ಕನ್ನಡತಿ ಜೊತೆ ಜೇಕಬ್ ಬೆಥೆಲ್ ಡೇಟಿಂಗ್

‘ನ್ಯಾಷನಲ್ ಕ್ರಷ್’  ಆಧ್ಯಾ ಆನಂದ್ ಜೊತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಇಂಗ್ಲೆಂಡ್ ಆಟಗಾರ ಜೇಕಬ್ ಬೆಥೆಲ್ ಸೀಕ್ರೆಟ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ  ಗ್ರಾಸವಾಗಿವೆ.

ನೆಟ್‌ಫ್ಲಿಕ್ಸ್‌ನ ‘ಬಾಂಬೆ ಬೇಗಮ್ಸ್’ ಹಾಗೂ ‘ಕ್ರಶ್ಡ್’ ವೆಬ್ ಸೀರೀಸ್ ಮೂಲಕ ದೇಶಾದ್ಯಂತ ‘ನ್ಯಾಷನಲ್ ಕ್ರಷ್’ ಆಗಿರುವ ಆಧ್ಯಾ ಆನಂದ್  ಮತ್ತು ಜೇಕಬ್ ಒಟ್ಟಿಗೆ ಕಾಫಿ ಹಂಚಿಕೊಳ್ಳುತ್ತಿರುವ ಫೋಟೋವೊಂದು ರೆಡ್ಡಿಟ್  ಮತ್ತು ಎಕ್ಸ್  ವೇದಿಕೆಗಳಲ್ಲಿ ಹರಿದಾಡಲು ಶುರುವಾಗಿದೆ. ಇವರಿಬ್ಬರ ನಡುವೆ ಪ್ರೀತಿ ಅಂಕುರಿಸಿದೆ ಎಂಬ ಗಾಸಿಪ್‌ಗೆ ಈ ಫೋಟೋ ರೆಕ್ಕೆಪುಕ್ಕ ನೀಡಿದೆ.

ಮೂಲತಃ ಕನ್ನಡತಿಯಾಗಿರುವ ಆಧ್ಯಾ ಆನಂದ್  ಸಿಂಗಾಪುರದಲ್ಲಿ ರಂಗಭೂಮಿ ತರಬೇತಿ ಪಡೆದಿದ್ದಾರೆ. ಬಾಲಿವುಡ್‌ನ ದಿಗ್ಗಜ ನಟ ಅನುಪಮ್ ಖೇರ್ ಮತ್ತು ಅತುಲ್ ಮೊಂಗಿಯಾ ಅವರ ಇನ್‌ಸ್ಟಿಟ್ಯೂಟ್‌ನಲ್ಲೂ ನಟನಾ ತರಬೇತಿ ಪಡೆದಿದ್ದಾರೆ. ನೆಟ್‌ಫ್ಲಿಕ್ಸ್‌ನ ‘ಬಾಂಬೆ ಬೇಗಮ್ಸ್’ ಸರಣಿಯ ಮೂಲಕ ಭಾರತೀಯ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. 2022ರಲ್ಲಿ ತೆರೆಕಂಡ ಅಮೆಜಾನ್ ಮಿನಿಯ ‘ಕ್ರಶ್ಡ್’ ಸಿರೀಸ್ ಮೂಲಕ ದೇಶಾದ್ಯಂತ ಅಪಾರ ಅಭಿಮಾನಿ ಬಳಗ ಸಂಪಾದಿಸಿದ್ದಾರೆ.

ಡೇಟಿಂಗ್ ಸುದ್ದಿ ಬಗ್ಗೆ ಆರ್‌ಸಿಬಿ ಆಟಗಾರ ಜೇಕಬ್ ಬೆಥೆಲ್ ಅಥವಾ ನಟಿ ಆಧ್ಯಾ ಆನಂದ್  ಎಲ್ಲೂ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ.  ಇದು ಕೇವಲ ಸೋಶಿಯಲ್ ಮೀಡಿಯಾದ ಗಾಳಿಸುದ್ದಿಯೇ ಅಥವಾ ನಿಜವೇ ಎಂಬುದು ಇವರೇ ಸ್ಪಷ್ಟಪಡಿಸಬೇಕಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!