ದೇಶದ ಎಲ್ಲ ಚಿತ್ರರಂಗಗಳನ್ನು ಕಾಡುತ್ತಿರುವ ಸಿನಿಮಾ ಪೈರಸಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.
ಈ ಪೋರ್ಟಲ್ ಮೂಲಕ ನಿರ್ಮಾಪಕರು ಮತ್ತು ಚಿತ್ರರಂಗದವರು ಪೈರಸಿ ಸಂಬಂಧಿತ ದೂರುಗಳನ್ನು ಸುಲಭವಾಗಿ ದಾಖಲಿಸಲು ಸಾಧ್ಯವಾಗಲಿದೆ. ದೂರುಗಳ ಆಧಾರದ ಮೇಲೆ ಕಾನೂನು ಕ್ರಮಗಳನ್ನು ವೇಗವಾಗಿ ಕೈಗೊಳ್ಳಲು ಇದು ನೆರವಾಗಲಿದೆ.
‘ಸಿನಿಮಾಗಳನ್ನು ಅಕ್ರಮವಾಗಿ ಹಂಚಿಕೆ ಮಾಡುವ ಜಾಲಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಪ್ರತ್ಯೇಕ ಆ್ಯಂಟಿ ಪೈರಸಿ ಪೋರ್ಟಲ್ ಸಿದ್ಧಪಡಿಸುತ್ತಿದೆ. ಈಗಾಗಲೇ ಸಾವಿರಾರು ಅಕ್ರಮ ಲಿಂಕ್ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ’ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ.
ಈವರೆಗೆ ಒಟ್ಟು 7,393 ಪೈರಸಿ ಲಿಂಕ್ಗಳನ್ನು ತೆಗೆದುಹಾಕಲಾಗಿದೆ. ಇದರಲ್ಲಿ 1,263 ವೆಬ್ಸೈಟ್ಗಳು ಹಾಗೂ 4,996 ಟೆಲಿಗ್ರಾಂ ಚಾನೆಲ್ಗಳು ಸೇರಿವೆ. ಪೈರಸಿ ಜಾಲದ ವಿರುದ್ಧ ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆ ಚುರುಕಾಗಿದೆ. ‘ಐಬೊಮ್ಮ’ ಪೈರಸಿ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.
ನಿರ್ಮಾಪಕರು ವಿದೇಶಗಳಲ್ಲಿ, ವಿಶೇಷವಾಗಿ ಗಲ್ಫ್ ರಾಷ್ಟ್ರಗಳಲ್ಲಿ ಪ್ರದರ್ಶನಗೊಳ್ಳುವ ಸಿನಿಮಾ ಪ್ರಿಂಟ್ಗಳಿಂದ ಪೈರಸಿ ಹರಡುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಕೇಂದ್ರದ ಕ್ರಮಗಳು ಚಿತ್ರರಂಗಕ್ಕೆ ಭರವಸೆ ಮೂಡಿಸಿವೆ.
—





Be the first to comment