”ನಮ್ಮ ನಡುವೆ ಯಾವುದೇ ಮನಸ್ತಾಪ ಇಲ್ಲ. ಮನಸ್ತಾಪ ಇದೆ ಅಂತ ಹೇಳಿದವರನ್ನು ಕರೆದುಕೊಂಡು ಬಂದು ನನ್ನ ಮುಂದೆ ನಿಲ್ಲಿಸಿ. ಅವರ ಜೊತೆ ಮಾತನಾಡೋಣ” ಎಂದು ತಮ್ಮ ಹಾಗೂ ದರ್ಶನ್ ಕುಟುಂಬದ ನಡುವೆ ಮನಸ್ತಾಪವಿದೆ ಎಂಬ ವದಂತಿಗಳಿಗೆ ಧನ್ವೀರ್ ಗೌಡ ಖಡಕ್ ಆಗಿ ಹೇಳಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಭೇಟಿಯಾಗಲು ನಟ ಧನ್ವೀರ್ ಗೌಡ, ಮೀನಾ ತೂಗುದೀಪ, ವಿಜಯಲಕ್ಷ್ಮಿ ದರ್ಶನ್ ಅವರು ಒಟ್ಟಿಗೆ ಆಗಮಿಸಿದ್ದರು. ದರ್ಶನ್ ಅವರನ್ನು ಭೇಟಿ ಮಾಡಿದ ಬಳಿಕ ಧನ್ವೀರ್ ಗೌಡ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
”ದರ್ಶನ್ ಅವರನ್ನು ಭೇಟಿ ಮಾಡಿದ್ದೇನೆ. ಅವರು ಆರಾಮಾಗಿದ್ದಾರೆ. ಮನಸ್ತಾಪ ಇದ್ದಿದ್ರೆ ನಾನು ಯಾಕೆ ಭೇಟಿ ಮಾಡೋಕೆ ಬರ್ತಾ ಇದ್ದೆ?” ಎಂದು ಧನ್ವೀರ್ ಗೌಡ ಪ್ರಶ್ನಿಸಿದ್ದಾರೆ”.
ಈ ಹಿಂದೆ ಧನ್ವೀರ್ ಗೌಡ ಹಾಗೂ ವಿಜಯಲಕ್ಷ್ಮಿ ದರ್ಶನ್ ಅವರು ಒಟ್ಟಿಗೆ ಪರಪ್ಪನ ಅಗ್ರಹಾರ ಜೈಲಿಗೆ ಬಂದು ದರ್ಶನ್ ಅವರನ್ನು ಭೇಟಿ ಮಾಡುತ್ತಿದ್ದರು. ಬಳಿಕ ಇಬ್ಬರೂ ಪ್ರತ್ಯೇಕವಾಗಿ ಜೈಲಿಗೆ ಭೇಟಿ ನೀಡಲು ಆರಂಭಿಸಿದ್ದರು. ಇದರಿಂದಾಗಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ ಎಂಬ ವದಂತಿಗಳು ಹರಿದಾಡಿದ್ದವು.
—-





Be the first to comment