150 ಕೋಟಿ ರೂ. ಕ್ಲಬ್‌ಗೆ ‘ಪೆದ್ದಿ’

ಮೆಗಾ ಪವರ್ ಸ್ಟಾರ್ ರಾಮ್‌ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಬಿಡುಗಡೆಯಾದ ಎರಡು ದಿನಗಳಲ್ಲೇ 150 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದಿದೆ.

ಬುಧವಾರ ನಡೆದ ಪ್ರೀಮಿಯರ್ ಶೋಗಳಿಂದ ‘ಪೆದ್ದಿ’ ಚಿತ್ರ  18.50 ಕೋಟಿ ರೂಪಾಯಿ  ಕಲೆಕ್ಷನ್ ಮಾಡಿತ್ತು.   ಮೊದಲ ದಿನ ದೇಶಾದ್ಯಂತ 12 ಸಾವಿರಕ್ಕೂ ಹೆಚ್ಚು ಶೋಗಳಲ್ಲಿ ಪ್ರದರ್ಶನ ಕಂಡು 51 ಕೋಟಿ ರೂಪಾಯಿ ಗಳಿಕೆ ದಾಖಲಿಸಿತ್ತು. ಎರಡನೇ ದಿನ  26.90 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಕೆ ದಾಖಲಿಸಿದೆ.

‘ಪೆದ್ದಿ’  ಎರಡು ದಿನಗಳ ಲೆಕ್ಕಾಚಾರದ ಪ್ರಕಾರ ಭಾರತದಲ್ಲಿ    114.49 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ವಿದೇಶಿ ಮಾರುಕಟ್ಟೆಯಲ್ಲಿ 36 ಕೋಟಿ ರೂಪಾಯಿ ಗ್ರಾಸ್ ಗಳಿಕೆಯೊಂದಿಗೆ ಚಿತ್ರದ ಒಟ್ಟು  ಕಲೆಕ್ಷನ್ 150.49 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ಬುಚ್ಚಿ ಬಾಬು ನಿರ್ದೇಶನದ ‘ಪೆದ್ದಿ’  ಚಿತ್ರದಲ್ಲಿ ರಾಮ್‌ಚರಣ್‌ಗೆ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಕನ್ನಡದ ನಟ ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ‘ಪೆದ್ದಿ’ ಅಬ್ಬರದ ಓಟ ಮುಂದುವರಿಸಿದ್ದು, ವಾರಾಂತ್ಯದಲ್ಲಿ  ಸಿನಿಮಾ ಇನ್ನಷ್ಟು ದೊಡ್ಡ ಮಟ್ಟದ ಗಳಿಕೆ ಮಾಡುವ ನಿರೀಕ್ಷೆ ಮೂಡಿಸಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!