ಅನಿರುದ್ಧ್

ಡಿಕನ್ಸ್ಟ್ರಕ್ಟ್ ನ ಅಧಿಕೃತ ಬ್ರ್ಯಾಂಡ್ ಪಾರ್ಟ್ನರ್ ಆಗಿ ಅನಿರುದ್ಧ್ ರವಿಚಂದರ್ ಘೋಷಣೆ

ಇಂದಿನ ಈ ಆಧುನಿಕ ಯುಗದಲ್ಲಿ ಬ್ರ್ಯಾಂಡ್ ಕೊಲ್ಯಾಬರೇಷನ್ ವಿಭಿನ್ನ ರೂಪ ಪಡೆಯುತ್ತಿದೆ. ಇದಕ್ಕೆ ಖ್ಯಾತ ಸ್ಕಿನ್ ಕೇರ್ ಬ್ರ್ಯಾಂಡ್ ಡಿ -ಕನ್ಸ್ಟ್ರಕ್ಟ್, ಮ್ಯೂಸಿಕ್ ಸೆನ್ಸಾಷನ್ ರಾಕ್ ಸ್ಟಾರ್ ಅನಿರುದ್ದ್ ರವಿ ಚಂದರ್ ಅವರನ್ನ ಅಧಿಕೃತ ಬ್ರ್ಯಾಂಡ್ ಪಾರ್ಟ್ನರ್ ಆಗಿ ಘೋಷಿಸಿರುವುದೇ ಸಾಕ್ಷಿ. ಇದು ಹುಟ್ಟಿಕೊಂಡಿದ್ದು ಯಾವುದೇ ಬೋರ್ಡ್ ರೂಮ್ ಮೀಟಿಂಗ್ ನಲ್ಲಿ ಅಲ್ಲ ಬದಲಾಗಿ ಇಂಟರ್ನೆಟ್ ನಲ್ಲಿ ಎನ್ನುವುದು ವಿಶೇಷ.

ಇದೆಲ್ಲದಕ್ಕು ಕಾರಣ ಆ ವೈರಲ್ ಇನ್ಸ್ಟಾಗ್ರಾಮ್ ರೀಲ್. ಅನಿರುದ್ಧ್ ಅವರು ತಮ್ಮ ಸ್ಟೈಲಿಸ್ಟ್ ಜೊತೆ ಇರುವ ಆ ವಿಡಿಯೋದಲ್ಲಿ, ಹಿಂದಿನ ಟೇಬಲ್ ಮೇಲೆ ಡಿಕನ್ಸ್ಟ್ರಕ್ಟ್ ಸನ್‌ಸ್ಕ್ರೀನ್ ಇತ್ತು.ಇದನ್ನು ಅವರ ಅಭಿಮಾನಿಗಳು ಗಮನಿಸಿದರು.ಅಷ್ಟೇ, ಆ ಒಂದು ಸಣ್ಣ ವಿಷಯ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿತು. ಜನರು ಆ ಪ್ರಾಡಕ್ಟ್ ಬಗ್ಗೆ ಮಾತನಾಡಲು ಶುರು ಮಾಡಿದರು, ಹೀಗೆ ಸುಮ್ಮನೆ ಶುರುವಾದ ಒಂದು ವಿಷಯ ಕೊನೆಗೆ ಈ ದೊಡ್ಡ ಮಟ್ಟದ ಸಹಯೋಗಕ್ಕೆ (partnership) ದಾರಿಯಾಯಿತು.

​ಯಾವುದೇ ಪ್ಲ್ಯಾನ್ ಇಲ್ಲದೆ ನಡೆದ ಈ ಆಕಸ್ಮಿಕ ಘಟನೆಯನ್ನು ಗುರುತಿಸಿದ ಡಿಕನ್ಸ್ಟ್ರಕ್ಟ್ ಅರ್ಥಪೂರ್ಣವಾಗಿ ಬಳಸಿಕೊಳ್ಳಲು ನಿರ್ಧರಿಸಿತು.ನಿಜ ಜೀವನದ ಸಾಮಾನ್ಯ ಬಳಕೆಯಿಂದ ಶುರುವಾದ ಈ ವಿಷಯ, ಇಂದು ಒಂದು ಅರ್ಥಪೂರ್ಣ ಸಹಯೋಗವಾಗಿ (collaboration) ಬದಲಾಗಿದೆ. ಇದು ಸ್ಕ್ರಿಪ್ಟ್ ಮಾಡಿದ ಜಾಹೀರಾತಲ್ಲ, ಬದಲಾಗಿ ಬ್ರ್ಯಾಂಡ್ ಮತ್ತು ಕಲಾವಿದನ ನಡುವಿನ ನೈಜ ನಂಟು.

