ನೋರಾ ಫತೇಹಿ ವಿರುದ್ಧ ಫತ್ವಾ

‘ಕೆಡಿ: ದಿ ಡೆವಿಲ್’ ಸಿನಿಮಾದ ‘ಸರ್ಕೆ ಚುನರಿ’  ಹಾಡಿನ ನೃತ್ಯ ಭಂಗಿಗಳು ಹಾಗೂ ಸಾಹಿತ್ಯವನ್ನು ‘ಅಶ್ಲೀಲ’ ಎಂದು ಆರೋಪಿಸಿ  ನೋರಾ ಫತೇಹಿ ವಿರುದ್ಧ ಧಾರ್ಮಿಕ ಸಂಸ್ಥೆ ಫತ್ವಾ ಹೊರಡಿಸಿದೆ.

ಉತ್ತರ ಪ್ರದೇಶದ ಅಲಿಗಢದಲ್ಲಿರುವ ಮುಸ್ಲಿಂ ಪರ್ಸನಲ್ ದಾರುಲ್ ಇಫ್ತಾ ಸಂಸ್ಥೆ ನಿರ್ದೇಶಕ ಪ್ರೇಮ್ ಹಾಗೂ ಧ್ರುವ ಸರ್ಜಾ ಅಭಿನಯದ ‘ಕೆಡಿ: ದಿ ಡೆವಿಲ್’ ಸಿನಿಮಾದ ‘ಸರ್ಕೆ ಚುನರಿ’ ಹಾಡಿನ ವಿರುದ್ಧ ಕ್ರಮ ಕೈಗೊಂಡಿದೆ. ‘ಅಶ್ಲೀಲ’ ನೃತ್ಯ ಭಂಗಿಗಳು ಹಾಗೂ ಸಾಹಿತ್ಯ  ಇಸ್ಲಾಮಿಕ್ ಮೌಲ್ಯಗಳಿಗೆ ವಿರುದ್ಧವಾಗಿದ್ದು, ಸಮಾಜದ ಮೇಲೆ ದುಷ್ಪ್ರಭಾವ ಬೀರುತ್ತವೆ ಎಂದು ಸಂಸ್ಥೆ ಹೇಳಿದೆ.

ನೋರಾ ಫತೇಹಿ  “ಹಾಡು ಮೂರು ವರ್ಷಗಳ ಹಿಂದೆ ಕನ್ನಡದಲ್ಲಿ ಚಿತ್ರೀಕರಿಸಲಾಯಿತು. ನನಗೆ ಕನ್ನಡ ತಿಳಿಯದ ಕಾರಣ ಅರ್ಥ ಗೊತ್ತಿರಲಿಲ್ಲ. ಹಿಂದಿ ಆವೃತ್ತಿಯ ಬದಲಾವಣೆಗಳು ನನ್ನ ಗಮನಕ್ಕೆ ಬಂದಿಲ್ಲ” ಎಂದು ಹೇಳಿದ್ದಾರೆ.

ಹಿಂದಿ ಆವೃತ್ತಿಯಾದ ‘ಸರ್ಕೆ ಚುನರಿ’ ಹಾಡಿನ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿದ್ದು,  ನೋರಾ ಫತೇಹಿ ವಿರುದ್ಧ ಫತ್ವಾ ಹೊರಡಿಸಿರುವ ಘಟನೆ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

ಮಹಿಳೆಯರ ಅಶ್ಲೀಲ ಚಿತ್ರಣದ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ  ನೋರಾ ಫತೇಹಿ, ಸಂಜಯ್ ದತ್, ನಿರ್ದೇಶಕ ಪ್ರೇಮ್  ಸೇರಿದಂತೆ ಹಲವರಿಗೆ ಸಮನ್ಸ್ ನೀಡಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಈ ಹಾಡು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!