ಇಂದು ಕನ್ನಡದ ಹಲವು ಚಿತ್ರಗಳು ಬಿಡುಗಡೆ

ಸೆ. 18ರಂದು ಕನ್ನಡದಲ್ಲಿ ಹಲವುಚಿತ್ರಗಳು ರಾಜ್ಯಾದ್ಯಂತ ಬಿಡುಗಡೆ ಆಗಿ ಪ್ರೇಕ್ಷಕರ ಪ್ರತಿಕ್ರಿಯೆ ಎದುರು ನೀಡುತ್ತಿವೆ.

‘ದುನಿಯಾ’ ವಿಜಯ್‍ ನಿರ್ದೇಶನದ ಮೂರನೇ ಚಿತ್ರವಾದ ‘ಸಿಟಿ ಲೈಟ್ಸ್’ ಇಂದು ಬಿಡುಗಡೆ ಆದ ಪ್ರಮುಖವಾದ ಚಿತ್ರ. ಇದರಲ್ಲಿ ವಿನಯ್ ರಾಜಕುಮಾರ್ ಮತ್ತು ಮೋನಿಷಾ ವಿಜಯ್‍ ನಾಯಕ ಹಾಗೂ ನಾಯಕಿಯಾಗಿ ಅಭಿನಯಿಸಿದ್ದಾರೆ.

ಅರ್ಜುನ್ ಕಾಪಿಕಾಡ್‍ ಅಭಿನಯ ಮತ್ತು ನಿರ್ದೇಶನದ ‘ಟಾಸ್‍’ ಇಂದು ಬಿಡುಗಡೆ ಆಗಿದೆ. ಇದು ಕನ್ನಡ ಅಲ್ಲದೇ ತುಳು ಭಾಷೆಯಲ್ಲಿ ಬಿಡುಗಡೆಯಾಗಿದೆ.

ಉಳಿದಂತೆ ಶ್ರೀನಗರ ಕಿಟ್ಟಿ ಹಾಗೂ ಮೇಘನಾ ರಾಜ್‍ ಅಭಿನಯದ ‘ಅಮರ್ಥ’ ಇಂದು ಬಿಡುಗಡೆ ಆದ ಇನ್ನೊಂದು ಚಿತ್ರ.

ಡಾ. ಬರಗೂರು ರಾಮಚಂದ್ರಪ್ಪ ನಿರ್ದೇಶನದ 25ನೇ ಚಿತ್ರವಾದ ‘ಮಹಾಕವಿ’ ಇಂದು ಬಿಡುಗಡೆ ಆಗಿದೆ. ಕಿಶೋರ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಉಳಿದಂತೆ ದಿವಂಗತ ಸಂತೋಷ್‍ ಬಾಲರಾಜ್‍ ಅಭಿನಯ ಮತ್ತು ನಿರ್ದೇಶನದ ‘ಬೆಂಟ್ಲಿ’, ‘ ಕಾಂಧಾರಿ’, ‘ವಾರಿಯರ್’  ಬಿಡುಗಡೆ ಆಗಿದೆ. ಮತ್ತೊಂದು ಚಿತ್ರ ‘ಅನಿರೀಕ್ಷಿತ ಅತಿಥಿಗಳು’ ಚಿತ್ರ ಬಿಡುಗಡೆ ಆಗಿ ಪ್ರೇಕ್ಷಕರ ಮುಂದೆ ಬಂದಿದೆ.

ಕಳೆದ ಕೆಲ ತಿಂಗಳಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಚಿತ್ರಗಳು ಬಿಡುಗಡೆಯಾಗಿರಲಿಲ್ಲ. ಇಂದು ಒಂದೇ ದಿನ ಹಲವು ಚಿತ್ರಗಳು ಬಿಡುಗಡೆ ಆಗಿದ್ದು, ಪ್ರೇಕ್ಷಕ ಯಾವ ಚಿತ್ರದ ಕಡೆ ಒಲವು ತೋರುತ್ತಾನೆ ಎನ್ನುವ ಕುತೂಹಲ ಉಂಟಾಗಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!