ರಜನಿಕಾಂತ್ ‘ಜೈಲರ್ 2’ ಹಾಡು ವೈರಲ್

ಸೂಪರ್ ಸ್ಟಾರ್ ರಜನಿಕಾಂತ್ ಅವರ ಮುಂದಿನ ಚಿತ್ರ ‘ಜೈಲರ್ 2’ ಹಾಡು  ವೈರಲ್ ಆಗಿದೆ.

ದಲಿಗೆ ಬಿಡುಗಡೆಯಾದ ‘ಅಲಾ ಬೊಲೆಲೋ’  ಹಾಡಿನ 32 ಸೆಕೆಂಡುಗಳ ಪ್ರೊಮೋದಲ್ಲಿ ಮಲಯಾಳಂ ಉಚ್ಚಾರಣೆ  ತೀವ್ರ ಟೀಕೆಗೆ ಗುರಿಯಾಗಿತ್ತು. ಆದರೆ ಇದೀಗ ಬಿಡುಗಡೆಯಾದ ಪೂರ್ಣ ಹಾಡನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.  ಇದು ಖಂಡಿತವಾಗಿ  ಸೂಪರ್ ಹಿಟ್ ಆಗಲಿದೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಮ್ನಾ ಕಾಸಿಮ್ ಅವರ ಮಸ್ತ್ ಸ್ಟೆಪ್ ಹಾಗೂ ಅತ್ಯುತ್ತಮ ನೃತ್ಯ ಸಂಯೋಜನೆಯು ನೆಟ್ಟಿಗರ ಗಮನ ಸೆಳೆಯುತ್ತಿದೆ. ಅರುಣರಾಜ ಕಾಮರಾಜ್, ನಿರಂಜನಾ ರಮಣ್, ಅಪರ್ಣಾ ಹರಿಕಮಾರ್ ಮತ್ತು ದೀಪ್ತಿ ಸುರೇಶ್ ಅವರೊಂದಿಗೆ ಸೇರಿ ಸಾಹಿತ್ಯವನ್ನು ಬರೆದಿದ್ದಾರೆ. ಶಮ್ನಾ ಕಾಸಿಮ್ ಮಸ್ತ್ ಹೆಜ್ಜೆ ಹಾಕಿದ್ದಾರೆ. ಇದರಲ್ಲಿ ರಜನಿಕಾಂತ್ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸಿರುವ ‘ಜೈಲರ್ 2’ ಚಿತ್ರ  ಅಕ್ಟೋಬರ್ 15 ರಂದು ತೆರೆಗೆ ಬರಲಿದೆ. ಈ ಸಿನಿಮಾ 2023ರಲ್ಲಿ ಬಿಡುಗಡೆಯಾದ ‘ಜೈಲರ್’ ಚಿತ್ರದ ಮುಂದುವರಿದ  ಭಾಗವಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!