ಯಶ್ ‘ಕೊಹಿನೂರು ವಜ್ರ’ ಎಂದ ರಾಜೇಂದ್ರ ಸಿಂಗ್ ಬಾಬು

ಯಶ್ ಅವರನ್ನು “ಕನ್ನಡ ಚಿತ್ರರಂಗದ ಕೊಹಿನೂರ್ ವಜ್ರ” ಎಂದು ಖ್ಯಾತ ಹಿರಿಯ ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು ಪ್ರತಿಕ್ರಿಯಿಸಿದ್ದಾರೆ.

ಮ್ಮ ಮಗಳು ರಿಷಿಕಾ ಅವರ ಟೀಕೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಾಜೇಂದ್ರ ಸಿಂಗ್ ಬಾಬು  ‘ಯಶ್ ಮಾಡುತ್ತಿರುವ ಸಿನಿಮಾಗಳ ಬಗ್ಗೆ ನಾವೆಲ್ಲರೂ ಹೆಮ್ಮೆಪಡಬೇಕು.  ಯಶ್ ಇಂತಹ ಬೃಹತ್ ಮಟ್ಟದ ಚಿತ್ರವನ್ನು ಕೈಗೆತ್ತಿಕೊಂಡಿರುವುದು ಮತ್ತು ರಾವಣನಂತಹ ಪಾತ್ರವನ್ನು ನಿರ್ವಹಿಸುತ್ತಿರುವುದು, ಕನ್ನಡ ಚಿತ್ರರಂಗದ ವ್ಯಾಪ್ತಿ ಎಷ್ಟು ವಿಸ್ತಾರವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ’ ಎಂದಿದ್ದಾರೆ.

‘ಇಡೀ ದೇಶವೇ ‘ಟಾಕ್ಸಿಕ್’ ಚಿತ್ರಕ್ಕಾಗಿ ಕಾಯುತ್ತಿದೆ. ಈ ಬಗ್ಗೆ ನಮಗೆ ಹೆಮ್ಮೆ ಇರಬೇಕು. ಕನ್ನಡ ಚಿತ್ರರಂಗವನ್ನು ವಿಶಾಲ ಪ್ರೇಕ್ಷಕವರ್ಗದತ್ತ ಕೊಂಡೊಯ್ದ ಕೀರ್ತಿ ಯಶ್ ಅವರಿಗೆ ಸಲ್ಲುತ್ತದೆ. ಯಶ್ ಬೆಳವಣಿಗೆ ಮತ್ತು ಸಾಧನೆಗಳ ಬಗ್ಗೆ ತಮಗೆ ಹೆಮ್ಮೆಯಿದೆ’ ಎಂದಿದ್ದಾರೆ.

ಮಗಳ ಹೇಳಿಕೆಗಳ ಕುರಿತು ಮಾತನಾಡಿದ ರಾಜೇಂದ್ರ ಸಿಂಗ್ ಬಾಬು, ಅವು ಆಕೆಯ ವೈಯಕ್ತಿಕ ಅಭಿಪ್ರಾಯವೆಂದು ಪರಿಗಣಿಸುವುದಾಗಿ ತಿಳಿಸಿದ್ದಾರೆ.

ರಿಷಿಕಾ ಸಿಂಗ್  ಸಾಮಾಜಿಕ ಜಾಲತಾಣದ ವಿಡಿಯೋವೊಂದರಲ್ಲಿ, ಅವರು ‘ಹೆಣ್ಮಕ್ಕಳಿಗೆ ಅಂದ ಇದ್ದರೆ ಚಂದ. ಗಂಡುಮಕ್ಕಳಿಗೆ ಮರ್ಯಾದೆ ಇದ್ದರೆ ಚೆಂದ. ಮನೆಯಲ್ಲಿ ಹೆಂಡತಿ ಇದ್ದೂ ಹೀರೋಯಿನ್‌ಗಳ ಜೊತೆ ಹೀಗೆ ಕಾಣಿಸಿಕೊಳ್ಳುವುದು ಸರಿಯಲ್ಲ. ಹೆಣ್ಮಕ್ಕಳಿಗೆ ಗೌರವ ಇರಲಿ. ಇಲ್ಲದಿದ್ದರೆ ಕರ್ನಾಟಕದಿಂದ ಜಾಗ ಖಾಲಿ ಮಾಡಿಸ್ತೀವಿ. ಐ ಆಮ್ ಟಾಕ್ಸಿಕ್’ ಎಂದು ಎಚ್ಚರಿಸಿದ್ದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!