ್ನಿ ಡಿಯೋಲ್ ಮತ್ತು ಲಕ್ಷ್ಮಣನಾಗಿ ರವಿ ದುಬೆ ಕಾಣಿಸಿಕೊಳ್ಳಲಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರವನ್ನು ಎರಡು ಭಾಗಗಳ ಮಹಾಕಾವ್ಯವಾಗಿ ರೂಪಿಸಲಾಗುತ್ತಿದೆ.
ರಾವಣನ ಪಾತ್ರವನ್ನು ನಿರ್ವಹಿಸುತ್ತಿರುವ ಯಶ್, ಕೋಲ್ಕತ್ತಾದೊಂದಿಗಿನ ತಮ್ಮ ವೈಯಕ್ತಿಕ ನಂಟಿನ ಬಗ್ಗೆ ಮಾತನಾಡಿದರು. 2004-2005ರ ಸುಮಾರಿಗೆ ಇದೇ ನಗರದಲ್ಲಿ ತಮ್ಮ ರಂಗಭೂಮಿ ಪಯಣ ಆರಂಭವಾಗಿದ್ದನ್ನು ಅವರು ನೆನಪಿಸಿಕೊಂಡರು. ‘ಇಂದು ನಾನು ಇಲ್ಲಿಗೆ ಚಿತ್ರ ನಟನಾಗಿ ಬಂದಿದ್ದೇನೆ. ನನಗೆ ತುಂಬಾ ಸಂತೋಷವಾಗುತ್ತಿದೆ’ ಎಂದರು.
——





Be the first to comment