ಚಿಕ್ಕಣ್ಣ ಹೊಸ ಸಿನಿಮಾ ಅನೌನ್ಸ್

‘ಕಾಮಿಡಿ ಕಿಂಗ್’ ಚಿಕ್ಕಣ್ಣ ನಟನೆಯ ಹೊಸ ಸಿನಿಮಾ ಅನೌನ್ಸ್ ಆಗಿದೆ.

ಚಿಕ್ಕಣ್ಣ ನಾಯಕನಾಗಿ ನಟಿಸಿದ ಮೊದಲ ಸಿನಿಮಾ ‘ಉಪಾಧ್ಯಕ್ಷ’ ಬಾಕ್ಸಾಫೀಸ್‌ನಲ್ಲಿ ಗೆದ್ದ ಬಳಿಕ ಅವರ ಹೊಸ ಸಿನಿಮಾ ‘ಫಾರೆಸ್ಟ್’  ಅನೌನ್ಸ್ ಆಗಿದೆ.  ಸಿನಿಮಾದಲ್ಲಿ ಕನ್ನಡದ  ಮೂವರು ನಟರು ಕಾಣಿಸಿಕೊಳ್ಳುತ್ತಿದ್ದಾರೆ.

‘ಫಸ್ಟ್‌ ರ್‍ಯಾಂಕ್ ರಾಜು’ ಖ್ಯಾತಿಯ ಗುರುನಂದನ್, ಅನೀಶ್ ತೇಜೇಶ್ವರ್, ರಂಗಾಯಣ ರಘು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿಕ್ಕಣ್ಣ ನಾಯಕನಾಗಿ ನಟಿಸಿದ ಎರಡನೇ ಸಿನಿಮಾದಲ್ಲಿ ಮಲ್ಟಿಸ್ಟಾರ್‌  ಆಯ್ಕೆ ಮಾಡಿಕೊಂಡಿದ್ದಾರೆ.

ಈ ಸಿನಿಮಾಗೆ ‘ಬ್ರಹ್ಮಾಚಾರಿ’, ‘ಡಬಲ್ ಇಂಜಿನ್’ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿರುವ ಚಂದ್ರ ಮೋಹನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಾಮಿಡಿ ಸಿನಿಮಾಗಳನ್ನೇ ಹೆಚ್ಚಾಗಿ ನಿರ್ದೇಶನ ಮಾಡಿರುವ ಚಂದ್ರ ಮೋಹನ್ ಮತ್ತೊಂದು ಕಾಮಿಡಿ ಕಮ್ ಅಡ್ವೆಂಚರ್ ಸಿನಿಮಾವನ್ನು ತೆರೆಮೇಲೆ ತರುವುದಕ್ಕೆ ಹೊರಟಿದ್ದಾರೆ.

‘ಫಾರೆಸ್ಟ್’ ಸಿನಿಮಾದ ಶೇ. 80ರಷ್ಟು ಭಾಗ ಕಾಡಿನಲ್ಲಿಯೇ ಚಿತ್ರೀಕರಣ ನಡೆಯಲಿದೆ.  ಎನ್‌ಎಂಕೆ ಬ್ಯಾನರ್ ಮೂಲಕ ಕಾಂತರಾಜು  ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾ ತಂಡದ ಪ್ರಕಾರ ಈ ಸಿನಿಮಾ ಫನ್ ಜೊತೆಗೆ ಥ್ರಿಲ್ಲಿಂಗ್ ರೈಡ್ ಅನುಭವನ್ನು ನೀಡಲಿದೆ.

ಸಿನಿಮಾಗೆ ವಿ. ರವಿಶಂಕರ್ ಕ್ಯಾಮರಾ ವರ್ಕ್ ಮಾಡುತ್ತಿದ್ದಾರೆ. ಅರ್ಜುನ್ ಕಿಟ್ಟು ಎಡಿಟಿಂಗ್, ಧರ್ಮವೀರ್-ವೀರ್ ಸಮರ್ಥ್ ಸಂಗೀತ ನಿರ್ದೇಶನವಿದೆ. ಉಳಿದ ಮಾಹಿತಿ ಮುಂದಿನ ದಿನಗಳಲ್ಲಿ ಹೊರಬೀಳುವ ಸಾಧ್ಯತೆಯಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!