‘ಕೋಟಿ’ ಜೂನ್‌ 14ಕ್ಕೆ ಬಿಡುಗಡೆ

ಧನಂಜಯ ನಟನೆಯ ‘ಕೋಟಿ’ ಸಿನಿಮಾ  ಜೂನ್‌ 14ರಂದು ಬಿಡುಗಡೆಯಾಗಲಿದೆ.

ಪರಮೇಶ್ವರ್‌ ಗುಂಡ್ಕಲ್‌(ಪರಮ್‌) ಆಕ್ಷನ್‌ ಕಟ್‌ ಹೇಳಿರುವ ಈ ಸಿನಿಮಾದ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಗಿದ್ದು, ಸಿನಿಮಾ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ.

ಸಿನಿಮಾ ಕುರಿತು ಮಾತನಾಡಿದ ಧನಂಜಯ, ‘ಇದೊಂದು ಹೊಸ ಕಥೆ. ಈಒಂದು ಕೋಟಿ ಸಿಕ್ಕಿಬಿಟ್ಟರೆ  ಜೀವನದಲ್ಲಿ ಸೆಟ್ಲ್ ಆಗಿಬಿಡಬಹುದು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ.  ಎಲ್ಲಾ ಮನೆಗಳಲ್ಲೂ ‘ಕೋಟಿ’ಯಂಥ ಅಣ್ಣ, ತಮ್ಮ, ಮಗ  ಸಿಗುತ್ತಾರೆ. ನಿಮ್ಮೊಳಗಿನ ‘ಕೋಟಿ’ಯನ್ನು ಪತ್ತೆ ಮಾಡಲು ಸಿನಿಮಾ ನೋಡಬೇಕು’ ಎಂದಿದ್ದಾರೆ.

‘ಕೋಟಿ’ ಸಿನಿಮಾ ಡ್ರಾಮಾ ಥ್ರಿಲ್ಲರ್ ಎಳೆಯನ್ನು ಹೊಂದಿದೆ. ‘ಕೋಟಿ’ಯಲ್ಲಿ ಧನಂಜಯಗೆ ಜೋಡಿಯಾಗಿ ಮೋಕ್ಷಾ ಕುಶಾಲ್ ನಟಿಸುತ್ತಿದ್ದಾರೆ. ಕೊಡಗಿನ ಮೋಕ್ಷಾ ಈ ಮೂಲಕ ಚಂದನವನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ಮಿಂಚಿದ್ದ ರಮೇಶ್ ಇಂದಿರಾ ಈ ಸಿನಿಮಾದಲ್ಲಿ ಖಳನಟನಾಗಿ ಕಾಣಿಸಿಕೊಂಡಿದ್ದಾರೆ.

ವಾಸುಕಿ ವೈಭವ್ ಹಾಡುಗಳಿಗೆ ಸ್ವರ ಸಂಯೋಜನೆ, ನೊಬಿನ್ ಪೌಲ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಮೂರು ಹಾಡುಗಳಿಗೆ ಯೋಗರಾಜ್ ಭಟ್ ಸಾಹಿತ್ಯವಿದ್ದು, ಒಂದು ಹಾಡನ್ನು ವಾಸುಕಿ ಬರೆದಿದ್ದಾರೆ.  ರಂಗಾಯಣ ರಘು, ತಾರಾ, ಪೃಥ್ವಿ ಶಾಮನೂರು, ಸರದಾರ ಸತ್ಯಾ ಮತ್ತು ತನುಜಾ ವೆಂಕಟೇಶ್ ತಾರಾಬಳಗದಲ್ಲಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!