ಎಐ ತಂತ್ರಜ್ಞಾನವನ್ನು ಬಳಸಿಕೊಂಡು ಬಾಲಿವುಡ್ ನ ಸ್ಟಾರ್ ನಟಿ ಅಲಿಯಾ ಭಟ್ ಅವರನ್ನು ಪಾಕಿಸ್ತಾನದ ಬಟ್ಟೆಯ ಬ್ರಾಂಡ್ ಉತ್ಪನ್ನ ಒಂದು ರೂಪದರ್ಶಿ ಆಗಿ ಬಳಸಿಕೊಂಡು ಕೆಂಗಣ್ಣಿಗೆ ಗುರಿಯಾಗಿದೆ.
ವಜಾಯೆಶಾ ಎಂಬ ಪಾಕ್ ಬ್ರ್ಯಾಂಡ್, ಆಲಿಯಾ ಭಟ್ ತಮ್ಮ ಉಡುಪುಗಳನ್ನು ಧರಿಸಿ ಫೋಸು ನೀಡಿದಂತೆ ಕೃತಕವಾಗಿ ಚಿತ್ರಗಳನ್ನು ರೂಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಆಲಿಯಾ ಅವರ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ಚಿತ್ರಗಳನ್ನು ಬಳಸಿಕೊಂಡು ಎಐ ಮೂಲಕ ಉಡುಪುಗಳನ್ನು ಬದಲಾಯಿಸಿ ಜಾಹೀರಾತು ರೂಪಿಸಲಾಗಿದೆ. ಈ ಚಿತ್ರಗಳು ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಮತ್ತು ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಲಿಯಾ ಭಟ್ ಯಾವುದೇ ರೀತಿಯ ಫೋಟೋಶೂಟ್ ಮಾಡಿಸಿಲ್ಲ. ಆ ಬ್ರ್ಯಾಂಡ್‌ಗೆ ಕೊಲಬರೇಶನ್ ಮಾಡಿಲ್ಲ. ಇದು ಈಗ ಕಾನೂನಾತ್ಮಕ ಸಮಸ್ಯೆಗೆ ಕಾರಣವಾಗಿದೆ.
ಆಲಿಯಾ ಭಟ್ ಈಗಾಗಲೇ ತಮ್ಮ ವ್ಯಕ್ತಿತ್ವ ಹಕ್ಕುಗಳ ರಕ್ಷಣೆಗೆ ಕಾನೂನು ಮಾನ್ಯತೆ ಪಡೆದಿದ್ದಾರೆ. ಅವರ ಅನುಮತಿ ಪೋಟೋ, ವಿಡಿಯೋ, ಧ್ವನಿ, ಹಾವಭಾವ ಬಳಕೆ ಮಾಡಲು ಅವಕಾಶವಿಲ್ಲ. ಆದರೆ ಪಾಕ್ ಬ್ರ್ಯಾಂಡ್ ನೇರವಾಗಿ ಚಿತ್ರಗಳನ್ನು ತಿದ್ದುಪಡಿ ಮಾಡಿ ಬಳಕೆ ಮಾಡಿರುವುದು ಕಾನೂನು ಉಲ್ಲಂಘನೆ ಆಗಿದ್ದು ಈ ಹಿನ್ನೆಲೆಯಲ್ಲಿ ಆಲಿಯಾ ಭಟ್ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ.





Be the first to comment