‘ಜನ ನಾಯಗನ್’ ಚಿತ್ರದಲ್ಲಿ ಮೇಜರ್ ಸರ್ಜರಿ

ತಮಿಳುನಾಡಿನ ಮುಖ್ಯಮಂತ್ರಿ  ವಿಜಯ್ ಅಭಿನಯದ  ‘ಜನ ನಾಯಗನ್’ ಚಿತ್ರದ ಅಂತಿಮ ಆವೃತ್ತಿಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ.

ಎಚ್. ವಿನೋದ್ ನಿರ್ದೇಶನದ  ರಾಜಕೀಯ ಆ್ಯಕ್ಷನ್ ಚಿತ್ರ ಆರಂಭದಲ್ಲಿ ಜನವರಿಯಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಸೆನ್ಸಾರ್ ಪ್ರಕ್ರಿಯೆ ವಿಳಂಬವಾದ ಕಾರಣ ಚಿತ್ರ ಬಿಡುಗಡೆ  ಮುಂದೂಡಲ್ಪಟ್ಟಿತ್ತು.  ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ ಪಕ್ಷ ಭರ್ಜರಿ ಗೆಲುವು ಸಾಧಿಸಿ ವಿಜಯ್ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದರು.

ಈ ಬೆಳವಣಿಗೆಯ ನಂತರ ಚಿತ್ರದ ಟೈಟಲ್ ಕಾರ್ಡ್‌ನಲ್ಲೂ ಮಹತ್ವದ ಬದಲಾವಣೆ ಮಾಡಲಾಗಿದೆ. ಕಳೆದ ಹಲವು ವರ್ಷಗಳಿಂದ ಬಳಸುತ್ತಿದ್ದ ‘ದಳಪತಿ ವಿಜಯ್’ ಬದಲಿಗೆ ಈ ಬಾರಿ ‘ಮಾನ್ಯ ತಮಿಳುನಾಡು ಮುಖ್ಯಮಂತ್ರಿ’ ಎಂಬ ಹೊಸ ಗುರುತಿನೊಂದಿಗೆ ವಿಜಯ್ ಅವರನ್ನು ಪರಿಚಯಿಸಲಾಗಿದೆ.

ವಿಜಯ್ ಅವರ ಸಿಗ್ನೇಚರ್ ಕೈಬೀಸುವ ದೃಶ್ಯವನ್ನು ‘ರಾವಣ ಮಾವಂದಾ’ ಹಾಡಿನಲ್ಲಿ ಹೊಸದಾಗಿ ಸೇರಿಸಲಾಗಿದೆ. ಅವರ ರಾಜಕೀಯ ಪಯಣ ಹಾಗೂ ಪಕ್ಷಕ್ಕೆ ಸಂಬಂಧಿಸಿದ ಹಲವು ಉಲ್ಲೇಖಗಳನ್ನು ಚಿತ್ರದ ಅಂತಿಮ ಕಟ್‌ನಲ್ಲಿ ಅಳವಡಿಸಲಾಗಿದೆ.

ಸಿಬಿಎಫ್‌ಸಿ ಸೂಚನೆಯಂತೆ ಸುಮಾರು 20 ಸೆಕೆಂಡ್ ದೃಶ್ಯಗಳನ್ನು ತೆಗೆದುಹಾಕಿ, 10 ಸೆಕೆಂಡ್ ಹೊಸ ದೃಶ್ಯಗಳನ್ನು ಸೇರಿಸಲಾಗಿದೆ. ಕೆಲವು ಧಾರ್ಮಿಕ ಉಲ್ಲೇಖಗಳಿರುವ ಪದಗಳನ್ನು ಮ್ಯೂಟ್ ಮಾಡುವಂತೆ ಸೂಚಿಸಲಾಗಿದ್ದು, ಬದಲಾವಣೆ ಮಾಡಲಾಗಿದೆ.

ಸುಮಾರು 7 ತಿಂಗಳ ವಿಳಂಬದ ಬಳಿಕ ಜುಲೈ 23ರಂದು ಚಿತ್ರ ಅದ್ಧೂರಿಯಾಗಿ ತೆರೆ ಕಾಣುತ್ತಿದೆ. ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್ ಹಾಗೂ ನರೇನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!