‘ಅವನೇ ಶ್ರೀಮನ್ನಾರಾಯಣ’ ಸೆಟ್ ನಲ್ಲಿ ಶಿವರಾಜ್ ಕುಮಾರ್!

ರಕ್ಷಿತ್ ಶೆಟ್ಟಿ ಯ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾವು ಸಧ್ಯಕ್ಕೆ ಸ್ಯಾಂಡಲ್ ವುಡ್ನಲ್ಲಿ ಭಾರಿ ಸದ್ದು ಮಾಡುತ್ತಿರುವ ಸಿನಿಮಾಗಳಲ್ಲೊಂದು.ಮಾರ್ಚ್ ತಿಂಗಳಿನಲ್ಲಿ ಸೆಟ್ಟೇರಿದ್ದ ಈ ಸಿನಿಮಾದ ಚಿತ್ರೀಕರಣ ಈಗ ಭರ್ಜರಿಯಾಗಿ ನಡೆಯುತ್ತಿದೆ.ಈ ಚಿತ್ರದ ಶೂಟಿಂಗ್ ಸೆಟ್ ನಲ್ಲಿ ನಟ ಶಿವರಾಜ್ ಕುಮಾರ್ ಕಾಣಿಸಿಕೊಂಡಿದ್ದಾರೆ. ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಚಿತ್ರೀಕರಣವನ್ನು ನೋಡಲು ಶಿವಣ್ಣ ಭೇಟಿ ನೀಡಿದ್ದಾರೆ. ಈ ವೇಳೆ ಶಿವಣ್ಣನಿಗೆ ಸಿನಿಮಾದ ಕೆಲವು ತುಣುಕುಗಳನ್ನು ರಕ್ಷಿತ್ ತೋರಿಸಿದ್ದಾರೆ. ಶಿವಣ್ಣನ ಫೋಟೋಗಳನ್ನು ಚಿತ್ರದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

This Article Has 1 Comment
  1. Pingback: Sexual orientation in the United States military

Leave a Reply

Your email address will not be published. Required fields are marked *

Translate »
error: Content is protected !!