ನೈಜವಾದ ಕ್ಷಣಗಳೇ ಶಕ್ತಿಯುತವಾದ ಕಥೆಗಳಾಗುತ್ತವೆ ಎಂದು ನಾವು ಮೊದಲಿನಿಂದಲೂ ನಂಬಿಕೊಂಡು ಬಂದಿದ್ದೇವೆ,” ಎಂದು ಸಂಸ್ಥೆಯ ಸಿಇಒ ಮಾಲಿನಿ ಅಡಪುರೆಡ್ಡಿ ಹೇಳಿದ್ದಾರೆ. “ಆ ಒಂದು ಕ್ಷಣಕ್ಕೆ ಜನರು ಅಷ್ಟೊಂದು ಸಹಜವಾಗಿ ಸ್ಪಂದಿಸಿದ್ದನ್ನು ನೋಡಿದಾಗ, ಅದನ್ನೇ ಮುಂದುವರಿಸಿಕೊಂಡು ಹೋಗುವುದು ನಮಗೆ ಸರಿ ಎನಿಸಿತು. ಅನಿರುದ್ಧ್ ಅವರಲ್ಲಿನ ಪ್ರಾಮಾಣಿಕತೆ ಮತ್ತು ಎಲ್ಲರಿಗೂ ಹತ್ತಿರವಾಗುವಂತಹ ಗುಣಗಳು, ವಿಜ್ಞಾನದ ಆಧಾರದ ಮೇಲೆ ಬೆಳೆದಿರುವ ನಮ್ಮ ಬ್ರ್ಯಾಂಡ್‌ಗೆ ಸರಿಯಾಗಿ ಹೊಂದಿಕೆಯಾಗುತ್ತವೆ.”

ತಮ್ಮ ಹಿಟ್ ಹಾಡುಗಳು ಮತ್ತು ಯುವಜನತೆಯ ಮೇಲಿರುವ ಅಪಾರ ಪ್ರಭಾವದಿಂದ ಗುರುತಿಸಿಕೊಂಡಿರುವ ಅನಿರುದ್ಧ್ ರವಿಚಂದರ್ ಅವರ ಸ್ಟೈಲ್ ಮತ್ತು ವ್ಯಕ್ತಿತ್ವ ದೇಶಾದ್ಯಂತದ ಪ್ರೇಕ್ಷಕರಿಗೆ ಇಷ್ಟವಾಗುತ್ತಾ ಬಂದಿದೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಹಣಕ್ಕಾಗಿ ಮಾಡುವ ಜಾಹೀರಾತುಗಳಿಂದ ಇದು ಸ್ವಲ್ಪ ವಿಭಿನ್ನ.ಅದಕ್ಕೆ ಕಾರಣ, ಇಲ್ಲಿ ಗ್ರಾಹಕರೇ ಈ ಪ್ರಾಡಕ್ಟ್ ಅನ್ನು ಕಂಡುಹುಡಿಕಿರೋದು,ಗ್ರಾಹಕರು ಏನನ್ನು ಇಷ್ಟಪಡುತ್ತಾರೋ ಅದಕ್ಕೆ ತಕ್ಕಂತೆ ಬ್ರ್ಯಾಂಡ್‌ಗಳು ಸ್ಪಂದಿಸುವ ಹೊಸ ಹಾದಿಯನ್ನು ಇದು ತೋರಿಸಿಕೊಟ್ಟಿದೆ.”

ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಕೇವಲ ಜಾಹೀರಾತುಗಳಿಂದ ಬ್ರ್ಯಾಂಡ್ ಬೆಳೆಯಲು ಸಾಧ್ಯವಿಲ್ಲ ಎಂಬ ಹಂತಕ್ಕೆ ನಾವು ತಲುಪಿದ್ದೇವೆ. ಈ ನಿಟ್ಟಿನಲ್ಲಿ ‘ಡಿ-ಕನ್ಸ್ಟ್ರಕ್ಟ್’ (De-construct) ತನ್ನ ಹೊಸ ಪಾರ್ಟ್‌ನರ್‌ಶಿಪ್ ಮೂಲಕ ಒಂದು ಮಹತ್ವದ ಸಂದೇಶವನ್ನು ಸಾರಿದೆ. ಸುಳ್ಳು ಪ್ರಚಾರಕ್ಕಿಂತಲೂ ‘ನೈಜತೆ’ ಅಥವಾ ‘ಅಥೆಂಟಿಸಿಟಿ’ (Authenticity) ಅತ್ಯಂತ ದೊಡ್ಡ ಶಕ್ತಿ ಎಂಬುದನ್ನು ಈ ಬ್ರ್ಯಾಂಡ್ ಮತ್ತೊಮ್ಮೆ ಸಾಬೀತುಪಡಿಸಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!