ಬಹುನಿರೀಕ್ಷಿತ ‘ಡಾನ್ 3’ ಸಿನಿಮಾಗೆ ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಅವರ ಹೆಸರು ಬಲವಾಗಿ ಕೇಳಿ ಬರುತ್ತಿದೆ.
ಬಾಲಿವುಡ್ ವರದಿಗಳ ಪ್ರಕಾರ, ‘ಡಾನ್ 3’ ಕಥೆಯನ್ನು ಫರ್ಹಾನ್ ಅಖ್ತರ್ ಹೃತಿಕ್ ರೋಷನ್ ಅವರಿಗೆ ವಿವರಿಸಿದ್ದು, ಕಥೆ ಹೃತಿಕ್ಗೆ ಇಷ್ಟವಾಗಿದೆ ಎನ್ನಲಾಗಿದೆ. ಆದರೆ ಚಿತ್ರತಂಡದಿಂದ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಫರ್ಹಾನ್ ಅಖ್ತರ್ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಫೋಟೋಗೆ ಹೃತಿಕ್ ರೋಷನ್ ಮಾಡಿರುವ ಕಾಮೆಂಟ್ ಹೊಸ ಊಹಾಪೋಹಗಳಿಗೆ ಕಾರಣವಾಗಿದೆ. “ನಾವು ಶೀಘ್ರದಲ್ಲೇ ಏನಾದರೂ ಮಾಡಬೇಕು” ಎಂಬ ಹೃತಿಕ್ ಕಾಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ಡಾನ್ 3’ ಚಿತ್ರದಲ್ಲಿ ಹೃತಿಕ್ ಅವರು ಕಾಣಿಸಿಕೊಳ್ಳಲಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ.
ಫರ್ಹಾನ್ ಅಖ್ತರ್ ನಿರ್ದೇಶನದ ‘ಡಾನ್’ ಫ್ರಾಂಚೈಸಿಯ ಮೊದಲ ಎರಡು ಭಾಗಗಳಲ್ಲಿ ಶಾರುಖ್ ಖಾನ್ ನಾಯಕನಾಗಿ ಮಿಂಚಿದ್ದರು. ಆದರೆ ‘ಡಾನ್’ ಮೂರನೇ ಭಾಗಕ್ಕೆ ಶಾರುಖ್ ಬದಲಿಗೆ ರಣ್ವೀರ್ ಸಿಂಗ್ ಅವರನ್ನು ಆಯ್ಕೆ ಮಾಡಿದ್ದರಿಂದ ಅಭಿಮಾನಿಗಳ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
‘ಡಾನ್’ ಫ್ರಾಂಚೈಸಿಯ ಆರಂಭಿಕ ಹಂತದಲ್ಲೇ ಹೃತಿಕ್ ರೋಷನ್ ಅವರನ್ನು ನಾಯಕನಾಗಿ ಪರಿಗಣಿಸಲಾಗಿತ್ತು. ಬಳಿಕ ಶಾರುಖ್ ಖಾನ್ ಈ ಪಾತ್ರಕ್ಕೆ ಹೆಚ್ಚು ಸೂಕ್ತ ಎಂದು ಫರ್ಹಾನ್ ಅಖ್ತರ್ ನಿರ್ಧರಿಸಿದ್ದರು. ಇದೀಗ ಅದೇ ಫ್ರಾಂಚೈಸಿ ಮತ್ತೆ ಹೃತಿಕ್ ರೋಷನ್ ಕಡೆ ಮುಖ ಮಾಡಿದೆ.





Be the first to comment