ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಬೃಂದಾ ವಿಹಾರಿ ಚಿತ್ರದ ರಿಲೀಸ್ ಬೆನ್ನಲ್ಲಿ ನಿವಿಷ್ಕಾ ಪಾಟಿಲ್ ನಟನೆಯ ಮತ್ತೊಂದು ಚಿತ್ರ ‘ಅನಂತ ಪಯಣ’ ಇದೇ ಶುಕ್ರವಾರ ನವೆಂಬರ್ 27ರಂದು ಬಿಡುಗಡೆಯಾಗಲಿದೆ.
ಬೆನ್ನು ಬೆನ್ನಿಗೆ ಎರಡು ಚಿತ್ರಗಳ ಬಿಡುಗಡೆ ಮೂಲಕ ಡಬಲ್ ಖುಷಿಯಲ್ಲಿರುವ ನಿವಿಷ್ಕಾ ಪಾಟೀಲ್, ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
‘ ಬರೀ ಶೂಟಿಂಗ್ ನಲ್ಲಿ ಇರುತ್ತೀಯಾ. ಸಿನಿಮಾ ಯಾವಾಗ ರಿಲೀಸ್ ಎಂದು ಬಹುತೇಕರು ದೂರುತ್ತಿದ್ದರು. ಈಗ ಅವರಿಗೆ ಉತ್ತರ ಕೊಡುವ ಸಮಯ ಬಂದಿದೆ’ ಎಂದು ನಿವಿಷ್ಕಾ ಅವರು ಹೇಳಿದ್ದಾರೆ.
ನಿವಿಷ್ಕಾ ಅವರು ಮೂಲತಃ ಬೆಳಗಾವಿಯವರು. ಈಗ ಅವರು ಅದೇ ಊರಿನ ಕಥೆ ಹೊಂದಿದ ಚಿತ್ರದಲ್ಲಿ ಗೌರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಂಚಾರಿ ಕುರುಬರ ಸಮಸ್ಯೆಗಳು, ಅವರ ಬದುಕಿನ ಬಗ್ಗೆ ಬೆಳಕು ಚೆಲ್ಲುವ ಚಿತ್ರ ಇದಾಗಿದೆ.
ಅವರು ಪವನ್ ಒಡೆಯರ್ ತಂಡದ ಅಕಾಯ, ಚಂದ್ರಕೀರ್ತಿ ನಿರ್ದೇಶನದ ಕಾಫಿ ಬೈಕ್, ಅಜಿತ್ ಜೈರಾಜ್ ನಟನೆಯ ಜಾಂಟಿ ಸನ್ ಆಫ್ ಜಯರಾಜ್ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಗಳು ಮುಂದಿನ ವರ್ಷ ಬಿಡುಗಡೆ ಆಗಲಿವೆ.
ಉತ್ತರ ಕರ್ನಾಟಕದ ಸೊಡಗಿನ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಪ್ಲಸ್ ಪಾಯಿಂಟ್ ಎಂದು ನಿವಿಷ್ಕಾ ಹೇಳಿದ್ದಾರೆ.





Be the first to comment