ಗಲ್ಫ್ ಕಂಟ್ರಿ

ಗಲ್ಫ್ ಕಂಟ್ರಿಯಲ್ಲಿ ಕನ್ನಡದ ‘ಕರಾವಳಿ’ ಹವಾ!

ಗುರುದತ್ ಗಾಣಿಗ ನಿರ್ದೇಶನದ ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ ಶೆಟ್ಟಿ ನಟನೆಯ ‘ಕರಾವಳಿ’ ಸಿನಿಮಾ ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕಂಬಳದ ಅದ್ಭುತ ಪ್ರಪಂಚವನ್ನು ಕಣ್ತುಂಬಿಕೊಂಡ ಕನ್ನಡ ಸಿನಿಪ್ರಿಯರು ಕರಾವಳಿ ಸಿನಿಮಾಗೆ ಭರಪೂರ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಬಿಡುಗಡೆಯಾದ ಒಂದೇ ವಾರದಲ್ಲಿ ಕರಾವಳಿ ಸಿನಿಮಾ ಗಲ್ಫ್ ಕಂಟ್ರಿಗೆ ಎಂಟ್ರಿ ಕೊಡುತ್ತಿದೆ..

ಶುಕ್ರವಾರದಿಂದ ದುಬೈ ಹಾಗೂ ಅಬುದಾಬಿ ಸಿನಿಮಾ ಅಭಿಮಾನಿಗಳನ್ನು ರಂಜಿಸಲಿದೆ ಕರಾವಳಿ ಸಿನಿಮಾ. ಈಗಾಗಲೇ ಸರ್ವಂಮಯ, ಜನನಾಯಗನ್, ಬಾಲನ್, ಕರಪ್ಪು, ಪೆದ್ದಿ ಸೇರಿದಂತೆ ಸೌತ್ ನ ಬಹುತೇಕ ಹಿಟ್ ಸಿನಿಮಾಗಳನ್ನ ರಿಲೀಸ್ ಮಾಡಿದ್ದ ಪ್ರಖ್ಯಾತ ಫಾರಾಸ್ ಸಿನಿಮಾಸ್ ಕರಾವಳಿ ಸಿನಿಮಾದ ಓವರ್ ಸೀಸ್ ರೈಟ್ಸ್ ಖರೀದಿ ಮಾಡಿ ರಿಲೀಸ್ ಮಾಡುತ್ತಿರುವುದು ವಿಶೇಷ..

ಜುಲೈ 24ಕ್ಕೆ ರಿಲೀಸ್ ಆದ ಕರಾವಳಿ 175 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. ಆದರೀಗ ಸಿನಿಮಾಗೆ ಸಿಗುತ್ತಿರುವ ಅದ್ಭುತ ಪ್ರತಿಕ್ರಿಯೆ ಹಾಗೂ ಹೌಸ್ ಫುಲ್ ಪ್ರದರ್ಶನ ಕಂಡು ಮತ್ತಷ್ಟು ಸ್ಟ್ರೀನಿಂಗ್ ಜಾಸ್ತಿ ಮಾಡಲಾಗಿದೆ.

ಮೊದಲ ದಿನ ಕರಾವಳಿ 1 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನುವ ಮಾತು ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಇದುವರೆಗೂ ಕರಾವಳಿ 6 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಕನ್ನಡ ಸಿನಿಮಾರಂಗದ ಈಗಿನ ಪರಿಸ್ಥಿತಿಗೆ ಇದು ಅತೀ ದೊಡ್ಡ ಕಲೆಕ್ಷನ್ ಅಂದರೆ ತಪ್ಪಾಗಲ್ಲ. ಈ ವರ್ಷ ಕನ್ನಡದಲ್ಲಿ ರಿಲೀಸ್ ಆದ ಸಿನಿಮಾಗಳಲ್ಲಿಯೇ ಉತ್ತಮ ಓಪನಿಂಗ್ ಪಡೆದುಕೊಂಡ ಚಿತ್ರಗಳಲ್ಲಿ ಒಂದಾಗಿದೆ.. ಕರಾವಳಿ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದ್ದು ಹೆಚ್ಚು ಕಲೆಕ್ಷನ್ ಮಾಡುತ್ತ ಬಾಕ್ಸ್ ಆಫೀಸ್‌ನಲ್ಲಿ ಮುನ್ನುಗ್ಗುತ್ತಿದೆ.

ಕರಾವಳಿ ರಿಲೀಸ್ ಆದ 6ನೇ ದಿನಕ್ಕೆ 5 ಲಕ್ಷಕ್ಕೂ ಹೆಚ್ಚು ಜನರು ಸಿನಿಮಾ ವೀಕ್ಷಣೆ ಮಾಡಿದ್ದಾರೆ . ರಾಜ್ಯದಲ್ಲಿ ಸಿನಿಮಾ ಸಿಕ್ತಿರುವ ಪ್ರತಿಕ್ರಿಯೆ ನೋಡಿ ಪರಭಾಷೆಯಲ್ಲೂ ಬೇಡಿಕೆ ಹೆಚ್ಚಾಗಿದೆ ಎನ್ನುವ ಮಾತು ಕೇಳಿಬಂದಿದೆ. ಮುಂದಿನ ವಾರ ಪಕ್ಕದ ಮಲಯಾಳಂ, ತೆಲುಗು ಹಾಗೂ ತಮಿಳಿನಲ್ಲೂ ರಿಲೀಸ್ ಸಾಧ್ಯತೆ ಹೆಚ್ಚಾಗಿದೆ.

ಗಲ್ಫ್ ಕಂಟ್ರಿ

Be the first to comment

Leave a Reply

Your email address will not be published. Required fields are marked *

Translate »
error: Content is protected !!