ಬೆಂಟ್ಲಿ

Movie Review: ಪರದೆ ಮೇಲೆ ಬೆರಗಾಗಿಸುವ ಬೆಂಟ್ಲಿ

ಚಿತ್ರ: ಬೆಂಟ್ಲಿ
ನಿರ್ದೇಶನ: ಸಂತೋಷ್ ಬಾಲರಾಜ್
ನಿರ್ಮಾಣ: ಶ್ವೇತಾ ಬಾಲರಾಜ್
ತಾರಾಗಣ: ಸಂತೋಷ್ ಬಾಲರಾಜ್, ಸಿಮ್ರಾನ್, ಚರಣ್ ರಾಜ್ ಮೊದಲಾದವರು…
ರೇಟಿಂಗ್: 3.5

ಅದೊಂದು ಹಳ್ಳಿ. ಅಲ್ಲಿ ಕಡಿದಾಳ್ ಶಿವಯ್ಯ ಭಾರೀ‌ ದೊಡ್ಡ ಸಾಹುಕಾರ. ಆತ ಒಂದು ರೀತಿ ಕ್ರೂರಿ ಕೂಡ ಹೌದು. ಆತನನ್ನು ಎದುರು ಹಾಕಿಕೊಂಡ ಯುವಕನೇ ಬೆಂಟ್ಲಿ. ಆತ ಅದೇ ಹಳ್ಳಿಯ ಯುವಕನಾದರೂ ಯಾರಿಗೂ ಬೆದರದೇ ಪ್ರೇಮಿಗಳನ್ನು ಒಂದಾಗಿಸುವ ಕೆಲಸ‌ ಮಾಡುತ್ತಿರುತ್ತಾನೆ. ಇಂಥ ಸಂದರ್ಭದಲ್ಲಿ ಶಿವಯ್ಯ‌ನ ಅಣ್ಣ ರಾಜೇಂದ್ರಪ್ಪ ವಿದೇಶದಿಂದ ಬರುತ್ತಾನೆ. ರಾಜೇಂದ್ರಪ್ಪನ ಪತ್ನಿ ಮಕ್ಕಳು ಕೂಡ ಇರುತ್ತಾರೆ. ರಾಜೇಂದ್ರಪ್ಪನ ಹಿರಿಮಗಳು ಕಾಜಲ್ ಕಂಡಾಗ ಬೆಂಟ್ಲಿಗೆ ಪ್ರೀತಿಯಾಗುತ್ತದೆ. ಮುಂದೇ‌ನಾಗುತ್ತದೆ ಎನ್ನುವುದೇ ಬೆಂಟ್ಲಿ ಚಿತ್ರದ ಸಾರ.

ಬೆಂಟ್ಲಿ ಪಾತ್ರದಲ್ಲಿ ನಟಿಸಿರುವ ಸಂತೋಷ್ ಬಾಲರಾಜ್ ಅವರೇ ಈ ಚಿತ್ರದ ನಿರ್ದೇಶಕರು ಕೂಡ ಹೌದು. ಎಂದಿನಂತೆ ನೃತ್ಯ, ಹೊಡೆದಾಟಗಳಲ್ಲಿ ಎತ್ತಿದ ಕೈ.‌ ಈ‌ ಬಾರಿ ಪ್ರೇಮ ದೃಶ್ಯಗಳಲ್ಲಿ ಸಂತೋಷ್ ಬಾಲರಾಜ್ ಅವರ ನಟನೆಯಂತೂ ಗಮನಾರ್ಹ.

ಕಡಿದಾಳ್ ಶಿವಯ್ಯನ ಪಾತ್ರವನ್ನು ಬಲರಾಜ್ ವಾಡಿ ನಿರ್ವಹಿಸಿದ್ದಾರೆ. ಇವರ ಪಾತ್ರಕ್ಕೆ ಒಂದು‌ ಫ್ಲ್ಯಾಶ್ ಬ್ಯಾಕ್ ಇದೆ. ಅದನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ. ಇನ್ನೊಂದು ಪ್ರಮುಖ ಪಾತ್ರದಲ್ಲಿ ವಾಣಿಶ್ರೀ ಕಾಣಿಸಿದ್ದಾರೆ. ಶಿವಯ್ಯನ ಅಣ್ಣ ರಾಜೇಂದ್ರಪ್ಪನಾಗಿ ಚರಣ್ ರಾಜ್ ನಟಿಸಿದ್ದಾರೆ. ಚರಣ್ ರಾಜ್ ಪುತ್ರಿ ಕಾಜಲ್ ಪಾತ್ರದಲ್ಲಿ ನವನಟಿ ಸಿಮ್ರಾನ್ ಅಭಿನಯಿಸಿದ್ದಾರೆ. ವಿಶೇಷ ಪಾತ್ರದಲ್ಲಿ ನಟಿಸಿರುವ ಶ್ರುತಿ ಯವರ ಅಭಿನಯವನ್ನು ಮೆಚ್ಚಲೇಬೇಕು.

ಜೂಡಾ ಸ್ಯಾಂಡಿ‌ ಸಂಗೀತದಲ್ಲಿನ ಹಾಡುಗಳು ಆಲಾಪಿಸುವಂತಿವೆ.‌ ಸಂತೋಷ್ ಬಾಲರಾಜ್ ಒಬ್ಬ ಉತ್ತಮ‌ ನಟ‌ ಮಾತ್ರವಲ್ಲ, ನಿರ್ದೇಶಕ ಕೂಡ‌ ಆಗಿದ್ದರು ಎನ್ನುವುದನ್ನು ಚಿತ್ರ ಸಾಬೀತು ಮಾಡಿದೆ. ಇನ್ನೊಮ್ಮೆ ಬೇಕು ಎಂದರೂ ಸಿನಿಮಾ‌ ಮಾಡಲಾಗದಂತೆ ಸಂತೋಷ್ ಬಾಲರಾಜ್ ಮರೆಯಾಗಿದ್ದಾರೆ. ಹಾಗಾಗಿ ಇದೇ ಕೊನೆಯ ಚಿತ್ರ. ಈ ಎಲ್ಲ ಕಾರಣಗಳಿಂದಾಗಿ ಬೆಂಟ್ಲಿ‌‌ ಖಂಡಿತವಾಗಿ ಒಮ್ಮೆ ನೋಡಬೇಕಾದಂಥ ಚಿತ್ರ

Be the first to comment

Leave a Reply

Your email address will not be published. Required fields are marked *

Translate »
error: Content is protected !!