ಚಿತ್ರ: ಮ್ಯಾಂಗೋ ಪಚ್ಚ
ನಿರ್ದೇಶನ: ವಿವೇಕ
ನಿರ್ಮಾಣ: ಪ್ರಿಯಾ ಸುದೀಪ್, ಕಾರ್ತಿಕ್ ಮತ್ತು ಯೋಗಿ ಜಿ ರಾಜ್
ತಾರಾಗಣ: ಸಂಚಿತ್, ಕಾಜಲ್ ಕುಂದರ್, ಮಯೂರ್ ಪಟೇಲ್ ಮೊದಲಾದವರು…
ರೇಟಿಂಗ್ : 4/5
ಮೊದಲ ಚಿತ್ರದಲ್ಲೇ ಹೇಗೆ ಪ್ರೇಕ್ಷಕರನ್ನು ಸೆಳೆಯಬಹುದು ಎನ್ನುವುದನ್ನು ‘ಮ್ಯಾಂಗೋ ಪಚ್ಚ’ ತೋರಿಸಿಕೊಟ್ಟಿದೆ. ಆ್ಯಕ್ಷನ್ ಸಿನಿಕಮಾ ಮೂಲಕ ಹೇಗೆ ನವ ಯುವಕನನ್ನು ಪ್ರೇಕ್ಷಕರ ಮನಸಿಗೆ ಹತ್ತಿರ ಮಾಡಬಹುದು ಎನ್ನುವ ಕಲೆಯನ್ನು ಕಲಿತೇ ನಿರ್ದೇಶಕರು ಆ್ಯಕ್ಷನ್ ಕಟ್ ಹೇಳಿದ್ದಾರೆ.
ಪೂರ್ತಿ ಚಿತ್ರ ಮೈಸೂರಿನ ಹಿನ್ನೆಲೆಯಲ್ಲಿದೆ. 2001ರಿಂದ ಕಥೆ ಶುರುವಾಗುತ್ತದೆ. ಪಚ್ಚ ಯಾನೇ ಪ್ರಶಾಂತನದ್ದು ಡಿವಿಡಿ ಅಂಗಡಿ. ಆದರೆ ಅದರಿಂದ ಗಾಂಜಾದ ಜಾಲಕ್ಕೆ ಸಿಲುಕಿಕೊಳ್ಳುವ ಮೂಲಕ ಬದುಕೇ ಬದಲಾಗುತ್ತದೆ. ಪಚ್ಚ ಖುದ್ದಾಗಿ ಜಾಲಕ್ಕೆ ಸಿಲುಕುತ್ತಾನ? ಅಥವಾ ತನ್ನ ಜಾಲದಲ್ಲಿ ಇತರರನ್ನು ಸಿಲುಕಿಸುತ್ತಾನ? ಈ ಪ್ರಶ್ನೆಗೆ ಚಿತ್ರದಲ್ಲಿ ಉತ್ತರವಿದೆ.
ಮ್ಯಾಂಗೋ ಪಚ್ಚನಾಗಿ ಸಂಚಿತ್ ತಮ್ಮ ಎಲ್ಲ ಎನರ್ಜಿ ಹಾಕಿ ನಟಿಸಿದ್ದಾರೆ. ಮೊದಲ ಚಿತ್ರದಲ್ಲೇ ಇಷ್ಟೊಂದು ಆತ್ಮವಿಶ್ವಾಸದಿಂದ ನಟಿಸಿರುವುದಕ್ಕೆ ಸಂಚಿತ್ ಅಭಿನಂದನೆಗೆ ಅರ್ಹರು. ಆ್ಯಕ್ಷನ್ ದೃಶ್ಯಗಳಲ್ಲಿ ಸಂಚಿತ್ ಮನಗೆಲ್ಲುತ್ತಾರೆ. ತಾಯಿ ಪ್ರೀತಿ, ಸಹೋದರನ ಮೇಲಿರುವ ವಾತ್ಸಲ್ಯ ಎಲ್ಲವನ್ನು ಕೂಡ ಪ್ರದರ್ಶಿಸಿದ್ದಾರೆ.
ಸಂಚಿತ್ ಗೆ ಉತ್ತಮ ಪೋಷಕ ವರ್ಗವೂ ಜತೆ ನೀಡಿದೆ. ಜೋಡಿಯಾಗಿ ಕಾಜಲ್ ಕುಂದರ್ ಭರವಸೆಯ ನಾಯಕಿ ಎನಿಸುತ್ತಾರೆ. ತಾಯಿಯಾಗಿ ಹರಿಣಿ ಸಹೋದರನಾಗಿ ಮಯೂರ್ ಪಟೇಲ್ ಒಂದು ಉತ್ತಮ ಕಲಾವಿದರ ತಂಡವೇ ಚಿತ್ರದಲ್ಲಿದೆ. ಚರಣ್ ರಾಜ್ ಹಿನ್ನೆಲೆ ಸಂಗೀತ ಚಿತ್ರದ ಒಂದು ಪ್ರಮುಖ ಪಾತ್ರವೇ ಆಗಿದೆ. ಪೊಲೀಸ್ ಅಧಿಕಾರಿಯಾಗಿ ಭಾವನಾ ರಾಮಣ್ಣ ಕಾಣಿಸಿಕೊಂಡಿದ್ದಾರೆ. ಉಗ್ರಂಮಂಜು ಕೂಡ ಒಂದು ಪ್ರಮುಖ ಪಾತ್ರವನ್ನು ನಿಭಾಯಿಸಿದ್ದಾರೆ.
ವೇಗವಾಗಿ ಸಾಗುವ ಕಥೆ, ಕಥೆಯೊಳಗಿನ ತಿರುವು, ಎರಡನೇ ಭಾಗಕ್ಕೆ ಲೀಡ್ ನೀಡುವ ರೀತಿಯಲ್ಲಿರುವ ಡಾಲಿ ಧನಂಜಯ್ ಅತಿಥಿ ಪಾತ್ರ ಎಲ್ಲವೂ ಸಿನಿಮಾದ ಪ್ರಮುಖ ಆಕರ್ಷಣೆಯ ಅಂಶವಾಗಿದೆ. ಮ್ಯಾಂಗೋ ಪಚ್ಚ ಯುವ ಸಿನಿಮಾ ಪ್ರೇಮಿಗಳಿಗೆ ಹುಚ್ಚೇ ಹಿಡಿಸುವುದು ಖಚಿತ.






Be the first to comment