ಗುರುದತ್ ಗಾಣಿಗ ನಿರ್ದೇಶನದ ‘ಕರಾವಳಿ’ ಸಿನಿಮಾ ಆಗಸ್ಟ್ 28ರಿಂದ ‘ಕನ್ನಡ ಜೀ5’ನಲ್ಲಿ ಡಿಜಿಟಲ್ ಪ್ರಸಾರ ಆರಂಭಿಸಲಿದೆ.
ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಟ ಹಾಗೂ ನಿರ್ದೇಶಕ ರಾಜ್ ಬಿ. ಶೆಟ್ಟಿ ತಮ್ಮ ವಿಭಿನ್ನ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ. ಹಾಸ್ಯ ನಟ ಮಿತ್ರ ಗಂಭೀರ ಪಾತ್ರ ನಿರ್ವಹಿಸಿದ್ದಾರೆ.
ಕರಾವಳಿಯ ಸಂಸ್ಕೃತಿ, ಆಚಾರ-ವಿಚಾರ ಹಾಗೂ ಜಾನಪದ ಕ್ರೀಡೆ ಕಂಬಳದ ಹಿನ್ನೆಲೆಯಲ್ಲೇ ರೂಪುಗೊಂಡಿರುವ ‘ಕರಾವಳಿ’ ಸಿನಿಮಾ ಥಿಯೇಟರ್ ಬಿಡುಗಡೆಯ ಮುನ್ನ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಪ್ರಜ್ವಲ್ ದೇವರಾಜ್ ಹಾಗೂ ನಿರ್ದೇಶಕ ಗುರುದತ್ ಗಾಣಿಗ ನಡುವೆ ಸಂಭಾವನೆ ಹಾಗೂ ಡಬ್ಬಿಂಗ್ ವಿಚಾರವಾಗಿ ಭಿನ್ನಾಭಿಪ್ರಾಯಗಳು ಬಹಿರಂಗವಾಗಿದ್ದವು. ಈ ವಿಚಾರವಾಗಿ ಎರಡೂ ಕಡೆಯಿಂದ ಪರಸ್ಪರ ಆರೋಪ-ಪ್ರತ್ಯಾರೋಪಗಳು ನಡೆದಿದ್ದವು.
ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಜ್ವಲ್ ಅಭಿಮಾನಿಗಳ ಗಲಾಟೆ ನಡೆದಿದ್ದರಿಂದ ಸಿನಿಮಾ ಸುತ್ತಲಿನ ವಿವಾದ ಮತ್ತಷ್ಟು ತೀವ್ರಗೊಂಡಿತ್ತು. ಚಿತ್ರಮಂದಿರದ ಪ್ರಯಾಣ ಮುಗಿಸಿರುವ ‘ಕರಾವಳಿ’ ಡಿಜಿಟಲ್ ವೇದಿಕೆಗೆ ಎಂಟ್ರಿ ಕೊಡುತ್ತಿದೆ.
ಕರಾವಳಿ ಭಾಗದ ಮಣ್ಣಿನ ಕಥೆ, ಪ್ರಾಣಿ -ಮನುಷ್ಯನ ನಡುವಿನ ಅವಿನಾಭಾವ ಸಂಬಂಧ, ಪ್ರತಿಷ್ಠೆಯ ಜಿದ್ದಾಜಿದ್ದನ್ನು ಕೇಂದ್ರವಾಗಿಟ್ಟುಕೊಂಡು ಸಿನಿಮಾ ರೂಪುಗೊಂಡಿದೆ.
—-





Be the first to comment