ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಂದ `ಕುಮಾರಿ 21 ಈ’ ಚಿತ್ರದ ಟ್ರೇಲರ್ ಬಿಡುಗಡೆ

ಶ್ರೀಹಯಗ್ರೀವ ಕಲಾಚಿತ್ರ ಲಾಂಛನದಲ್ಲಿ ಸಂಪತ್ ಕುಮರ್ ಹಾಗೂ ಶ್ರೀಧರ್ ರೆಡ್ಡಿ ಅವರು ನಿರ್ಮಿಸಿರುವ ಖ್ಯಾತ ನಟ ದೇವರಾಜ್ ಅವರ ದ್ವಿತೀಯ ಪುತ್ರ ಪ್ರಣಾಮ್ ದೇವರಾಜ್ ನಾಯಕರಾಗಿ ಅಭಿನಯಿಸಿರುವ `ಕುಮಾರಿ 21 ಈ` ಚಿತ್ರದ ಟ್ರೇಲರನ್ನು ಇತ್ತೀಚೆಗೆ ಛಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದರು. ಯುಟ್ಯೂಬ್‍ನಲ್ಲಿ ಟ್ರೇಲರ್‍ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರ ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಶ್ರೀಮಾನ್ ವೆಮುಲ ಅವರು ನಿರ್ದೇಶಿಸಿರುವ ಈ ಚಿತ್ರಕ್ಕೆ ಸುಕುಮಾರ್ ಕಥೆ, ಚಿತ್ರಕಥೆ ಬರೆದಿದ್ದಾರೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ. ಸಾಗರ್ ಮಹತಿ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ರಾಮಿ ರೆಡ್ಡಿ ಅವರ ಛಾಯಾಗ್ರಹಣ ಹಾಗೂ ಬಾಬು ಖಾನ್ ಅವರ ಕಲಾ ನಿರ್ದೇಶನವಿದೆ. ಪ್ರಣಾಮ್ ದೇವರಾಜ್, ನಿಧಿ ಕುಶಾಲಪ್ಪ. ರವಿಕಾಳೆ, ಅವಿನಾಶ್, ಉಮೇಶ್, ಸಂಗೀತ, ರಿತೀಶ್, ಅಕ್ಷಯ್, ಮನೋಜ್, ಚಿದಾನಂದ್, ಅಪೂರ್ವ ಗೌಡ, ವಾಣಿಶ್ರೀ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

This Article Has 1 Comment
  1. Pingback: Tow West Palm Beach FL

Leave a Reply

Your email address will not be published. Required fields are marked *

Translate »
error: Content is protected !!