‘ದಿ ವಿಲನ್’ ಚಿತ್ರದ ಬಳಿಕ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಪ್ರೇಮ್ ಮತ್ತೆ ಒಂದಾಗಿದ್ದು,ಚಿತ್ರಕ್ಕೆ ‘ದಾದಾ ಆನ್ ಹಾಲಿಡೇಸ್’ ಎಂದು ಹೆಸರಿಡಲಾಗಿದೆ.
ಹೊಸ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆಯಾಗಿದ್ದು, ಟೀಸರ್‌ನಲ್ಲಿ ಕಿಚ್ಚ ಸುದೀಪ್ ಪೊಲೀಸ್ ಸ್ಟೇಷನ್‌ನಲ್ಲಿ ವಿಭಿನ್ನ ಸ್ವ್ಯಾಗ್ ಹಾಗೂ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿರುವ ನಿರ್ದೇಶಕ ಪ್ರೇಮ್, ‘ಪ್ರತಿಯೊಂದು ಚಲನಚಿತ್ರವೂ ಒಂದು ಹೊಸ ಪಯಣ. ನಿಮ್ಮ ಅಪಾರ ಪ್ರೀತಿ, ಬೆಂಬಲ ಮತ್ತು ಆಶೀರ್ವಾದದೊಂದಿಗೆ, ಕಿಚ್ಚ ಸುದೀಪ್ ಅವರೊಂದಿಗೆ ಕೈಗೊಂಡಿರುವ ನನ್ನ ಮುಂದಿನ ಚಲನಚಿತ್ರ ಪಯಣವನ್ನು ಹೆಮ್ಮೆಯಿಂದ ಪ್ರಸ್ತುತಪಡಿಸುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
“ಈ ಸಿನಿಮಾದಲ್ಲಿ ಲವ್ ಇರುತ್ತದೆ. ಆದರೆ ಲವ್ ಸ್ಟೋರಿ ಅಲ್ಲ. ಸೆಂಟಿಮೆಂಟ್ ಇದೆ. ಆದರೆ ಮದರ್ ಸೆಂಟಿಮೆಂಟ್ ಇರೋದಿಲ್ಲ. ರೌಡಿಗಳು ಇರ್ತಾರೆ.ಆದರೆ ರೌಡಿಸಂ ಇರೋದಿಲ್ಲ. ಎಲ್ಲರೂ ಅವರವರ ಕಥೆಯಲ್ಲಿ ಅವರೇ ಹೀರೋ. ಆದರೆ ಬೇರೆಯವರ ಕಥೆಯಲ್ಲಿ ಹೀರೋ ಆಗ್ತಾನಲ್ಲ ಅವನೇ ನಮ್ ಹೀರೋ” ಎಂದು ಹೇಳುವ ಮೂಲಕ ಪ್ರೇಮ್ ಸಿನಿಮಾದ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದ್ದಾರೆ.
ಆರುದ್ರ ಸಿನಿಮಾಸ್ ಹಾಗೂ ಪ್ರೇಮ್ ಫೀನಿಕ್ಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರೂಪೇಶ್ ಕುಮಾರ್ ಜಿ, ಶಶಿ ಕಿರಣ್ ಆರ್, ರಕ್ಷಿತಾ ಪ್ರೇಮ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನ, ಶೇಖರ್ ಚಂದ್ರು ಛಾಯಾಗ್ರಹಣ, ಶಿವಕುಮಾರ್ ಜೆ. ಕಲಾ ನಿರ್ದೇಶನ, ಸಂಕೇತ್ ಆಚಾರ್ ಸಂಕಲನ ಹಾಗೂ ಅಭಿಜಿತ್ ಮಹೇಶ್ ಸಂಭಾಷಣೆ ಚಿತ್ರಕ್ಕಿದೆ.
ಸುದೀಪ್ ‘ಬಿಲ್ಲ ರಂಗ ಭಾಷಾ’ ಚಿತ್ರದ ಬಹುತೇಕ ಕೆಲಸ ಮುಗಿಸಿದ್ದಾರೆ. ದೇವರಾಯ’ ಹಾಗೂ ತಮಿಳು ನಿರ್ದೇಶಕ ಚೇರನ್ ಅವರ ಸಿನಿಮಾದ ಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ.





Be the first to comment