ತಪ್ಪೊಪ್ಪಿಕೊಂಡ ಧನ್ವೀರ್

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್‌ಗೆ ಕರೆ ಮಾಡಿ ಬೈದಿದ್ದು ನಿಜ ಎಂದು ಆರ್‌ಆರ್ ನಗರ ಪೊಲೀಸರ ವಿಚಾರಣೆ ವೇಳೆ ನಟ ಧನ್ವೀರ್  ತಪ್ಪೊಪ್ಪಿಕೊಂಡಿದ್ದಾರೆ.

‘ನಾಗರಾಜ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ನಿಜ. ನನ್ನಿಂದ ತಪ್ಪಾಗಿದೆ. ಕ್ಷಮಿಸಿಬಿಡಿ. ಜಯಲಕ್ಷ್ಮಿ ಮತ್ತು ನಾಗರಾಜ್ ತಮ್ಮ ಮನೆಗೆ ಬಂದು ಗಲಾಟೆ ಮಾಡಿದ್ದರು. ತಂದೆ-ತಾಯಿಯ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ದರಿಂದ ಕೋಪಗೊಂಡು ನಾಗರಾಜ್‌ಗೆ ಬೈದಿದ್ದಾಗಿ ಧನ್ವೀರ್ ತಿಳಿಸಿದ್ದಾರೆ.

‘ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಜಮೀರ್ ಅಹ್ಮದ್ ಅವರ ಪುತ್ರ ಝೈದ್ ಖಾನ್ ಬಗ್ಗೆ ತಾನು ಯಾವುದೇ ಹೇಳಿಕೆ ನೀಡಿಲ್ಲ. ಆ ಭಾಗದ ವಿಡಿಯೋ ಎಐ ಮೂಲಕ ಸೃಷ್ಟಿಸಲಾಗಿದೆ. ಈ ವಿವಾದದ ಹಿಂದೆ ಹಣಕಾಸಿನ ವಿಚಾರವಿದೆ.  ಲೆಕ್ಕಪತ್ರ ನೀಡಲು ತಾನು ಸಿದ್ಧನಿದ್ದರೂ, ಎದುರಿನವರು ಬರುತ್ತಿಲ್ಲ. ತನಗೆ ಕೆಟ್ಟ ಹೆಸರು ತರಲು ಈ  ಆಡಿಯೋ ಸೃಷ್ಟಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಆರ್‌ಆರ್ ನಗರ ಠಾಣೆಯ ಇನ್‌ಸ್ಪೆಕ್ಟರ್ ಕುಮಾರಸ್ವಾಮಿ ಧನ್ವೀರ್ ಅವರನ್ನು ವಿಚಾರಣೆ ನಡೆಸಿದ್ದಾರೆ. ಈ ಪ್ರಕರಣದ ಎಫ್‌ಐಆರ್ ರದ್ದುಪಡಿಸುವಂತೆ ಧನ್ವೀರ್ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆಗೆ ಹಾಜರಾಗುವಂತೆ ಹೈಕೋರ್ಟ್ ಸೂಚನೆ ನೀಡಿತ್ತು. ಇದೀಗ ಪೊಲೀಸರು ಧನ್ವೀರ್ ವಿಚಾರಣೆ ನಡೆಸಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!