ಬೆಟಾಲಿಯನ್

ತರ್ಲೆ ಮಾಡೋ ಹುಡುಗರ ಕಥೆ ‘ಬೆಟಾಲಿಯನ್’

ಆಕಾಶ ಪಿಕ್ಚರ್ಸ್ ಮೂಲಕ ಪ್ರಕಾಶ್ ಎಸ್. ಬೂದೂರು ಅವರು ನಿರ್ಮಿಸುತ್ತಿರುವ, ಕೆ.ಎಸ್.ಕೃಷ್ಣಕುಮಾರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಬೆಟಾಲಿಯನ್ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. ಕುಮಾರ ಪಾರ್ಕ್ ನ ಶ್ರೀಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಥಮ ದೃಶ್ಯಕ್ಕೆ ನಿರ್ಮಾಪಕ ಪ್ರಕಾಶ್ ಬೂದೂರು ಅವರು ಆರಂಭ ಫಲಕ ತೋರಿಸಿದರೆ, ಪಿ.ಸಿ. ಶೇಖರ್ ಕ್ಯಾಮೆರಾ ಚಾಲನೆ ಮಾಡಿದರು.

ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿತು.

ನಿರ್ದೇಶಕ ಕೃಷ್ಣಕುಮಾರ್ ಮಾತನಾಡುತ್ತ ಕಳರದ 15 ವರ್ಷಗಳಿಂದ ಸಹ, ಸಹಾಯಕ ನಿರ್ದೇಶಕನಾಗಿ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ಹಿಂದೆ ಲಂಬೋದರ ಎಂಬ ಚಿತ್ರ ನಿರ್ದೇಶಿಸಿದ್ದೆ.‌ ಇದು ಎರಡನೇ ಚಿತ್ರ. ಬೆಟಾಲಿಯನ್ ಅಂದ್ರೆ ಏಳು ಜನ ಹುಡುಗರ ಗ್ಯಾಂಗ್. ಎಮೋಷನಲ್, ಫ್ರೆಂಡ್ ಫಿಪ್ ಕಥೆಯ ಜತೆಗೆ ಹುಡುಗರ ಕಿತ್ತಾಟ ಇದೆಲ್ಲವನ್ನೂ ಇಟ್ಟುಕೊಂಡು ಅವರ ಜರ್ನಿ ಹೇಗಿರುತ್ತೆ ಅಂತ ಹೇಳಹೊರಟಿದ್ದೇವೆ. ಫೋಸ್ಟರ್ ನಲ್ಲಿ ತೋರಿಸಿರುವ ಮನೆ ಆ ಬೆಟಾಲೊಯನ್ ಗಳು ವಾಸವಿರೋ ಜಾಗ. ನಾಳೆಯಿಂದಲೇ ಚಿತ್ರೀಕರಣ ಆರಂಭಿಸಿ ಕಾಸರಗೋಡು, ಕಾರ್ಕಳ, ಗೋವಾ, ಬೆಂಗಳೂರು ಸುತ್ತಮುತ್ತ ಸುಮಾರು 50ದಿನಗಳ ಕಾಲ ಶೂಟಿಂಗ್ ನಡೆಸುವ ಪ್ಲಾನಿದೆ. ಪ್ರಮೋದ್ ಶೆಟ್ಟಿ ಅವರು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಹನ್, ಮಹಾನಟಿ ಖ್ಯಾತಿಯ ವಂಶಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ 3 ಹಾಡುಗಳು, ಒಂದು ಆಕ್ಷನ್ ಇದೆ ಎಂದು ಹೇಳಿದರು.

