ಅಣ್ಣ from Mexico

ಡಾಲಿ‌ ಧನಂಜಯ್ ನಟನೆಯ ‘ಅಣ್ಣ from Mexico’ ಟೀಸರ್ ರಿಲೀಸ್

ನಟ ರಾಕ್ಷಸ ಡಾಲಿ ಧನಂಜಯ್ ನಟಿಸುತ್ತಿರುವ ‘ಅಣ್ಣ from Mexico’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್, ಟೀಸರ್ ಬಿಡುಗಡೆಗೊಳಿಸಿ ಇಡೀ ತಂಡಕ್ಕೆ ಶುಭ ಹಾರೈಸಿದರು.

ಬಳಿಕ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಟೀಸರ್ ಥ್ರಿಲ್ಲಿಂಗ್ ಆಗಿದೆ. ಹೊಸತನದಿಂದ ಕೂಡಿದೆ. ಶ್ರೀಮಂತಿಕೆಯಿಂದ ಕಾಣಿಸುತ್ತಿದೆ. ಧನಂಜಯ್ ಆಕ್ಟಿಂಗ್ ಸೂಪರ್. ‌ಅದ್ರಲ್ಲೂ ಕರ್ನಾಟಕ ಲಾಕೆಟ್ ಬಹಳಷ್ಟು ಇಷ್ಟವಾಯ್ತು. ಮನಸ್ಸಿಗೆ ಸಮಾಧಾನವಾಯ್ತು. ಟೀಸರ್ ನೋಡಿದರೆ ಸಿನಿಮಾ ಹೇಗಿರಲಿದೆ ಎಂಬ ಕ್ಯೂರಿಯಾಸಿಟಿ ಹೆಚ್ಚಿಸುತ್ತದೆ. ನಾವು ಚಿತ್ರರಂಗಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಚಿತ್ರ ನಿರ್ಮಾಣಕ್ಕಿಳಿದಿದ್ದೇವೆ. ಕನ್ನಡ ಚಲನಚಿತ್ರಗಳನ್ನು ನೋಡಿಕೊಂಡು ಬೆಳೆದಿದ್ದೇವೆ. ಕನ್ನಡ ಚಿತ್ರರಂಗ ಸಾಕಷ್ಟು ಶ್ರೀಮಂತವಾಗಿದೆ. ಈ ಚಿತ್ರದ ಕಥೆ ಕೇಳಿದೆವು ಇಷ್ಟವಾಯ್ತು. ಚಿತ್ರದಲ್ಲಿ ಒಂದೊಳ್ಳೆ ಪ್ರಯೋಗ ಮಾಡುವ ಉದ್ದೇಶದಿಂದ ಚಾಮುಂಡಿ ಆಶೀರ್ವಾದ ಪಡೆದು ಈ ಜರ್ನಿ ಶುರು ಮಾಡಿದೆವು ಎಂದರು.

