ಬಾಲಿವುಡ್ ನಟಿ ಹಾಗೂ ಐಪಿಎಲ್ನ ಪಂಜಾಬ್ ಕಿಂಗ್ಸ್ ತಂಡದ ಸಹ-ಮಾಲಕಿ ಪ್ರೀತಿ ಜಿಂಟಾ ತಮ್ಮ ಹೆಸರಿನಲ್ಲಿ ಹರಿದಾಡುತ್ತಿರುವ ಡೀಪ್ಫೇಕ್ ವಿಡಿಯೋಗಳು ಮತ್ತು ಮಾರ್ಫ್ ಮಾಡಿದ ಚಿತ್ರಗಳ ವಿರುದ್ಧ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಫೇಸ್ಬುಕ್, ಇನ್ಸ್ಟಾಗ್ರಾಂ, ಯೂಟ್ಯೂಬ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳ ಮೂಲಕ ಎಐ ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ಡೀಪ್ಫೇಕ್ ವಿಡಿಯೋಗಳು ಹಾಗೂ ಮಾರ್ಫ್ ಮಾಡಿದ ಚಿತ್ರಗಳನ್ನು ವ್ಯಾಪಕವಾಗಿ ಹಂಚಲಾಗುತ್ತಿದೆ. ಇದರಿಂದ ತಮ್ಮ ವೈಯಕ್ತಿಕ ಘನತೆ, ಗೌರವ ಮತ್ತು ಸಾರ್ವಜನಿಕ ಚಿತ್ರಣಕ್ಕೆ ಧಕ್ಕೆಯಾಗಿದೆ ಎಂದು ಪ್ರೀತಿ ಜಿಂಟಾ ದೂರಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ವಿಡಿಯೋಗಳು ಮತ್ತು ಚಿತ್ರಗಳನ್ನು ಹರಿಬಿಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
ಪ್ರಕರಣದಲ್ಲಿ ಗೂಗಲ್, ಮೆಟಾ ಸೇರಿದಂತೆ ಹಲವು ಡಿಜಿಟಲ್ ವೇದಿಕೆಗಳನ್ನು ಪ್ರತಿವಾದಿಗಳನ್ನಾಗಿ ಸೇರಿಸಲಾಗಿದ್ದು, ನ್ಯಾಯಾಲಯವು ಸಂಬಂಧಿತ ಕಂಪನಿಗಳಿಗೆ ನೋಟಿಸ್ ಜಾರಿಗೊಳಿಸಿತ್ತು. ವಿಚಾರಣೆ ವೇಳೆ ಕಂಪನಿಗಳ ಪರ ವಕೀಲರು ಪ್ರೀತಿ ಜಿಂಟಾ ಸೂಚಿಸಿರುವ ಲಿಂಕ್ಗಳು, ವಿಡಿಯೋಗಳು ಮತ್ತು ಚಿತ್ರಗಳನ್ನು ತೆಗೆದು ಹಾಕುವ ಕ್ರಮ ಕೈಗೊಳ್ಳುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಬಾಂಬೆ ಹೈಕೋರ್ಟ್ಡೀ ಪ್ಫೇಕ್ ಹಾಗೂ ಎಐ ಸೃಷ್ಟಿಸಿದ ನಕಲಿ ವಿಷಯಗಳು ವೇದಿಕೆಗಳಲ್ಲಿ ಲಭ್ಯವಿದ್ದರೂ, ದೂರು ಬಂದ ನಂತರವೇ ಕ್ರಮ ಕೈಗೊಳ್ಳುವುದೇಕೆ? ಇಂತಹ ನಕಲಿ ಪೋಸ್ಟ್ಗಳನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚಿ ತೆಗೆದುಹಾಕುವ ವ್ಯವಸ್ಥೆ ಇಲ್ಲವೇ ಎಂದು ಪ್ರಶ್ನಿಸಿದೆ. ನಕಲಿ ವಿಷಯಗಳನ್ನು ತೆಗೆದುಹಾಕುವ ನೆಪದಲ್ಲಿ ನೈಜ ಮತ್ತು ಕಾನೂನುಬದ್ಧ ವಿಷಯಗಳು ಅಳಿಸಿಹೋಗದಂತೆ ಎಚ್ಚರಿಕೆ ವಹಿಸಬೇಕೆಂದು ಸೂಚನೆ ನೀಡಿದೆ.
—-





Be the first to comment