ಬೆಟಾಲಿಯನ್

ನಿರ್ಮಾಪಕ ಪ್ರಕಾಶ್ ಬೂದೂರು ಮಾತನಾಡುತ್ತ ಕಳೆದ 20 ವರ್ಷಗಳಿದ ಅಲಯನ್ಸ್ ಯುನಿವರ್ಸಿಟಿ ಎಜುಕೇಶನ್ ಇನ್ಸ್ಟಿಟ್ಯೂಟ್ ನಡೆಸುತ್ತಿದ್ದೇನೆ. ಈಗಾಗಲೇ ಶಿವಣ್ಣ, ವಿಜಯ ರಾಘವೇಂದ್ರ ಅಭಿನಯದ ಮಹಾನ್ ಎಂಬ ಚಿತ್ರ ನಿರ್ಮಿಸಿದ್ದು ಅದು ರಿಲೀಸ್ ಗೆ ರೆಡಿ ಇದೆ. ಇದು ನಮ್ಮ ಎರಡನೇ ಚಿತ್ರ. ಈ ಕಥೆಯನ್ನು ನಿರ್ದೇಶಕರು ಬಂದು ಹೇಳಿದಾಗ ಚೆನ್ನಾಗಿದೆ ಅನಿಸಿತು. ಹೊಸದಾಗಿ ಏನಾದರೂ ಮಾಡಿದಾಗ, ಈಗಿನ ಜನರೇಶನ್ ಇಷ್ಟಪಡುವಂಥ ಒಳ್ಳೆಯ ಸಿನಿಮಾ ಮಾಡಿದಾಗ ಪ್ರೇಕ್ಷಕರು ಖಂಡಿತ ಬರ್ತಾರೆ. ಮನರಂಜನೆ ಅಂದ್ರೆ ಆಲ್ ಎಲಿಮೆಂಟ್ಸ್ ಇರಬೇಕು. 6-8 ತಿಂಗಳಿಂದ ಕಥೆ, ಚಿತ್ರಕಥೆ ರೆಡಿ ಮಾಡಿಕೊಂಡಿದ್ದಾರೆ. ಸ್ನೇಹದಲ್ಲಿ ಖುಷಿ, ಅಸೂಯೆ, ದ್ವೇಶ ಎಲ್ಲಾ ಇರುತ್ತೆ. ಇದೊಂದು ಕಾಮಿಡಿ ಥ್ರಿಲ್ಲರ್ ಸಿನಿಮಾ ಎಂದರು. ನಡ ಪ್ರಮೋದ್ ಶೆಟ್ಟಿ ಮಾತನಾಡಿ ನಿರ್ದೇಶಕರು ಬಂದು ಕಥೆ, ನನ್ನ ಪಾತ್ರ ಹೇಳಿದಾಗ ಇಷ್ಟವಾಯ್ತು. ಹಾಗಾಗಿ ಒಪ್ಪಿದೆ. ಈ ಚಿತ್ರವನ್ನು ಲೋಕಲ್ ಥೇಟರ್ ಆಡಿಯನ್ಸ್ ಗಮನದಲ್ಲಿಟ್ಟುಕೊಂಡು ಮಾಡುತ್ತಿದ್ದೇವೆ ಎಂದರು.

ನಾಯಕನಟ ಆಹನ್ ಮಾತನಾಡಿ ಐದಾರು ವರ್ಷ ರಂಗಭೂಮಿಯಲ್ಲಿದ್ದೇನೆ. ದೇವಸಸ್ಯ ಸೇರಿದಂತೆ 6 ಸಿನಿಮಾ ಮಾಡಿದ್ದೇನೆ. ಇದರಲ್ಲಿ ನನ್ನದು ಸಂತು ಎಂಬ ಪಾತ್ರ. ಇದು 18-20 ವರ್ಷದ ಏಜ್ ಗ್ರೂಪ್ ಹುಡುಗರ ಕಥೆ, ಇಗೋ ಕ್ಲಾಶಸ್ ಎಲ್ಲಾ ಇದೆ ಎಂದರು. ನಾಯಕಿ ವಂಶಿ ಮಾತನಾಡಿ ಎಲ್ಲರಿಗೂ ಕನೆಕ್ಸ್ ಆಗುವಂಥ ಕಥೆಯಿದು. ಈ ಹುಡುಗರ ಗ್ಯಾಂಗ್ ಗೆ ನಾನು ಹೇಗೆ ಎಂಟ್ರಿ ಆಗುತ್ತೇನೆ ಅನ್ನೋದೇ ಕುತೂಹಲ ಎಂದು ಹೇಳಿದರು. ಈ ಚಿತ್ರಕ್ಕೆ ಚೇತನ್ ಅಮ್ಮಯ್ಯ ಅವರ ಸಂಗೀತ ಸಂಯೋಜನೆ, ಅಜಯ್ ಅವರ ಕ್ಯಾಮೆರಾ ವರ್ಕ್ ಇದೆ.

ಬೆಟಾಲಿಯನ್

Be the first to comment

Leave a Reply

Your email address will not be published. Required fields are marked *

Translate »
error: Content is protected !!