ಯುಗಾದಿ ಹಬ್ಬದಂದು ಮೆಗಾಸ್ಟಾರ್ ಚಿರಂಜೀವಿ ಸಮಾಜ ಸೇವೆಯ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದು, ಶಿಕ್ಷಣದಾನ ಯೋಜನೆಯನ್ನು ಘೋಷಿಸಿದ್ದಾರೆ.
ಚಿರಂಜೀವಿ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಯೋಜನೆ ಆರಂಭಿಸಲು ನಿರ್ಧರಿಸಿದ್ದಾರೆ. ಹೊಸ ಪ್ರಯತ್ನಕ್ಕೆ ತಮಿಳು ನಟ ಸೂರ್ಯ ಅವರ ‘ಅಗರಂ ಫೌಂಡೇಶನ್’ ಸ್ಪೂರ್ತಿ ನೀಡಿದೆ ಎಂದು ಚಿರಂಜೀವಿ ಹೇಳಿದ್ದಾರೆ.
ಈ ಯೋಜನೆ ಕೇವಲ ತೆಲುಗು ರಾಜ್ಯಗಳಿಗೆ ಸೀಮಿತವಾಗದೆ, ದೇಶದ ಯಾವುದೇ ಭಾಗದಲ್ಲಿ ಶಿಕ್ಷಣದಿಂದ ವಂಚಿತರಾಗುವ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಲಿದೆ. ರಕ್ತದಾನ ಜೀವ ಉಳಿಸಿದರೆ, ಶಿಕ್ಷಣ ಒಂದು ತಲೆಮಾರಿನ ಭವಿಷ್ಯವನ್ನೇ ಬದಲಿಸುತ್ತದೆ ಎಂದು ಚಿರಂಜೀವಿ ಆಶಯ ವ್ಯಕ್ತಪಡಿಸಿದ್ದಾರೆ.
ಚಿರಂಜೀವಿ ಚಾರಿಟಬಲ್ ಟ್ರಸ್ಟ್ ಮೂಲಕ ರಕ್ತದಾನ ಮತ್ತು ನೇತ್ರದಾನ ಶಿಬಿರಗಳನ್ನು ನಡೆಸಿ ಲಕ್ಷಾಂತರ ಜೀವಗಳನ್ನು ಉಳಿಸಿರುವ ಚಿರಂಜೀವಿ, ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಯೋಜನೆ ಆರಂಭಿಸಲು ನಿರ್ಧರಿಸಿ ಅಭಿಮಾನಿಗಳು ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ರಾಜಕೀಯದಿಂದ ಸ್ವಲ್ಪ ದೂರ ಇರುವ ಚಿರಂಜೀವಿ ಅವರು ಸಮಾಜಮುಖಿ ಸೇವೆಗಳಲ್ಲಿ ತೊಡಗಿಸಿಕೊಂಡು ಜನತೆಗೆ ಸಹಾಯ ಮಾಡುತ್ತಿದ್ದಾರೆ.
—-





Be the first to comment