ಡಾಲಿ ಧನಂಜಯ್ ಮಾತನಾಡಿ, ಈ ಸಿನಿಮಾ ಶುರುವಾದ ಪ್ರೊಸೆಸ್ ನನಗೆ ಬಹಳ ಖುಷಿ. ಹೊಯ್ಸಳ ಸಿನಿಮಾ ಬೆಳಗಾವಿಯಲ್ಲಿ ನಡೆಯುವಾಗ ಲಕ್ಷ್ಮೀ ಮೇಡಂ ಮನೆಗೆ ಹೋಗಿ ಊಟ ಮಾಡ್ಕೊಂಡು ಬರುವಾಗ ನಮ್ಮ ಬ್ರದರ್ ಗೆ ಸಿನಿಮಾ ಮಾಡುವ ಇಂಟ್ರೆಸ್ಟ್ ಇದೆ. ಏನು ಮಾಡಬಹುದು ನೋಡಿ ಎಂದಿದ್ದರು. ಆ ಬಳಿಕ ಈ ಜರ್ನಿ ಶುರುವಾಯ್ತು. ಚೆನ್ನಾರಾಜು ಅವರು ಪ್ರೊಡಕ್ಷನ್ ‌ಮಾಡಿದ್ದಾರೆ ಎಂಬುವುದು ಗೊತ್ತಾಯ್ತು. ಅವರಿಗೆ ಸಖತ್ ಸ್ಟೈಲೀಶ್ ಆಗಿ, ಆಕ್ಷನ್ ಈ ರೀತಿ ನನ್ನನ್ನು ತೋರಿಸಬೇಕು ಎಂದುಕೊಂಡಿದ್ದರು. ಆದರೆ ಮೇಡಂ ಬರ್ತಾರೆ ಎಂದಾಗ ಆಕ್ಷನ್. ಮಾತ್ರವಲ್ಲ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಇರಬೇಕು ಎಂದುಕೊಂಡೆವು. ಯಾಕೆಂದರೆ ಅವರು ಜವಾಬ್ದಾರಿಯುವ ಸ್ಥಾನದಲ್ಲಿ ಇದ್ದಾರೆ. ಹೀಗಾಗಿ ನಾವು ಬಡವ ರಾಸ್ಕಲ್ ಡೈರೆಕ್ಟರ್ ಅವರನ್ನು ಆಯ್ಕೆ ಮಾಡಿದೆವು. ಹೀಗೆ ಒಳ್ಳೆ ಟೀಂ ಆಯ್ತು ಎಂದರು.

ಅಣ್ಣ from Mexico

ಚಿತ್ರಕ್ಕೆ ನಿರ್ದೇಶಕ ಶಂಕರ್‌ ಗುರು ಆಕ್ಷನ್ ಕಟ್ ಹೇಳಿದ್ದಾರೆ. ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸುತ್ತಿದ್ದು, ಸಿನಿಮಾದಲ್ಲಿದ್ದ ರಂಗಾಯಣ ರಘು, ನಾಗಭೂಷಣ, ಪೂರ್ಣ ಮೈಸೂರು ಈ ಚಿತ್ರದ ಮುಖ್ಯ ತಾರಾಗಣದಲ್ಲಿದ್ದು, ವಾಸುಕಿ ವೈಭವ್‌ ಸಂಗೀತ, ಅಜಯ್ ಸಂಕಲನ , ಗುಣ ಕಲಾ ನಿರ್ದೇಶನ ಚಿತ್ರಕ್ಕಿದೆ. ಐರಾ ಫಿಲ್ಮ್ಸ್​ ಹಾಗೂ ರಾಯಲ ಸ್ಟುಡಿಯೋಸ್​​​​ ಬ್ಯಾನರ್​​ ಅಡಿ ಚಿತ್ರ ನಿರ್ಮಾಣವಾಗುತ್ತಿದೆ.

ಈ ಹಿಂದೆ ಬಡವ ರಾಸ್ಕಲ್ ನಂತಹ ಸೂಪರ್ ಹಿಟ್ ಚಿತ್ರ ಕೊಟ್ಟಿರುವ ಅದೇ ತಂಡ ‘ಅಣ್ಣ from Mexico’ಗಾಗಿ ಒಂದಾಗಿದೆ. ಬಹಳ ಅದ್ದೂರಿಯಾಗಿ ಚಿತ್ರವನ್ನು ಕಟ್ಟಿಕೊಡುತ್ತಿದೆ.

ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ, ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ, ಚಿತ್ರದ ನಾಯಕ ಡಾಲಿ ಧನಂಜಯ್, ನಟಿ ರೀಷ್ಮಾ ನಾಣಯ್ಯ, ಚಿತ್ರದ ನಿರ್ದೇಶಕರಾದ ಶಂಕರ್‌ ಗುರು, ಸಹ ನಿರ್ಮಾಪಕರಾದ ಸತ್ಯ ರಾಯಲ, Z studiosನ ದಿವ್ಯಾ, ಆನಂದ್ ಆಡಿಯೋದ ಶ್ಯಾಮ್, ಸಂಗೀತ ನಿರ್ದೇಶಕ ವಾಸುಕಿ ವೈಭವ್, ನಟ ನಾಗಭೂಷಣ್ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು. ‌

Be the first to comment

Leave a Reply

Your email address will not be published. Required fields are marked *

Translate »
error: Content is protected !!