ಇಂದು ಎರಡು ಚಿತ್ರಗಳು ತೆರೆಗೆ

ಇಂದು ಎರಡು ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತಿವೆ.

ಹಾರರ್, ಥ್ರಿಲ್ಲರ್ ಕಥಾವಸ್ತು ಹೊಂದಿರುವ ‘ಆತ್ಮ’,  ‘ರಾಮ ಮತ್ತು ರಾಮು’  ಚಿತ್ರ ಇಂದು ಬಿಡುಗಡೆ ಆಗುತ್ತಿವೆ.

ಎಸ್.ಆರ್.ಪ್ರಮೋದ್ ನಿರ್ದೇಶನದ ‘ಆತ್ಮ’ ಚಿತ್ರಕ್ಕೆ ಅನಿಲ್.ಸಿ.ಆರ್ ಬಂಡವಾಳ ಹೂಡಿದ್ದಾರೆ.  ಇವರೇ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಕಾವ್ಯ ಚಿತ್ರದ ನಾಯಕಿ. ಬಹುತೇಕ ಹೊಸಬರೇ ತಾರಾಗಣದಲ್ಲಿದ್ದಾರೆ. ಎರಡು ಹಾಡುಗಳಿಗೆ ನಿತಿನ್‌ರಾಜ್ ಸಂಗೀತ ಸಂಯೋಜಿಸಿದ್ದಾರೆ. ರಣಧೀರ್‌ ನಾಯಕ್ ಛಾಯಾಗ್ರಹಣ ಚಿತ್ರಕ್ಕಿದೆ.

ಚಂದ್ರು ಓಬಯ್ಯ ನಿರ್ದೇಶನದ ‘ರಾಮ ಮತ್ತು ರಾಮು’ ಚಿತ್ರ  ಇಂದು ಬಿಡುಗಡೆ ಆಗುತ್ತಿದೆ. ನಿರ್ದೇಶಕ, ನಿರ್ಮಾಪಕ ಸೇರಿದಂತೆ ಬಹುತೇಕ ವಿಭಾಗಗಳಲ್ಲಿ ಚಂದ್ರು ಓಬಯ್ಯ ಕಾಣಿಸಿಕೊಂಡಿದ್ದಾರೆ.

ಚುನಾವಣೆ, ಐಪಿಎಲ್‌, ಬಿಸಿಲ ಧಗೆಯಿಂದಾಗಿ ಕಳೆದ 2-3 ವಾರಗಳಲ್ಲಿ ಸಿನಿಮಾ ಬಿಡುಗಡೆ ಸಂಖ್ಯೆ ಇಳಿದಿದೆ. ಚುನಾವಣೆ ಸಮಯದಲ್ಲಿ ಕಲೆಕ್ಷನ್‌ ಆಗುವುದಿಲ್ಲ. ಹೀಗಾಗಿ ನಿರ್ಮಾಪಕರು ಚಿತ್ರ ಬಿಡುಗಡೆಗೆ ಹಿಂದೇಟು ಹಾಕಿದ್ದಾರೆ.

‘ಜನವರಿಯಲ್ಲಿ 18 ಸಿನಿಮಾಗಳು ತೆರೆ ಕಂಡರೆ, ಫೆಬ್ರುವರಿಯಲ್ಲಿ 25 ಚಿತ್ರಗಳು ಬಿಡುಗಡೆಗೊಂಡಿದ್ದವು.  ಮಾರ್ಚ್‌ನಲ್ಲಿ ಒಟ್ಟು 25 ಸಿನಿಮಾಗಳು ತೆರೆಗೆ ಬಂದರೆ, ಏಪ್ರಿಲ್‌ನಲ್ಲಿ 17 ಕ್ಕೆ ಕುಸಿದಿದೆ. ಮೇ ಮೊದಲ ವಾರವೂ ಹೆಚ್ಚು ಚಿತ್ರಗಳು ಬಿಡುಗಡೆಯಾಗುತ್ತಿಲ್ಲ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!