2027ರ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಮರಾಠಿ ಥ್ರಿಲ್ಲರ್ ಚಿತ್ರ ‘ಗೋಂಧಳ್’ ಅಧಿಕೃತವಾಗಿ ಆಯ್ಕೆಯಾಗಿದೆ.
ಸಂತೋಷ್ ದವಖರ್ ನಿರ್ದೇಶನದ ‘ಗೋಂಧಳ’ ಚಿತ್ರ 99ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ‘ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಲಿದೆ ಎಂದು ‘ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ’ ಘೋಷಿಸಿದೆ.
ಒಟ್ಟು 33 ಚಲನಚಿತ್ರಗಳನ್ನು 2027ರ ಆಸ್ಕರ್ ಪ್ರಶಸ್ತಿಗೆ ಪರಿಶೀಲನೆಗೆ ಸಲ್ಲಿಸಲಾಗಿತ್ತು. ಇವುಗಳಲ್ಲಿ 14 ಹಿಂದಿ, ತಲಾ 4 ಮರಾಠಿ, ತೆಲುಗು ಮತ್ತು ಗುಜರಾತಿ, 3 ತಮಿಳು ಹಾಗೂ ತಲಾ ಒಂದು ಮಲಯಾಳಂ ಮತ್ತು ನಾಗಾಮೀಸ್ ಭಾಷೆಯ ಚಿತ್ರಗಳಿದ್ದವು. ಇದರಲ್ಲಿ ಒಂದು ಮೂಕ ಚಿತ್ರ ಸೇರಿತ್ತು.
ಆಯ್ಕೆ ಸಮಿತಿಯಲ್ಲಿ ಪಿ. ಶೇಷಾದ್ರಿ, ವಿಜಯ್ ಪಾಟ್ಕರ್, ಹುಟು ಕನೋಡಿಯಾ, ಶಾಂತಿ ಕುಮಾರ್, ಸಂದೀಪ್ ಪರಾಶರ್, ಸಂಜಯ್ ಪಾಟೀಲ್, ಸಾಬು ಜೋಸೆಫ್, ಅನಿಲ್ ಥಾಮಸ್, ವಿವೇಕ್ ವಸ್ವಾನಿ, ಬಿಜೋನ್ ದಾಸ್ಗುಪ್ತ, ಹಾಸನ್, ವಸನ್ ಮತ್ತು ತನಿಷ್ಠಾ ಚಟರ್ಜಿ ಸದಸ್ಯರಾಗಿದ್ದರು.
ಕಳೆದ ವರ್ಷ ನೀರಜ್ ಘಯವಾನ್ ನಿರ್ದೇಶನದ ಕೋವಿಡ್ ಪರಿಣಾಮ ಕುರಿತಾದ ‘ಹೋಮ್ಬೌಂಡ್’ ಚಿತ್ರ ಆಸ್ಕರ್ಗೆ ಭಾರತದ ಅಧಿಕೃತ ಪ್ರವೇಶವಾಗಿ ಆಯ್ಕೆಯಾಗಿತ್ತು. ಇಶಾನ್ ಖಟ್ಟರ್ ಮತ್ತು ವಿಶಾಲ್ ಜೆಟ್ವಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.
ಅಕಾಡೆಮಿ ಪ್ರಶಸ್ತಿ 99ನೇ ಆವೃತ್ತಿ ಸಮಾರಂಭ 2027ರ ಮಾರ್ಚ್ 14ರಂದು ಲಾಸ್ ಏಂಜಲೀಸ್ನ ಡಾಲ್ಬಿ ಥಿಯೇಟರ್ನಲ್ಲಿ ನಡೆಯಲಿದೆ.
—–





Be the first to comment