ಇನ್ನೂ ಹೆಸರಿಡದ ಚಿತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಟಿಸಲಿದ್ದಾರೆ.
ಪತ್ರಕರ್ತರಾಗಿ ಗುರುತಿಸಿಕೊಂಡಿದ್ದ ಎ.ರಾಜೇಶ್ಗೌಡ, 48 ಘಂಟೆ, ಒಂದು ತಂಡ, ಒಂದು ದಾಖಲೆ, ಒಂದು ಪ್ರಪಂಚ ಪರಿಕಲ್ಪನೆಯಲ್ಲಿ ಹೆಸರಿಡದ ಚಿತ್ರಕ್ಕೆ ಬಂಡವಾಳ ಹೂಡುವ ಜತೆಗೆ ನಿರ್ದೇಶನ ಮಾಡುತ್ತಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾಜಿ ಸಚಿವ ಹೆಚ್.ಎಂ.ರೇವಣ್ಣ, ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಹಾಜರಿದ್ದರು. ‘ಮುಖ್ಯಮಂತ್ರಿ ಅಧಿಕಾರದಲ್ಲಿ ಇದ್ದಾಗಲೇ ಆರು ಬಾರಿ ಪ್ರಯತ್ನ ಮಾಡಿ, ಕೊನೆಗೆ ಅವರನ್ನು ನಟಿಸಲು ಒಪ್ಪಿಸುವಲ್ಲಿ ಸಪಲನಾದೆ. ಮಿಕ್ಕಂತೆ ಸಿನಿಮಾ ಬಗ್ಗೆ ಏನು ತಿಳಿಯದು’ ಎಂದರು.
ನಿರ್ದೇಶಕ ಎ.ರಾಜೇಶ್ಗೌಡ ಮಾತನಾಡಿ, ‘ಚಿತ್ರ ಅಂದಾಜು 100ನಿಮಿಷ ಇರಲಿದೆ. ರಾಜಕೀಯ ಆಧಾರಿತ ಕಥೆಯನ್ನು ಒಳಗೊಂಡಿರುವುದರಿಂದ ಸಿದ್ದರಾಮಯ್ಯ ಸೂಕ್ತ ಎಂದು ಭಾವಿಸಲಾಗಿ ಅಭಿನಯಿಸಲು ಅವರಿಂದ ಹಸಿರು ನಿಶಾನೆ ಸಿಕ್ಕಿದೆ. ರೇವಣ್ಣ ಮತ್ತು ಕಾ.ತೆ.ಚಿಕ್ಕಣ್ಣ ಇವರಿಂದ ಸಿನಿಮಾ ಮಾಡಲು ಸುಲಭವಾಯಿತು. ಇವರು ಸಹ ಬಣ್ಣ ಹಚ್ಚಲಿದ್ದಾರೆ. ಹಿರಿಯ ನಟಿ ಉಮಾಶ್ರೀ ಮಿಕ್ಕಂತೆ ಕಲಾವಿದರು ಸೇರ್ಪಡೆಯಾಗಲಿದ್ದಾರೆ’ ಎಂದರು.
‘ಸಿಎಂ ಗೃಹ ಕಚೇರಿ ಕಾವೇರಿ, ಮಿಕ್ಕಂತೆ ಬಂಗ್ಲೆಯಲ್ಲಿ ನವೆಂಬರ್ ತಿಂಗಳಿಂದ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ. ಈಗಾಗಲೇ ಅನುಮತಿಗಾಗಿ ಪತ್ರ ಬರೆಯಲಾಗಿದೆ. ಚಲನಚಿತ್ರ ಪ್ರಕ್ರಿಯೆಯನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಿ, ಗಿನ್ನಿಸ್ ದಾಖಲೆಗೆ ತಲುಪುವ ಉದ್ದೇಶವಿದೆ’ ಎಂದು ಮಾಹಿತಿ ಹಂಚಿಕೊಂಡರು.
ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್, ‘ನನ್ನ ಅನುಭವದಲ್ಲಿ ಇದೊಂದು ಸವಾಲಿನ ಕೆಲಸ’ ಎಂದರು.
—–





Be the first to comment